Site icon Vistara News

Halal Tea Row: ಹಲಾಲ್‌ ಟೀ ಎಂದು ರೈಲ್ವೆ ಸಿಬ್ಬಂದಿ ಜತೆ ಜಗಳ, ಟೀ ಯಾವಾಗ್ಲೂ ವೆಜ್‌ ಸರ್‌ ಎಂದ ಅಧಿಕಾರಿ

Halal Tea Row On Train

Halal-certified tea pack upsets train passenger, exchange with official; Video Goes Viral

ನವದೆಹಲಿ: ಕರ್ನಾಟಕದಲ್ಲಿ ಕೆಲ ತಿಂಗಳ ಹಿಂದೆ ಹಲಾಲ್‌ ಕಟ್‌ ಮಾಂಸದ ಪ್ರಕರಣವು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಹಲಾಲ್‌ ಕಟ್‌, ಜಟ್ಕಾ ಕಟ್‌ ಪ್ರಕರಣವು ಚರ್ಚೆಗೆ ಗ್ರಾಸವಾಗಿತ್ತು. ವಾದ-ವಿವಾದಗಳು ಜೋರಾಗಿದ್ದವು. ಈಗ ಹಲಾಲ್‌ ಪ್ರಮಾಣೀಕೃತ ಮಾಂಸ ಅಲ್ಲ, ಹಲಾಲ್‌ ಪ್ರಮಾಣೀಕೃತ ಟೀ ಬ್ಯಾಗ್‌ ನೀಡಿದ (Halal Tea Row) ವಿಚಾರಕ್ಕಾಗಿ ರೈಲಿನಲ್ಲಿ ಗಲಾಟೆ ನಡೆದಿದೆ. ಹಾಗೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಇದಾದ ಬಳಿಕ ರೈಲ್ವೆ ಇಲಾಖೆಯು ಸ್ಪಷ್ಟನೆ ನೀಡಿದ್ದು, “ರೈಲುಗಳಲ್ಲಿ ಪೂರೈಕೆ ಮಾಡುವ ಟೀ ಸಂಪೂರ್ಣ ಸಸ್ಯಾಹಾರಿ” ಎಂದು ತಿಳಿಸಿದೆ.

ಹೌದು, ವ್ಯಕ್ತಿಯೊಬ್ಬರು ಚಲಿಸುವ ರೈಲಿನಲ್ಲಿ ಟೀ ಆರ್ಡರ್‌ ಮಾಡಿದ್ದಾರೆ. ಆಗ, ಸಿಬ್ಬಂದಿಯು ಅವರಿಗೆ ಟೀ ಪ್ರಿಮಿಕ್ಸ್‌ ಪ್ಯಾಕೆಟ್‌ ತಂದು ಕೊಟ್ಟಿದ್ದಾರೆ. ಆದರೆ, ಟೀ ಪ್ಯಾಕೆಟ್‌ ಹಲಾಲ್‌ ಸರ್ಟಿಫೈಡ್‌ ಇದೆ ಎಂದು ಸಿಬ್ಬಂದಿ ಜತೆ ವ್ಯಕ್ತಿಯು ಗಲಾಟೆ ಆರಂಭಿಸಿದ್ದಾರೆ. ಇದೇ ವೇಳೆ, ರೈಲ್ವೆ ಅಧಿಕಾರಿಯೊಬ್ಬರು ಬಂದು ಪ್ರಯಾಣಿಕರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ. ಇಷ್ಟಾದರೂ ವ್ಯಕ್ತಿಯು ಸಿಬ್ಬಂದಿ ಜತೆ ಗಲಾಟೆ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ.

ವೈರಲ್‌ ಆದ ವಿಡಿಯೊ

“ಸಾವನ್‌ ತಿಂಗಳಲ್ಲಿ (ಹಿಂದುಗಳ ಪವಿತ್ರ ಮಾಸಾಚರಣೆ) ಹಲಾಲ್‌ ಪ್ರಮಾಣೀಕೃತ ಚಹಾವನ್ನು ಹೇಗೆ ನೀಡುತ್ತೀರಿ? ಹಲಾಲ್‌ ಸರ್ಟಿಫೈಡ್‌ ಪ್ಯಾಕೆಟ್‌ ಇದು, ಇದನ್ನು ನೀವು ಏನೆಂದುಕೊಂಡಿದ್ದೀರಿ” ಎಂದು ಅಧಿಕಾರಿಗೆ ವ್ಯಕ್ತಿ ದಬಾಯಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಯು, “ಚಹಾ ಯಾವಾಗಲೂ ವೆಜ್‌ ಸರ್.‌ ಇದರಲ್ಲಿ ಮಾಂಸವನ್ನು, ಮಾಂಸದ ಯಾವುದೇ ಅಂಶವನ್ನು ಮಿಶ್ರಣ ಮಾಡಿರುವುದಿಲ್ಲ” ಎಂದಿದ್ದಾರೆ. ಆದರೂ, ವ್ಯಕ್ತಿಯು ಅಧಿಕಾರಿಯ ಮಾತು ಕೇಳಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Virat Kohli: ವಿಂಡೀಸ್​ ಆಟಗಾರನ ತಾಯಿಯಿಂದ ಕೊಹ್ಲಿಗೆ ಮಮತೆಯ ಅಪ್ಪುಗೆ; ವಿಡಿಯೊ ವೈರಲ್​

ಏನಿದು ಹಲಾಲ್‌ ಸರ್ಟಿಫೈಡ್?‌

ಇಸ್ಲಾಮಿಕ್‌ ಪ್ರಕ್ರಿಯೆಗಳನ್ನು ಅನುಸರಿಸಿ, ಆ ಮಾರ್ಗಸೂಚಿಗಳನ್ನು ಪಾಲಿಸಿ ಉತ್ಪಾದನೆ ಮಾಡಿದ ಉತ್ಪನ್ನಗಳೇ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳಾಗಿವೆ. ಹಲಾಲ್‌ ಎಂದರೆ ಅನುಮತಿ ಎಂಬ ಅರ್ಥವೂ ಇದೆ. ಆದರೆ, ಹಲಾಲ್‌ ಕಟ್‌ ಅಥವಾ ಹಲಾಲ್‌ ಪ್ರಮಾಣೀಕೃತ ಮಾಂಸ ಎಂಬುದು ಜಾಸ್ತಿ ಬಳಕೆಯಲ್ಲಿದೆ. ಹಲಾಲ್‌ ಪ್ರಮಾಣೀಕೃತ ಎಂದರೆ ಮಾಂಸ ಎಂಬ ಭಾವನೆ ಇದೆ. ಇನ್ನು ವ್ಯಕ್ತಿಯು ರೈಲಿನಲ್ಲಿ ಗಲಾಟೆ ಮಾಡಿದ ನಂತರ ಪರ-ವಿರೋಧ ಚರ್ಚೆ ಶುರುವಾಗಿದೆ. “ಹಿಂದುಗಳಿಗೆ ಹಲಾಲ್‌ ಪ್ರಮಾಣೀಕೃತ ಟೀ ಕೊಡುವುದು ತಪ್ಪು” ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version