Site icon Vistara News

Supreme Court: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ

Supreme Court verdict on Article 370 and Know about this article

ನವದೆಹಲಿ: ನಾನ್-ಇನ್‌ವಾಸ್ವಿವ್ ಮೆಥೆಡ್(ಯಾವುದೇ ರೀತಿ ಧಕ್ಕೆಯಾಗದಂತೆ) ಬಳಸಿಕೊಂಡು ಜ್ಞಾನವಾಪಿ ಮಸೀದಿ (Gyanvapi Mosque Survey) ಸಮೀಕ್ಷೆ ಕೈಗೊಳ್ಳಲು ಪುರಾತತ್ವ ಸಂಸ್ಥೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಈ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಿ ಮುಂದಿನ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಭಾರತೀಯ ಪುರಾತತ್ವ ಸಂಸ್ಥೆಗೆ (Archaeological Survey of India) ತಿಳಿಸಲಾಗಿದೆ. ಈ ಸಮೀಕ್ಷೆ ಕೈಗೊಳ್ಳಲು ಅನುಮತಿ ನೀಡಿದ್ದ ಅಲಹಾಬಾದ್ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಮುಸ್ಲಿಮ್ ಸಮಿತಿಯು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಶುಕ್ರವಾರ ನಡೆದ ವಿಚಾರಣೆ ವೇಳೆ, ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು, ಜ್ಞಾನವಾಪಿ ಮಸೀದಿಯ ಎಎಸ್ಐ ಸಮೀಕ್ಷೆಯು ಇತಿಹಾಸವನ್ನು ಕೆದಕುತ್ತದೆ. ಇದರಿಂದ ಹಿಂದಿನ ಗಾಯಗಳು ಪುನಃ ಮರುಕಳಿಸಬಹುದು ಎಂದು ವಾದಿಸಿತು.

ಈ ಸುದ್ದಿಯನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆಗೆ ಅಲಹಾಬಾದ್‌ ಹೈಕೋರ್ಟ್‌ ಅಸ್ತು; ಮುಸ್ಲಿಮರ ಅರ್ಜಿ ವಜಾ

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಹಾಗೂ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿದ್ದ ಪೀಠವು, ಮಸೀದಿಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಸಮೀಕ್ಷೆ ಕೈಗೊಳ್ಳುವಂತೆ ಸೂಚಿಸಿತು. ಎಎಸ್ಐ ಹಾಗೂ ಉತ್ತರ ಪ್ರದೇಶದ ಸರ್ಕಾರದ ಪರವಾಗಿ ವಾದ ಮಾಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮಸೀದಿಯೊಳಗಿನ ಯಾವುದೇ ರಚನೆಗೆ ಹಾನಿ ಮಾಡದಂತೆ ಹಾಗೂ ಯಾವುದೇ ಉತ್ಕನನ ಇಲ್ಲದೇ ಸಮೀಕ್ಷೆ ಕೈಗೊಳ್ಳುವ ಭರವಸೆಯನ್ನು ಸುಪ್ರೀಂ ಕೋರ್ಟ್‌ಗೆ ನೀಡಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version