Site icon Vistara News

Gujarat Election | ಎಕೆ-56 ರೈಫಲ್‌ನಿಂದ ಇಬ್ಬರು ಸಹ ಯೋಧರನ್ನು ಕೊಂದ ಅರೆಸೇನಾ ಪಡೆ ಯೋಧ

Paramilitary Jawan @ Gujarat Election

ಅಹಮದಾಬಾದ್: ಚುನಾವಣಾ ಭದ್ರತಾ ಕರ್ತವ್ಯಕ್ಕೆ ನಿಯೋಜಿತನಾಗಿದ್ದ ಅರೆಸೇನಾ ಪಡೆ (Paramilitary Jawan) ಯೋಧನೊಬ್ಬ ಎಕೆ-56 ರೈಫಲ್‌ನಿಂದ ಗುಂಡು ಹಾರಿಸಿ, ತನ್ನ ಇಬ್ಬರು ಸಹ ಯೋಧರನ್ನು ಹತ್ಯೆ ಮಾಡಿದ ಘಟನೆ ಗುಜರಾತ್‌ನ ಪೋರಬಂದರ್ ಸಮೀಪದ ನವೀ ಬಂದರ್ ಹಳ್ಳಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಇನ್ನಿಬ್ಬರು ಯೋಧರಿಗೆ ಗಾಯಗಳಾಗಿವೆ. ಡಿಸೆಂಬರ್ 1ರಂದು ಗುಜರಾತ್‌ ವಿಧಾನಸಭೆ ಚುನಾವಣೆಗೆ (Gujarat Election) ಮತದಾನ ನಡೆಯಲಿದ್ದು, ಅರೆಸೇನಾ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಈ ಘಟನೆ ಸಂಭವಿಸಿದಾಗ ಅರೆ ಸೇನಾ ಪಡೆ ಯೋಧರು ಕರ್ತವ್ಯ ನಿರ್ವಹಿಸುತ್ತಿರಲಿಲ್ಲ. ಯೋಧರು ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಯೋಧನೊಬ್ಬ ತನ್ನ ಎಕೆ-56(AK-56) ರೈಫಲ್‌ನಿಂದ ಗುಂಡು ಹಾರಿಸಿದ್ದಾನೆ. ಆಗ ಇಬ್ಬರು ಯೋಧರು ಮೃತಪಟ್ಟರು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಇವರೆಲ್ಲರೂ ಮಣಿಪುರದ ಇಂಡಿಯಾ ರಿಸರ್ವ್ ಬಟಾಲಿಯನ್‌ಗೆ ಸೇರಿದವರಾಗಿದ್ದಾರೆ. ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ(CRPF) ಭಾಗವಾಗಿ ಅವರನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಅಶೋಕ್ ಕುಮಾರ್ ಅವರು ತಿಳಿಸಿದ್ದಾರೆ.

ಅರೆಸೇನಾ ಪಡೆಯ ಯೋಧರ ನಡುವೆ ಸಂಘರ್ಷಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಯೋಧರನ್ನು ಪೋರಬಂದರ್‌ನಿಂದ 150 ಕಿ.ಮೀ ದೂರದ ಜಾಮನಗರದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ | CISF ಯೋಧನಿಂದ ಗುಂಡಿನ ದಾಳಿ, ಮೇಲಧಿಕಾರಿ ಸಾವು, ಹಲವರಿಗೆ ಗಾಯ

Exit mobile version