ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (TRS) ಎಂಬ ಹೆಸರನ್ನು ಭಾರತ್ ರಾಷ್ಟ್ರ ಸಮಿತಿ (BRS) ಎಂಬುದಾಗಿ ನಾಮಕರಣ ಮಾಡಲು ಚುನಾವಣೆ ಆಯೋಗವು ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಬಿಆರ್‌ಎಸ್ ಸಂಸ್ಥಾಪನಾ ಕಾರ್ಯಕ್ರಮ ಆಯೋಜಿಸಿ, ನೂತನ ಹೆಸರಿನ ಪಕ್ಷಕ್ಕೆ ಚಾಲನೆ ನೀಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ಭಾಗಿಯಾಗಿದ್ದು, ಚಂದ್ರಶೇಖರ್ ರಾವ್ ಅವರಿಗೆ ಶುಭ ಕೋರಿದ್ದಾರೆ.
ಟಿಆರ್‌ಎಸ್‌ಅನ್ನು ಭಾರತದಾದ್ಯಂತ ವಿಸ್ತರಿಸುವ ದಿಸೆಯಲ್ಲಿ ಬಿಆರ್‌ಎಸ್ ಎಂಬುದಾಗಿ ಹೆಸರು ಬದಲಾಯಿಸಲು ಕೋರಿ ಕೆಸಿಆರ್ ಅವರು ಚುನಾವಣೆ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಚುನಾವಣೆ ಆಯೋಗವು ಸಮ್ಮತಿ ಸೂಚಿಸಿದ ಕಾರಣ ಹೈದರಾಬಾದ್‌ನಲ್ಲಿ ಕಾರ್ಯಕ್ರಮ ಆಯೋಜಿಸಿ, ಬಿಆರ್‌ಎಸ್‌ನ ನೂತನ ಧ್ವಜ ಅನಾವರಣಗೊಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಚ್.ಡಿ.ಕುಮಾರಸ್ವಾಮಿ, ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕೂಡ ಭಾಗವಹಿಸಿದ್ದರು.
ಇದನ್ನೂ ಓದಿ | ಇತ್ತ ಜೆಡಿಎಸ್ ಜತೆಗೆ ನಂಟು; ಅತ್ತ ಜಮೀರ್ ಅಹ್ಮದ್ ಜತೆಗೂ ಮಾತು: ಕುತೂಹಲ ಕೆರಳಿಸಿದ KCR ನಡೆ