Site icon Vistara News

Hanuman Chalisa: ಯುಟ್ಯೂಬ್‌ನಲ್ಲಿ 300 ಕೋಟಿ ವೀಕ್ಷಣೆ ಕಂಡ ಹನುಮಾನ್‌ ಚಾಲೀಸಾ; ಹೆಚ್ಚು ವೀಕ್ಷಣೆ ಪಡೆದ ದಾಖಲೆ

Hanuman Chalisa: Significance and importance Of Reciting Hanuman Chalisa in kannada

Hanuman Chalisa

ಮುಂಬೈ: ಭಾರತ ಸೇರಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಹನುಮಾನ್‌ ಚಾಲೀಸಾ ಪಠಿಸುವವರಿದ್ದಾರೆ. ಹನುಮಾನ್‌ ಚಾಲೀಸಾ ಪಠಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ಇದೆ. ಹನುಮಾನ್‌ ಚಾಲೀಸಾ ಖ್ಯಾತಿ, ಪ್ರಸಿದ್ಧಿಗೆ ನಿದರ್ಶನ ಎಂಬಂತೆ, ಟಿ-ಸಿರೀಸ್‌ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಹನುಮಾನ್‌ ಚಾಲೀಸಾ ವಿಡಿಯೊ 300 ಕೋಟಿ ವೀಕ್ಷಣೆ (Views) ಕಂಡಿದೆ. ಅಷ್ಟೇ ಅಲ್ಲ, ಯುಟ್ಯೂಬ್‌ನಲ್ಲಿ 3೦೦ ಕೋಟಿ ವೀಕ್ಷಣೆ ಕಂಡ ಭಾರತದ ಮೊದಲ ವಿಡಿಯೊ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಟಿ-ಸಿರೀಸ್‌ ಸಂಸ್ಥಾಪಕ ಗುಲ್ಶನ್‌ ಕುಮಾರ್‌ ಇರುವ, ಹರಿಹರನ್‌ ಹಾಡಿರುವ ಯುಟ್ಯೂಬ್‌ ವಿಡಿಯೊಗೆ 1.2 ಕೋಟಿ ಲೈಕ್‌ ಸಿಕ್ಕಿವೆ. 2011ರ ಮೇ ತಿಂಗಳಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಲಾಗಿದ್ದು, ಜಗತ್ತಿನಾದ್ಯಂತ ಖ್ಯಾತಿ ಗಳಿಸಿದೆ. ಟಿ-ಸಿರೀಸ್‌ ದೇಶದಲ್ಲೇ ಅತಿ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಯುಟ್ಯೂಬ್‌ ಚಾನೆಲ್‌ ಎನಿಸಿದೆ.

ಇಲ್ಲಿದೆ ವಿಡಿಯೊ

ಟಿ-ಸಿರೀಸ್‌ ಯುಟ್ಯೂಬ್‌ ಚಾನೆಲ್‌ನಲ್ಲಿ ಬಾಲಿವುಡ್‌ ಹಾಡುಗಳು, ಪಾಪ್‌, ಭಕ್ತಿ ಗೀತೆಗಳನ್ನು ಅಪ್‌ಲೋಡ್‌ ಮಾಡಲಾಗುತ್ತದೆ. ಇದು 29 ಚಾನೆಲ್‌ಗಳನ್ನು ಹೊಂದಿದ್ದು, ಹಿಂದಿ, ಪಂಜಾಬಿ, ಭೋಜ್‌ಪುರಿ, ತೆಲುಗು, ಕನ್ನಡ, ಮರಾಠಿ ಹಾಡುಗಳನ್ನೂ ಅಪ್‌ಲೋಡ್‌ ಮಾಡುತ್ತದೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆ Updates: ಹನುಮಾನ್‌ ಚಾಲೀಸಾ ಪಠಿಸಿ ಮತ ಹಾಕಿದ ರಾಣಾ

Exit mobile version