ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರ ಆಡಳಿತ ಶೈಲಿಯನ್ನು ಮೆಚ್ಚಿಕೊಂಡವರ ಸಂಖ್ಯೆ ಹೆಚ್ಚಿದೆ. ಅದರಲ್ಲೂ, ಅವರ ತವರು ರಾಜ್ಯ ಗುಜರಾತ್‌ನಲ್ಲಿ ಮೋದಿ ಅವರನ್ನು ಕಂಡರೆ ಜನಕ್ಕೆ ತುಂಬ ಇಷ್ಟ. ಇದಕ್ಕೆ ನಿದರ್ಶನ ಎಂಬತೆ, ಗುಜರಾತ್‌ನ ಸೂರತ್ ಆಭರಣದ ಉದ್ಯಮಿಯೊಬ್ಬರು ಬಂಗಾರದಲ್ಲಿ ನರೇಂದ್ರ ಮೋದಿ ಅವರ ಪುತ್ಥಳಿ (Narendra Modi Bust) ಕೆತ್ತಿಸಿ ಅಭಿಮಾನ ಮೆರೆದಿದ್ದಾರೆ.
ಸೂರತ್‌ನಲ್ಲಿ ಆಭರಣದ ಉದ್ಯಮಿಯಾಗಿರುವ ಬಸಂತ್ ವೋಹ್ರಾ ಅವರು ಮೋದಿ ಅವರ ಮೇಲಿನ ಅಭಿಮಾನಕ್ಕಾಗಿ ಬಂಗಾರದ ಪುತ್ಥಳಿ ಕೆತ್ತಿಸಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಅಭೂತಪೂರ್ವ ಗೆಲುವು ಸಾಧಿಸಿರುವ ಸ್ಮರಣಾರ್ಥ ಬಂಗಾರದ ಪುತ್ಥಳಿ ಕೆತ್ತಿಸಿದ್ದಾರೆ. ಬಂಗಾರದ ಪುತ್ಥಳಿಯ ವಿಡಿಯೊ ಈಗ ವೈರಲ್ ಆಗಿದೆ.
10.5 ಲಕ್ಷ ರೂಪಾಯಿ ವ್ಯಯ
ನರೇಂದ್ರ ಮೋದಿ ಅವರ ಬಂಗಾರದ ಪುತ್ಥಳಿಯನ್ನು ತಯಾರಿಸಲು ಬಸಂತ್ ವೋಹ್ರಾ ಅವರು 10.5 ಲಕ್ಷ ರೂ. ವ್ಯಯಿಸಿದ್ದಾರೆ. 4.5 ಇಂಚು ಎತ್ತರ, 3 ಇಂಚು ಅಗಲವಿರುವ ಇದು 18 ಕ್ಯಾರೆಟ್ ಗೋಲ್ಡ್ ಆಗಿದೆ. “ನಾನು ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿಯಾಗಿದ್ದೇನೆ. ಗುಜರಾತ್ ವಿಧಾನಸಭೆ ಚುನಾವಣೆ ಗೆಲುವಿನ ಸ್ಮರಣಾರ್ಥ ಬಂಗಾರದಲ್ಲಿ ಅವರ ಪುತ್ಥಳಿ ಕೆತ್ತಿಸಿದ್ದೇನೆ” ಎಂದ ಬಸಂತ್ ವೋಹ್ರಾ ತಿಳಿಸಿದ್ದಾರೆ.
ಇದನ್ನೂ ಓದಿ | National Youth Festival | ಯುವಶಕ್ತಿಯೇ ಭಾರತದ ಪಯಣದ ಚಾಲಕ ಶಕ್ತಿ: ಪ್ರಧಾನಿ ನರೇಂದ್ರ ಮೋದಿ ಬಣ್ಣನೆ