Site icon Vistara News

Gujarat Election | ಪತ್ರಕರ್ತ ಇಸುದಾನ್ ಗಢವಿ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ

Isadun Gadhvi

ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆ (Gujarat Election) ಗೆಲ್ಲಲು ಫುಲ್ ತಾಲೀಮು ನಡೆಸಿರುವ ಆಮ್ ಆದ್ಮಿ ಪಾರ್ಟಿ (ಆಪ್), ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ಪತ್ರಕರ್ತ ಇಸುದಾನ್ ಗಢವಿ (Isudan Gadhvi) ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅರವಿಂದ್ ಕೇಜ್ರಿವಾಲ್ ಅವರು ಹೆಸರಿಸಿದ್ದಾರೆ. ಈ ಹಿಂದೆ ಪಂಜಾಬ್ ಚುನಾವಣೆ ವೇಳೆಯಲ್ಲೂ ಅವರು ಎಲೆಕ್ಷನ್‌ಗೆ ಮುಂಚೆಯೇ ಸಿಎಂ ಅಭ್ಯರ್ಥಿ ಹೆಸರನ್ನು ಸೂಚಿಸುವಂತೆ ಜನರಿಗೆ ಕರೆ ನೀಡಿದ್ದರು. ಗುಜರಾತ್‌‌ನಲ್ಲೂ ಅದೇ ತಂತ್ರವನ್ನು ಮುಂದುವರಿಸಿದ್ದು, ಆಪ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿಯು ಯಾರಾಗಬೇಕೆಂದು ಸೂಚಿಸುವಂತೆ ಕೇಳಿಕೊಂಡಿದ್ದರು.

ಗುಜರಾತ್ ವಿಧಾನಸಭೆ ಚುನಾವಣೆ(Gujarat Election) ವೇಳಾ ಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಗುರುವಾರ ಪ್ರಕಟಿಸಿದೆ. ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲನೆ ಹಂತದ ಮತದಾನ ಡಿಸೆಂಬರ್ 1 ಹಾಗೂ ಎರಡನೇ ಹಂತದ ಮತದಾನ ಡಿ.5 ರಂದು ನಡೆಯಲಿದ್ದರೆ, ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ತಿಳಿಸಿದೆ. ನವೆಂಬರ್ 5 ಮತ್ತು 10ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ.

ಪತ್ರಕರ್ತರಾಗಿ ಗಢವಿ ಗುಜರಾತ್‌ನಲ್ಲಿ ಪ್ರಸಿದ್ಧ ವ್ಯಕ್ತಿಯಾಗಿದ್ದಾರೆ. ವಿಟಿವಿ ನ್ಯೂಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅವರು ಮಹಾಮಂಥನ ಎಂಬ ಟಾಕ್ ಶೋ ಮಾಡುತ್ತಿದ್ದರು. ಗುಜರಾತ್‌ನಲ್ಲಿ ಈ ಶೋ ತುಂಬ ಜನಪ್ರಿಯವಾಗಿತ್ತು. ಆ್ಯಂಕರ್ ಮತ್ತು ಪತ್ರಕರ್ತನಾಗಿ ಗಢವಿ ಜನರ ವಿಶ್ವಾಸಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇಸುದಾನ್ ಗಢವಿ ಜತೆಗೆ, ಪಾಟೀದಾರ್ ಗೋಪಾಲ್ ಇಟಾಲಿಯ ಕೂಡ ತೀವ್ರ ಸ್ಪರ್ಧೆ ನಡೆಸಿದ್ದರು. ಅಂತಿಮವಾಗಿ ಗುಜರಾತ್ ಜನರು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗಢವಿ ಅವರನ್ನು ಆಯ್ಕೆ ಮಾಡಿದ್ದಾರೆ. ಇಟಾಲಿಯ ಅವರು ಪಾಟಿದಾರ್ ಆಂದೋಲನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಇದನ್ನೂ ಓದಿ | Gujarat Election | ಗುಜರಾತ್ ವಿಧಾನಸಭೆಗೆ 2 ಹಂತದಲ್ಲಿ ಎಲೆಕ್ಷನ್! ಡಿ.1, 5ಕ್ಕೆ ವೋಟಿಂಗ್, 8ಕ್ಕೆ ಫಲಿತಾಂಶ

Exit mobile version