Site icon Vistara News

ಹಿಂದುಗಳನ್ನು ನಾಯಿ ಜತೆ ಹೋಲಿಸಿದ ಇಸ್ಲಾಂ ಬೋಧಕ ಮುಫ್ತಿ ಸಲ್ಮಾನ್‌ ಅಝಾರಿ ಬಂಧನ!

Mufti Salman Azhari

Gujarat Police detain cleric Salman Azhari in hate speech case, supporters protest

ಮುಂಬೈ: ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಗುಜರಾತ್‌ ಭಯೋತ್ಪಾದನೆ ನಿಗ್ರಹ ದಳದ (Gujarat ATS) ಅಧಿಕಾರಿಗಳು ಮುಂಬೈನಲ್ಲಿ ಇಸ್ಲಾಮಿಕ್‌ ಬೋಧಕ ಮುಫ್ತಿ ಸಲ್ಮಾನ್‌ ಅಝಾರಿ (Mufti Salman Azhari) ಎಂಬುವರನ್ನು ಬಂಧಿಸಿದ್ದಾರೆ. ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದುಗಳನ್ನು ನಾಯಿಗೆ ಹೋಲಿಸಿದ (Hate Speech) ಬಳಿಕ ವಿವಾದ ಉಂಟಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಸ್‌ ಅಧಿಕಾರಿಗಳು ಮುಫ್ತಿ ಸಲ್ಮಾನ್‌ ಅಝಾರಿ ಅವರನ್ನು ಮುಂಬೈನಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ (ಫೆಬ್ರವರಿ 4) ಗುಜರಾತ್‌ ಎಟಿಎಸ್‌ ಅಧಿಕಾರಿಗಳು ಮುಫ್ತಿ ಸಲ್ಮಾನ್‌ ಅಝಾರಿಯನ್ನು ಬಂಧಿಸಿ, ಘಟ್ಕೋಪರ್‌ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಗುಜರಾತ್‌ನಲ್ಲಿ ಕೆಲ ದಿನಗಳ ಹಿಂದೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಇವರು, ದ್ವೇಷಭಾಷಣ ಮಾಡಿದ್ದರು. “ಈಗ ನಾಯಿಗಳ ಕಾಲ ನಡೆಯುತ್ತಿದೆ. ಮುಂದೆ ನಮಗೂ ಒಂದು ಕಾಲ ಬರುತ್ತದೆ” ಎಂಬುದಾಗಿ ಹೇಳಿದ್ದರು ಎಂದು ತಿಳಿದುಬಂದಿದೆ. ಈ ವಿಡಿಯೊ ವೈರಲ್‌ ಆಗುತ್ತಲೇ ಅವರನ್ನು ಬಂಧಿಸಲಾಗಿದೆ. ಆದರೆ, ಯಾವ ನಿರ್ದಿಷ್ಟ ಪ್ರಕರಣಕ್ಕಾಗಿ ಬಂಧಿಸಿದ್ದಾರೆ ಎಂಬುದು ಖಚಿತವಾಗಿಲ್ಲ.

ಪ್ರಚೋದನಕಾರಿ ಭಾಷಣದ ವಿಡಿಯೊ

ಪೊಲೀಸ್‌ ಠಾಣೆ ಎದುರು ಪ್ರತಿಭಟನೆ

ಮುಫ್ತಿ ಸಲ್ಮಾನ್‌ ಅಝಾರಿಯನ್ನು ಬಂಧಿಸುತ್ತಲೇ ಘಟ್ಕೋಪರ್‌ ಪೊಲೀಸ್‌ ಠಾಣೆ ಎದುರು ಅವರ ಸಾವಿರಾರು ಅನುಯಾಯಿಗಳು ಪ್ರತಿಭಟನೆ ನಡೆಸಿದ್ದಾರೆ. ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಗುಜರಾತ್‌ ಎಟಿಎಸ್‌ ಅಧಿಕಾರಿಗಳು ಮುಫ್ತಿ ಸಲ್ಮಾನ್‌ ಅಝಾರಿ ಅವರನ್ನು ಗುಜರಾತ್‌ಗೆ ಕರೆದುಕೊಂಡು ಹೋಗಲಿದ್ದಾರೆ ಎಂದು ತಿಳಿದುಬಂದಿದೆ. ಸಾವಿರಾರು ಜನ ಪ್ರತಿಭಟನೆ ನಡೆಸಿದ ಕಾರಣ ಸಂಚಾರ ದಟ್ಟಣೆಯೂ ಉಂಟಾಗಿತ್ತು.

ಇದನ್ನೂ ಓದಿ: Cleric Arrested | ಕಾಶ್ಮೀರದಲ್ಲಿ ಸೇನೆ ಕುರಿತ ಮಾಹಿತಿಯನ್ನು ಪಾಕ್‌ ಉಗ್ರರಿಗೆ ರವಾನಿಸುತ್ತಿದ್ದ ಮೌಲ್ವಿ ಬಂಧನ!

ಶಾಂತಿ ಕಾಪಾಡಲು ಅಝಾರಿ ಕರೆ

ಪೊಲೀಸ್‌ ಠಾಣೆಯ ಕಿಟಕಿಯಿಂದಲೇ ಸಾವಿರಾರು ಅನುಯಾಯಿಗಳನ್ನು ಉದ್ದೇಶಿಸಿ ಮುಫ್ತಿ ಸಲ್ಮಾನ್‌ ಅಝಾರಿ ಮಾತನಾಡಿದ್ದಾರೆ. “ನಾನೇನೂ ಅಪರಾಧ ಮಾಡಿ ಇಲ್ಲಿಗೆ ಬಂಧಿಲ್ಲ. ನಾನು ಕ್ರಿಮಿನಲ್‌ ಅಲ್ಲವೇ ಅಲ್ಲ. ಹಾಗಾಗಿ, ಯಾರೂ ಪ್ರಚೋದನಕಾರಿಯಾಗಿ ನಡೆದುಕೊಳ್ಳಬಾರದು. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ತನಿಖೆಗೆ ನಾನು ಸಹಕರಿಸುತ್ತಿದ್ದೇನೆ. ದಯಮಾಡಿ ಯಾರು ಕೂಡ ಪ್ರತಿಭಟನೆ ನಡೆಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು. ದಯಮಾಡಿ ಪ್ರತಿಭಟನೆ ಕೈಬಿಡಿ” ಎಂಬುದಾಗಿ ಮುಫ್ತಿ ಸಲ್ಮಾನ್‌ ಅಝಾರಿ ಹೇಳಿರುವ ವಿಡಿಯೊ ಕೂಡ ವೈರಲ್‌ ಆಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version