Site icon Vistara News

ಕೇಂದ್ರ ಸಚಿವರ ಪುತ್ರನ ವಿರುದ್ಧ ಮೋದಿ ಕ್ರಮ ಕೈಗೊಂಡ್ರಾ? ರಾಹುಲ್ ಗಾಂಧಿ ವ್ಯಂಗ್ಯ

We sow how bjp mps were ran from lok sabha Says rahul gandhi at india bloc protest

ನವದೆಹಲಿ: ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ (Union Minister Narendra Singh Tomar) ಅವರ ಪುತ್ರನ (Son of Tomar) ಭ್ರಷ್ಟಾಚಾರ ಪ್ರಕರಣವನ್ನು (Corruption Case) ಪ್ರಸ್ತಾಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು, ಮೋದಿಯವರೇ ಏನಾದರೂ ಕ್ರಮ ಕೈಗೊಂಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಪುತ್ರ ರೈತರು, ಬಡವರು ಮತ್ತು ಕಾರ್ಮಿಕರ ಹಣವನ್ನು ಕದಿಯುತ್ತಿದ್ದಾರೆ ಎಂದು ಆರೋಪಿಸಿರುವ ವೈರಲ್ ವಿಡಿಯೋವನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಅವರು ಪ್ರಶ್ನೆ ಮಾಡಿದ್ದಾರೆ. ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರವು ಜಾರಿ ನಿರ್ದೇಶನಾಲಯ (ED), ಕೇಂದ್ರೀಯ ತನಿಖಾ ದಳ (CBI) ಮತ್ತು ಆದಾಯ ತೆರಿಗೆ ಇಲಾಖೆಯನ್ನು ತನಿಖೆಗೆ ತನ್ನ ಆವರಣಕ್ಕೆ ಕಳುಹಿಸಿದೆಯೇ ಎಂದು ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದ ಹರ್ದಾದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ರೈತರು, ಬಡವರು ಮತ್ತು ಕಾರ್ಮಿಕರ ಹಣವನ್ನು ಭಯವಿಲ್ಲದೆ ಮತ್ತು ಬಹಿರಂಗವಾಗಿ ಕದಿಯುತ್ತಿರುವ (ಕೇಂದ್ರ ಸಚಿವ ನರೇಂದ್ರ ಸಿಂಗ್) ತೋಮರ್ ಅವರ ಮಗನ ವೀಡಿಯೊವನ್ನು ನೀವು ವೀಡಿಯೊದಲ್ಲಿ ನೋಡಿರಬೇಕು. ಕರೆ ಮಾಡಿ ಕೇಳಿ. ಮೋದಿಜಿ ಏನಾದರೂ ಕ್ರಮ ಕೈಗೊಂಡಿದ್ದಾರೆಯೇ? ಇಡಿ, ಸಿಬಿಐ, ಐಟಿ ಇಲಾಖೆ ಕ್ರಮ ಕೈಗೊಂಡಿದೆಯೇ ಎಂದು ಕೇಳಿ ಎಂದು ಹೇಳಿದ್ದಾರೆ.

ಬಿಜೆಪಿ ಪಕ್ಷದ ಸಂಸದರ 50 ಪರ್ಸೆಂಟ್ ಪಡೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಂದರಲ್ಲಿ ಅವರು ಭ್ರಷ್ಟಾಚಾರ ಎಸಗುತ್ತಿದ್ದಾರೆಂದು ರಾಹುಲ್ ಗಾಂಧಿ ಅವರು ಮಧ್ಯ ಪ್ರದೇಶದ ಬಿಜೆಪಿ ವಿರುದ್ಧ ಹರಿಹಾಯ್ದರು.

2020ರಲ್ಲಿ ಕಮಲ್ ನಾಥ ಸರ್ಕಾರವನ್ನು ಬಿಜೆಪಿ ಹೇಗೆ ಉರುಳಿಸಿತು ಎಂಬುದನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ ಅವರು, ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಜತೆಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿತು. ಈ ಮೂಲಕ ರೈತಪರ, ಕಾರ್ಮಿಕರ ಪರ, ಚಿಕ್ಕ ಅಂಗಡಿಕಾರರ ಪರವಾಗಿ ಸರ್ಕಾರವಿತ್ತು. ಆದರೆ, 27 ಲಕ್ಷ ರೈತರ ಸಾಲವನ್ನು ಮನ್ನಾ ಮಾಡುವ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಬಿಜೆಪಿ ಕೆಡವಿತು. ಬಳಿಕ ಬಿಜೆಪಿ ಆಡಳಿತದಲ್ಲಿ ಮಧ್ಯಪ್ರದೇಶದವೊಂದರಲ್ಲೇ 18000 ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆಂದು ರಾಹುಲ್ ಗಾಂಧಿ ಆರೋಪಿಸಿದರು.

ಗೌತಮ್ ಅದಾನಿಯಂಥವರಿಗೆ ನೆರವು ಒದಗಿಸುವುದಕ್ಕಾಗಿ ಕೇಂದ್ರ ಸರ್ಕಾರವು ನೋಟು ಅಮಾನ್ಯಕರಣವನ್ನು ಮಾಡಿತು. ಈ ನೋಟು ಅಮಾನ್ಯ ಪ್ರಕ್ರಿಯೆಯು ಈ ದೇಶದ ಸಣ್ಣ ವ್ಯಾಪಾರಸ್ಥರು, ಸಾಮಾನ್ಯ ನಾಗರಿಕರ ಬದುಕನ್ನೇ ನಾಶ ಮಾಡಿತು ಎಂದು ಆರೋಪಿಸಿದ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರದೇಶದಲ್ಲಿ 500 ಕೈಗಾರಿಕೆಗಳನ್ನು ಸ್ಥಾಪಿಸಿರುವುದಾಗಿ ಬಹಿರಂಗವಾಗಿ ಸುಳ್ಳು ಹೇಳುತ್ತಿದ್ದಾರೆಂದು ಹೇಳಿದರು.

ಭ್ರಷ್ಟಾಚಾರದ ಆರೋಪವನ್ನು ಹೊಂದಿರುವ ವಿಡಿಯೋ ನಕಲಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಪುತ್ರ ಹೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಪರಿಚಿತರ ವಿರುದ್ಧ ಕೇಸ್ ಕೂಡ ಅವರು ದಾಖಲಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ರಾಹುಲ್ ಗಾಂಧಿ ಜತೆ ಇರುವ ಮಹಿಳೆ ಯಾರು?

Exit mobile version