Site icon Vistara News

Gujarat Election | ವೋಟ್ ಮಾಡಿದ ಪ್ರಧಾನಿ ಮೋದಿ ತಾಯಿ, ಶತಾಯುಷಿ ಹೀರಾಬೆನ್

Heeraben modi @ Gujarat election

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಅವರು ಗಾಂಧಿನಗರದ ಸಮೀಪದ ರಾಯ್ಸನ ಹಳ್ಳಿಯಲ್ಲಿ ಮತದಾನ ಮಾಡಿದರು. ಗುಜರಾತ್ ವಿಧಾನಸಭೆ ಚುನಾವಣೆಗೆ (Gujarat Election) ಕೊನೆಯ ಹಂತದ ಮತದಾನ ನಡೆಯುತ್ತಿದ್ದು, ಸೋಮವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮತವನ್ನು ಚಲಾಯಿಸಿದ್ದರು.

ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಅವರು ತಮ್ಮ ಕಿರಿಯ ಮಗ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ಸಮೀಪದ ರಾಯ್ಸನ ಹಳ್ಳಿಯಲ್ಲಿ ವಾಸವಾಗಿದ್ದಾರೆ. ತಮ್ಮ ಕಿರಿಯ ಪುತ್ರ ಪಂಕಜ್ ಅವರ ನೆರವಿನೊಂದಿಗೆ ವ್ಹೀಲ್‌ ಚೇರ್‌ನಲ್ಲಿ ಮತದಾನ ಕೇಂದ್ರಕ್ಕೆ ಆಗಮಿಸಿ ಹೀರಾಬೆನ್ ಅವರು ತಮ್ಮ ಮತವನ್ನು ಚಲಾಯಿಸಿದರು. ಇದೇ ವೇಳೆ, ಕುಟುಂಬದ ಇತರ ಸದಸ್ಯರೂ ಮತದಾನ ಮಾಡಿದರು.

ಭಾನುವಾರ ಸಂಜೆ ಪ್ರಧಾನಿ ಮೋದಿ ಅವರು ತಮ್ಮ ಮನೆಗೆ ತೆರಳಿ ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು. ಗುಜರಾತ್‌ನಲ್ಲಿ ಎರಡನೇ ಹಂತದ ಮತದಾನ ಜಾರಿಯಲ್ಲಿದ್ದು, ಒಟ್ಟು 93 ಕ್ಷೇತ್ರಗಳಿಗೆ ಈ ಚುನಾವಣೆ ನಡೆಯುತ್ತಿದೆ.

ಇದನ್ನೂ ಓದಿ | Gujarat Election | ಅಹಮದಾಬಾದ್‌ನಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

Exit mobile version