Site icon Vistara News

Nafe Singh Rathee: ಹರ್ಯಾಣ ಐಎನ್‌ಎಲ್‌ಡಿ ನಾಯಕ ರಾಠಿ ಹತ್ಯೆ; ಗುಂಡು ಹಾರಿಸಿದ ಅಪರಿಚಿತರು

Haryana INLD Leader Nafe Singh Rathee Shot dead by unidentified assailants

INDL Leader

ನವದೆಹಲಿ: ಭಾರತೀಯ ರಾಷ್ಟ್ರೀಯ ಲೋಕ ದಳ(INLD) ಹರ್ಯಾಣ (Haryana) ಘಟಕದ ಅಧ್ಯಕ್ಷ ನಫೆ ಸಿಂಹ ರಾಠಿ ಅವರನ್ನು (Nafe Singh Rathee) ಗುಂಡಿಟ್ಟು ಹತ್ಯೆ ಮಾಡಲಾಗಿದೆ(Shot Dead). ರಾಠಿ ಅವರನ್ನು ಹರ್ಯಾಣದ ಜಜ್ಜರ್ ಜಿಲ್ಲೆಯಲ್ಲಿ (Jhajjar District) ಅಪರಿಚಿತ ದುಷ್ಕರ್ಮಿಗಳು (unidentified assailants) ಗುಂಡಿಕ್ಕಿ ಕೊಂದಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಭಾನುವಾರ ತಿಳಿಸಿದ್ದಾರೆ.

ಮಾಜಿ ಶಾಸಕರೂ ಆಗಿರುವ ಐಎನ್‌ಡಿಎಲ್ ಹರ್ಯಾಣ ಘಟಕದ ಅಧ್ಯಕ್ಷ ರಾಠಿ ಅವರು ತಮ್ಮ ಎಸ್‌ಯುವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಜಜ್ಜರ್‌ನ ಬಹದ್ದೂರ್‌ಗಢ ಪಟ್ಟಣದಲ್ಲಿ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.

ಗುಂಡಿನ ದಾಳಿಯ ಬಗ್ಗೆ ನಮಗೆ ಮಾಹಿತಿ ಬಂದಿದೆ. ಸಿಐಎ ಮತ್ತು ಎಸ್‌ಟಿಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಜಜ್ಜರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರ್ಪಿತ್ ಜೈನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಐಎನ್‌ಎಲ್‌ಡಿ ನಾಯಕ ಅಭಯ್ ಚೌತಾಲಾ ಅವರು ರಾಠಿ ಅವರಿಗೆ ಜೀವ ಬೆದರಿಕೆಯ ಹೊರತಾಗಿಯೂ ಭದ್ರತೆಯನ್ನು ಒದಗಿಸಲು ಹರ್ಯಾಣ ಸರ್ಕಾರವು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ ಮತ್ತು ಹರ್ಯಾಣ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಘಟನೆಯ ಕುರಿತು ತನಿಖೆ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Mass Shooting: ಗುಂಡಿನ ದಾಳಿ ನಡೆಸಿದ ಬಂಧೂಕುದಾರಿಯನ್ನೇ ನೆಲಕ್ಕೆ ಕೆಡವಿದರು; ವಿಡಿಯೊ ಇಲ್ಲಿದೆ

Exit mobile version