Site icon Vistara News

ರಾಮ ಮುಂದಿರಕ್ಕೆ ಹೋಗದ ನಾಯಕರು; ಪಕ್ಷವನ್ನೇ ತೊರೆದ ಗುಜರಾತ್ ಕಾಂಗ್ರೆಸ್ ಶಾಸಕ!

Gujart Congress MLA Resigns and Check details

ಗಾಂಧಿನಗರ: ಕಾಂಗ್ರೆಸ್ ಪಕ್ಷಕ್ಕೆ(Congress Party) ಗುಜರಾತ್‌ನಲ್ಲಿ (Gujarat Congress MLA) ಮತ್ತೊಂದು ಹೊಡೆತ ಬಿದ್ದಿದೆ. ಹಿರಿಯ ನಾಯಕ ಹಾಗೂ ಮೂರು ಬಾರಿ ಶಾಸಕರಾಗಿರುವ ಸಿ ಜೆ ಚಾವ್ಡಾ (CJ Chavda) ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ವಿಜಾಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ತಮ್ಮ ರಾಜೀನಾಮೆಗೆ ವಿಶಿಷ್ಟ ಕಾರಣ ನೀಡಿದ್ದಾರೆ. ರಾಮ ಮಂದಿರ (Ram Mandir) ಉದ್ಘಾಟನೆ ಕುರಿತು ಕಾಂಗ್ರೆಸ್ ಪಕ್ಷ ನಡೆದುಕೊಳ್ಳುವ ರೀತಿಗೆ ಬೇಸರಗೊಂಡು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ. ವಾಸ್ತವದಲ್ಲಿ ಅವರು ಭಾರತೀಯ ಜನತಾ ಪಾರ್ಟಿಯನ್ನು ಸೇರುವುದಕ್ಕಾಗಿಯೇ ಈ ರಾಜೀನಾಮೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

ಶುಕ್ರವಾರ ಗಾಂಧಿನಗರದಲ್ಲಿ ಗುಜರಾತ್ ವಿಧಾನಸಭೆ ಸ್ಪೀಕರ್ ಶಂಕರ್ ಚೌಧರಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು.

ಕಾಂಗ್ರೆಸ್‌ಗೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ, 25 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ್ದೇನೆ, ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯಿಂದ ಇಡೀ ದೇಶದ ಜನರು ಸಂತೋಷವಾಗಿರುವಾಗ ಮತ್ತು ಜನರಲ್ಲಿ ಸಂತೋಷದ ಅಲೆ ಎದ್ದಿದೆ. ಪಕ್ಷವು ಈ ಸಂತೋಷದ ಅಲೆಯ ಭಾಗವಾಗದಿರುವುದು ನನ್ನ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಅವರು ಸಿ ಜೆ ಚಾವ್ಡಾ ಅವರು ಹೇಳಿದ್ದಾರೆ.

ಗುಜರಾತ್‌ನ ನಾಯಕರಾದ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಗಳು ಮತ್ತು ನೀತಿಗಳನ್ನು ನಾವು ಬೆಂಬಲಿಸಬೇಕು. ಆದರೆ ನಾನು ಕಾಂಗ್ರೆಸ್‌ನಲ್ಲಿದ್ದಾಗ ಅದು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದರು.

ಸಿಜೆ ಚಾವ್ಡಾ ಅವರ ನಿರ್ಗಮನದೊಂದಿಗೆ 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಈಗ 15 ಸದಸ್ಯರನ್ನು ಹೊಂದಿದೆ. ಅವರ ರಾಜೀನಾಮೆಯು ವಿಜಾಪುರ ವಿಧಾನಸಭಾ ಸ್ಥಾನಕ್ಕೆ ಉಪಚುನಾವಣೆಯನ್ನು ಏಪ್ರಿಲ್/ಮೇನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ನಡೆಸುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ: Milind Deora: ಕಾಂಗ್ರೆಸ್‌‌ಗೆ ಮಿಲಿಂದ್ ದಿಯೋರಾ ಗುಡ್‌ಬೈ, ಶಿವಸೇನೆಯಿಂದ ಸ್ಪರ್ಧೆ?

Exit mobile version