Site icon Vistara News

Gujarat Election Result | ಗುಜರಾತ್‌ನ ಎಸ್‌ಟಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಮೆಟ್ಟಿಲಾದ ಆಮ್ ಆದ್ಮಿ ಪಾರ್ಟಿ!

Rahul Gandi_Narendra Modi_Aravinda Kejriwal

ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ(ಆಪ್) ಭಾರೀ ಜೋರಾಗಿಯೇ ಪ್ರಚಾರ ಕೈಗೊಂಡಿತ್ತು. ಐದು ಸ್ಥಾನಗಳನ್ನು ಮಾತ್ರವೇ ಆಪ್‌ಗೆ ಗೆಲ್ಲಲು ಸಾಧ್ಯವಾಯಿತು. ಆದರೆ, ಬಿಜೆಪಿಗೆ ಹೊಸ ಮತದಾರರ ವರ್ಗವನ್ನು ಸೃಷ್ಟಿಸುವಲ್ಲಿ ಆಪ್ ನೆರವು ನೀಡಿತು ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ಗುಜರಾತ್‌ನಲ್ಲಿ ಬಿಜೆಪಿ 27 ವರ್ಷಗಳಿಂದ ಆಡಳಿತ ನಡೆಸುತ್ತಿದ್ದರೂ ಬುಡಕಟ್ಟು ಸಮುದಾಯ ಮತಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ ಪ್ರಾಬಲ್ಯವನ್ನು ಸಾಧಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಬಿಜೆಪಿ ಅಲ್ಲೂ ಜಯ ಸಾಧಿಸಿದೆ. ಇದಕ್ಕೆ ಆಪ್ ತನ್ನ ಕೊಡುಗೆಯನ್ನು ನೀಡಿದೆ(Gujarat Election Result).

ಬುಡಕಟ್ಟು ಸಮುದಾಯದ ಕ್ಷೇತ್ರಗಳು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ ಪರವಾಗಿಯೇ ಇದ್ದವು. ಆದರೆ, ಈ ಬಾರಿ ಬಿಜೆಪಿಯ ಪಾಲಾಗಿವೆ. ಗುಜರಾತ್‌ನ 27 ಎಸ್‌ಟಿ ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ನ ಹೀನಾಯ ಪ್ರದರ್ಶನಕ್ಕೆ ಈ ಸಂಗತಿಯೇ ಕಾರಣವಾಗಿದೆ. ಈ ಅಷ್ಟೂ ಕ್ಷೇತ್ರಗಳಲ್ಲಿ ಆಪ್ ಸ್ಪರ್ಧೆ ಬಿಜೆಪಿಗೆ ಪರದಾನವಾಗಿ ಪರಿಣಮಿಸಿದೆ. ದಕ್ಷಿಣ ಗುಜರಾತ್‌ನಲ್ಲಿ ಬುಡಕಟ್ಟು ಸಮುದಾಯದ ಮತದಾರರು ಹೆಚ್ಚು. ಪ್ರದೇಶದ 35 ಸೀಟುಗಳ ಪೈಕಿ ಬಿಜೆಪಿ 33 ಸೀಟು ಗೆಲ್ಲಲು ಯಶಸ್ವಿಯಾಗಿದೆ. 2017ರಲ್ಲಿ 23 ಸೀಟುಗಳಿಗೆ ತೃಪ್ತಿಪಟ್ಟಿತ್ತು.

2017ರಲ್ಲಿ ಎಸ್‌ಟಿ ಮೀಸಲು ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಒಟ್ಟು 77 ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳಲು ಯಶಸ್ವಿಯಾಗಿತ್ತು. ಆಗ ಬಿಜೆಪಿ 8 ಕ್ಷೇತ್ರವನ್ನು ಮಾತ್ರವೇ ಗೆದ್ದುಕೊಂಡಿತ್ತು. ಮತ್ತು 2 ಬಿಟಿಪಿ ಮತ್ತು ಇನ್ನಿಬ್ಬರು ಪಕ್ಷೇತರರು ಗೆದ್ದಿದ್ದರು. ಈ ಬಾರಿ ಕಾಂಗ್ರೆಸ್ ಕೇವಲ 3 ಸೀಟು ಗೆದ್ದರೆ, ಬಿಟಿಪಿ ಒಂದೂ ಗೆದ್ದಿಲ್ಲ.

ಬಿಜೆಪಿ ಗೆಲುವಿಗೆ ಕಾರಣವೇನು?
ಈ ಕ್ಷೇತ್ರಗಳಲ್ಲಿ ಕೈಗೊಂಡ ಅಭಿವೃದ್ದಿ ಮತ್ತು ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಕೈಗೊಳ್ಳುವ ಭರವಸೆಯು ಬಿಜೆಪಿಗೆ ವರವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಈ ಪ್ರದೇಶದ ಪ್ರಭಾವಿ ಕಾಂಗ್ರೆಸ್ ನಾಯಕರನ್ನು ತನ್ನಡೆಗೆ ಸೆಳೆದುಕೊಂಡು, ಅವರಿಗೆ ಟಿಕೆಟ್ ನೀಡಿ ಗೆದ್ದುಕೊಂಡಿದೆ. ಇದಕ್ಕೂ ಮೊದಲು ಇದೇ ತಂತ್ರವನ್ನು ಬಳಸಿಕೊಂಡು ಬಿಜೆಪಿ 2021ರಲ್ಲಿ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವಂತೆ ನೋಡಿಕೊಂಡಿತ್ತು. ಟ್ರೈಬಲ್ಸ್ ಹೆಚ್ಚಿರುವ ಎಲ್ಲ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಭರ್ಜರಿಯಾಗಿ ಜಯ ಸಾಧಿಸಿತ್ತು. ಅದು ವಿಧಾನಸಭೆ ಚುನಾವಣೆಯಲ್ಲೂ ರೀಪಿಟ್ ಆಗಿದೆ.

ಕಾಂಗ್ರೆಸ್‌ಗೆ ಹೊಡೆತ ನೀಡಿದ ಆಪ್
ಬುಡಕಟ್ಟು ಜನರ ಬಾಹುಳ್ಯ ಕ್ಷೇತ್ರಗಳಲ್ಲಿ ಆಪ್, ಕಾಂಗ್ರೆಸ್ ಹೀನಾಯ ಸೋಲಿಗೆ ಕಾರಣವಾಗಿದೆ. ಸುಮಾರು 11 ಕ್ಷೇತ್ರಗಳಲ್ಲಿ ಆಪ್ ಹಾಳು ಮಾಡುವ ಆಟವನ್ನು ಆಡಿದೆ. ಅದು ನೇರವಾಗಿ ಕಾಂಗ್ರೆಸ್ ಮೇಲೆ ಪರಿಣಾಮ ಬೀರಿದೆ. ಅಂದರೆ, ಈ ಕ್ಷೇತ್ರಗಳಲ್ಲಿ ಗೆದ್ದ ಮತ್ತು ಎರಡನೇ ಸ್ಥಾನದ ನಡುವಿನ ವ್ಯತ್ಯಾಸಗಿಂತ ಆಪ್ ಅಭ್ಯರ್ಥ ಪಡೆದ ಮತ ಹೆಚ್ಚು. ಹಾಗಾಗಿ, ಕಾಂಗ್ರೆಸ್ ಅಭ್ಯರ್ಥಿಗಳು ಸೋಲಲು ಕಾರಣವಾಯಿತು. ಇದರಿಂದ ಬಿಜೆಪಿ ಲಾಭವಾಯಿತು. ಜತೆಗೆ, ಸ್ಥಳೀಯ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿದ್ದು ಕಾಂಗ್ರೆಸ್‌ಗೆ ಮಳುವಾಯಿತು.

ಇದನ್ನೂ ಓದಿ | Gujarat Election Results | ಮಸ್ಲಿಮ್‌ ಬಾಹುಳ್ಯದ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ; ಏನಿದು ತಂತ್ರ?

Exit mobile version