Site icon Vistara News

Viral Video: ಟಾರ್ಗೆಟ್‌ ರೀಚ್‌ ಆಗದ್ದಕ್ಕೆ ಸಹೋದ್ಯೋಗಿಗೆ ಬೈದ ಎಚ್‌ಡಿಎಫ್‌ಸಿ ಅಧಿಕಾರಿ ಸಸ್ಪೆಂಡ್

HDFC Officer Viral Video

HDFC Bank suspends employee after video of him abusing co-workers goes viral

ಕೋಲ್ಕೊತಾ: ಯಾವುದೇ ಕಂಪನಿ ಇರಲಿ, ಬಾಸ್‌ಗಳಿಂದ ಸಹೋದ್ಯೋಗಿಗಳು ಬೈಗುಳ ತಿನ್ನುವುದು ಸಹಜ. ಅದರಲ್ಲೂ, ಬ್ಯಾಂಕ್‌ಗಳಲ್ಲಿ, ಮೆಡಿಕಲ್‌ ರೆಪ್ರೆಸೆಂಟೇಟಿವ್‌ ಸೇರಿ ಟಾರ್ಗೆಟ್‌ ಇರುವ ಕ್ಷೇತ್ರಗಳಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಯ ಸಹೋದ್ಯೋಗಿಗಳಿಗೆ ಬೈಗುಳ ಫ್ರೀ. ಹೀಗೆ, ಆನ್‌ಲೈನ್‌ ಮೀಟಿಂಗ್‌ನಲ್ಲಿ ಕಿರಿಯ ಸಹೋದ್ಯೋಗಿಗೆ ಬಾಯಿಗೆ ಬಂದಂತೆ ಬೈದ ಹಿರಿಯ ಸಹೋದ್ಯೋಗಿಯನ್ನು ಎಚ್‌ಡಿಎಫ್‌ಸಿ (Viral Video) ವಜಾಗೊಳಿಸಿದೆ.

ಹೌದು, ಕಿರಿಯ ಸಹೋದ್ಯೋಗಿಗೆ ಎಲ್ಲರ ಎದುರು ಅವಮಾನವಾಗುವ ರೀತಿ ಬೈದ, ಕೋಲ್ಕೊತಾ ಎಚ್‌ಡಿಎಫ್‌ಸಿ ಬ್ಯಾಂಕ್‌ ಹಿರಿಯ ಅಧಿಕಾರಿ ಸೌಮಿ ಚಕ್ರವರ್ತಿ ಅವರನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ ಅಮಾನತುಗೊಳಿಸಿದೆ. ಟಾರ್ಗೆಟ್‌ ರೀಚ್‌ ಆಗದ ಹಿನ್ನೆಲೆಯಲ್ಲಿ ಆನ್‌ಲೈನ್‌ ಮೀಟಿಂಗ್‌ನಲ್ಲಿ ಕಿರಿಯ ಸಹೋದ್ಯೋಗಿ ಮೇಲೆ ರೇಗಾಡಿದ, ಕಿರಿಯ ಸಹೋದ್ಯೋಗಿ ಮಾತನಾಡಲು ಕೂಡ ಬಿಡದಂತೆ ಕಿರುಚಾಡಿದ ವಿಡಿಯೊ ವೈರಲ್‌ ಆಗಿತ್ತು. ವಿಡಿಯೊ ವೈರಲ್‌ ಆಗುತ್ತಲೇ ಎಚ್‌ಡಿಎಫ್‌ಸಿ ಕ್ರಮ ತೆಗೆದುಕೊಂಡಿದೆ.

ಇಲ್ಲಿದೆ ನೋಡಿ ವಿಡಿಯೊ

ಬ್ಯಾಂಕ್‌ ಸೇವೆಗಳನ್ನು ಮಾಡಿಸದ ಹಾಗೂ ಹೆಚ್ಚಿನ ಜನರಿಂದ ವಿಮೆ ಪಾಲಿಸಿಗಳನ್ನು ಮಾಡಿಸದ ಕಾರಣ ಸೌಮಿ ಚಕ್ರವರ್ತಿಯು ಆನ್‌ಲೈನ್‌ ಮೀಟಿಂಗ್‌ ವೇಳೆ ಸಹೋದ್ಯೋಗಿಗಳಿಗೆ ಬೆಂಗಾಲಿ ಭಾಷೆಯಲ್ಲಿ ಬೈದಿದ್ದರು. “ನೀನು ಕಳೆದ ಎರಡು ದಿನದಲ್ಲಿ ಎಷ್ಟು ಸೇವಿಂಗ್‌ ಹಾಗೂ ಕರೆಂಟ್‌ ಅಕೌಂಟ್‌ ಓಪನ್‌ ಮಾಡಿಸಿದ್ದೀಯಾ” ಎಂದು ಒಬ್ಬರಿಗೆ ಕೇಳುತ್ತಾರೆ. ಆಗ ಅವರು ಉತ್ತರಿಸುವ ಮೊದಲೇ ಮತ್ತೊಬ್ಬ ಸಹೋದ್ಯೋಗಿಗೆ ಬೈಯುತ್ತಾರೆ. “ನೀನು 15 ಖಾತೆ ಓಪನ್‌ ಮಾಡಿಸಬೇಕಿತ್ತು. ಕೇವಲ ಐದು ಮಾಡಿಸಿದ್ದೀಯಾ” ಎಂದು ಜೋರಾಗಿ ಕಿರುಚಿದ್ದಾರೆ.

ಇದನ್ನೂ ಓದಿ: Hosakerehalli Lake: ಕೆರೆಯಲ್ಲಿ ರಸ್ತೆ; ಡಿಕೆಶಿ ಸೂಚನೆ ಬೆನ್ನಲ್ಲೇ ಬಿಬಿಎಂಪಿಯ ಇಬ್ಬರು ಅಧಿಕಾರಿಗಳ ಅಮಾನತು

ಸಹೋದ್ಯೋಗಿಗಳಿಗೆ ಬೈದ, ಜೋರಾಗಿ ಕಿರುಚಿದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಯನ್ನು ಅಮಾನತು ಮಾಡಿರುವ ಕುರಿತು ಎಚ್‌ಡಿಎಫ್‌ಸಿ ಮಾಹಿತಿ ನೀಡಿದೆ. “ಸಹೋದ್ಯೋಗಿಗಳ ಜತೆ ವಿಚಿತ್ರವಾಗಿ ವರ್ತಿಸಿದ, ಅವರಿಗೆ ಅವಮಾನವಾಗುವ ರೀತಿ ಬೈದ ಹಿರಿಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಹಾಗೆಯೇ, ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ” ಎಂದು ಎಚ್‌ಡಿಎಫ್‌ಸಿ ಸರ್ವಿಸ್‌ ಮ್ಯಾನೇಜರ್‌ ಅಜಯ್‌ ಮಾಹಿತಿ ನೀಡಿದ್ದಾರೆ.

Exit mobile version