ಗಾಂಧಿನಗರ: ಪಾಟಿದಾರ್ ಆಂದೋಲನದ ಮೂಲಕ ನಾಯಕನಾಗಿ ಹೊರ ಹೊಮ್ಮಿದ ಹಾರ್ದಿಕ್ ಪಟೇಲ್ ಅವರು ವೀರಂಗಾಮ್ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದಾರೆ. ಆರಂಭಿಕ ಟ್ರೆಂಡ್‌ನಲ್ಲಿ ಹಿನ್ನಡೆಯನ್ನು ಅನುಭವಿಸಿದ್ದ, ಅಂತಿಮವಾಗಿ ಗೆಲುವಿನ ನಗೆ ಬೀರಿದ್ದಾರೆ(Gujarat Election Result).
ಹಾರ್ದಿಕ್ ಪಟೇಲ್ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದರು. ಆದರೆ, ಕಾಂಗ್ರೆಸ್ ನಾಯಕತ್ವ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಕಾರಣ ನೀಡಿ, ಇತ್ತೀಚೆಗಷ್ಟೇ ಅವರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದರು. 2017ರ ಚುನಾವಣೆ ಪೂರ್ವ ಕಾಂಗ್ರೆಸ್ ಸೇರಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ 77 ಸೀಟುಗಳನ್ನು ಗೆಲ್ಲಲು ಸಾಧ್ಯವಾಗಿತ್ತು. ಆದರೆ, 2022ರಲ್ಲಿ ಅವರು ಬಿಜೆಪಿಯನ್ನು ಸೇರಿಕೊಂಡರು. ಅದರ ಪರಿಣಾಮವನ್ನು ಫಲಿತಾಂಶದಲ್ಲಿ ಕಾಣಬಹುದು. ಬಿಜೆಪಿ ದಾಖಲೆಯ ಗೆಲುವನ್ನು ಸಾಧಿಸುವತ್ತ ದಾಪುಗಾಲು ಹಾಕಿದೆ.
ಕಳೆದ ಜೂನ್ ತಿಂಗಳಲ್ಲಿ ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್‌ನಿಂದ ಬಿಜೆಪಿ ಪಕ್ಷಾಂತರ ಮಾಡಿದ್ದರು. ವೀರಂಗಾಮ್ ಕ್ಷೇತ್ರದಲ್ಲಿ ಹಾರ್ದಿಕ್ ಪಟೇಲ್ ಅವರು ಕಾಂಗ್ರೆಸ್‌ನ ಹಾಲಿ ಶಾಸಕ ಲಾಖಾ ಭಾರವಾಡ್ ವಿರುದ್ಧ ಸ್ಪರ್ಧಿಸಿದ್ದರು. ಭಾರವಾಡ್ ಅವರು ಎರಡು ಅವಧಿಗೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಆಪ್‌ನಿಂದ ಅಮರ ಸಿನ್ಹ ಠಾಕೂರ್ ಅವರು ಸ್ಪರ್ಧೆಯಲ್ಲಿದ್ದರು.
ಇದನ್ನೂ ಓದಿ | Gujarat Election Results | ಗುಜರಾತ್‌ನಲ್ಲಿ ಮೋದಿ ಸುನಾಮಿ, ಸತತ 7ನೇ ಬಾರಿಗೆ ಅಧಿಕಾರದತ್ತ ಬಿಜೆಪಿ, ಕಾಂಗ್ರೆಸ್ ಧೂಳೀಪಟ