ನವದೆಹಲಿ: ತಮ್ಮ ನೈಜ ಗುರುತು ಮುಚ್ಚಿಟ್ಟು ಹಿಂದೂ ಹುಡುಗಿಯರನ್ನು ಬಲೆಗೆ ಹಾಕಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಂಘವಿ ಹೇಳಿದ್ದಾರೆ. ಗುಜರಾತ್‌ನಲ್ಲಿ ಮೋರ್ಬಿಯಲ್ಲಿ ಮಾತನಾಡುತ್ತಿದ್ದ ಹರ್ಷ್ ಸಂಘವಿ (Harsh Sanghavi) ಅವರು, ಯಾರನ್ನಾದರೂ ಪ್ರೀತಿಸುವುದು ತಪ್ಪಲ್ಲ, ಅಪರಾಧವೂ ಅಲ್ಲ. ಆದರೆ, ಪ್ರೀತಿಯ ಹೆಸರಿನಲ್ಲಿ ಪಿತೂರಿ ಮಾಡುವವರನ್ನು ಸರ್ಕಾರ ಎಂದಿಗೂ ಸುಮ್ಮನೆ ಬಿಡುವುದಿಲ್ಲ. ಲವ್ ಜಿಹಾದಿಗಳ (Love Jihad) ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಲವ್ ಜಿಹಾದ್ ಬಗ್ಗೆ ಯಾವುದೇ ಕುಟುಂಬವು ಪೊಲೀಸ್ ಠಾಣೆಗೆ ದೂರು ತಂದರೆ, ಅಂಥ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಹೆಣ್ಣು ಮಕ್ಕಳನ್ನು ನರಕಕ್ಕೆ ತಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಅಂಥವರ ವಿರುದ್ಧ ಪೊಲೀಸರು ಉಗ್ರ ಕ್ರಮ ಕೈಗೊಳ್ಳಲಿದ್ದಾರೆಂದು ಗುಜರಾತ್ ಗೃಹ ಸಚಿವ ಹರ್ಷ್ ಸಂಘವಿ ತಿಳಿಸಿದ್ದಾರೆ.
ಪ್ರೀತಿಸುವುದು ಅಪರಾಧವಲ್ಲ. ಯಾರ ಪ್ರೀತಿಯ ಹೆಸರಿನಲ್ಲಿ ಪಿತೂರಿ ಮಾಡಿದರೆ ಸುಮ್ಮನೆ ಬಿಡುವುದಿಲ್ಲ. ಒಂದು ವೇಳೆ, ಸಲೀಮ್ ಎಂಬಾತ ಸುರೇಶ್ ಹೆಸರಿನಲ್ಲಿ ನಮ್ಮ ಮುಗ್ದ ಹೆಣ್ಣು ಮಕ್ಕಳನ್ನು ಬಲೆಗೆ ಕೆಡವಿಕೊಂಡರೆ… ಕಿವಿಕೊಟ್ಟು ಕೇಳಿ, ಅಂಥ ಮುಗ್ದ ಹುಡುಗಿಯರ ಅಣ್ಣನಾಗಿ ನಾನಿದ್ದೇನೆ ಎಂದು ಲವ್ ಜಿಹಾದಿಗಳಿಗೆ ಎಚ್ಚರಿಕೆ ನೀಡಿದರು. ಇದೇ ವೇಳೆ, ಸುರೇಶ್ ಎಂಬಾತ ಸಲೀಮ್ ಹೆಸರಿನಲ್ಲಿ ಪ್ರೀತಿಯ ನಾಟಕವಾಡಿದರೂ ತಪ್ಪೇ ಎಂದು ಸಚಿವರು ಹೇಳಿದರು.
ದೇಶದ ಕುತೂಹಲಕರ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.