ಭೋಪಾಲ್: ಕಿರುತೆರೆ ಹಾಗೂ ಸಿನಿಮಾದ ಕಲಾವಿದರು ಸೇರಿದಂತೆ ಹಲವರು ವರ್ಕೌಟ್ ಮಾಡುವಾಗಲೇ ಹೃದಯಾಘಾತಕ್ಕೆ ಒಳಗಾದ ಸುದ್ದಿಗಳನ್ನು ಆಗಾಗ ಕೇಳುತ್ತಲೇ ಇರುತ್ತವೆ. ಇದೀಗ ಮಧ್ಯಪ್ರದೇಶದ ಇಂದೋರ್‌ನಲ್ಲಿ ಅಂಥದ್ದೇ ಮತ್ತೊಂದು ಘಟನೆ (Heart attack) ನಡೆದಿದೆ(viral Video).
ಇದನ್ನೂ ಓದಿ: Heart attack | ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೃದಯಾಘಾತದಿಂದ ಹೆಡ್ ಕಾನ್ಸ್‌ಟೇಬಲ್ ಸಾವು
ಇಂದೋರ್‌ನ ವೃಂದಾವನ ಹೋಟೆಲ್‌ನ ಮಾಲೀಕರಾಗಿರುವ ಪ್ರದೀಪ್ ರಘುವಂಶಿ ಗುರುವಾರ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದಾಗಲೇ ಪ್ರಾಣ ಬಿಟ್ಟಿದ್ದಾರೆ. 55 ವರ್ಷದ ಅವರು ಥ್ರೆಡ್‌ಮಿಲ್‌ನಲ್ಲಿ ವರ್ಕ್‌ಔಟ್ ಮಾಡಿ ಕೆಳಗಿಳಿಯುತ್ತಿದ್ದಂತೆಯೇ ಸುಸ್ತಾಗಿದ್ದಾರೆ. ನಿಲ್ಲುವುದಕ್ಕೂ ಸಾಧ್ಯವಾಗದೆ ಹತ್ತಿರವಿದ್ದ ಟೇಬಲ್‌ನ್ನು ಹಿಡಿದುಕೊಳ್ಳಲು ಯತ್ನಿಸಿದ್ದಾರೆ. ಆದರೆ, ಅದೂ ಸಾಧ್ಯವಾಗದೆ ಕೆಳಗೆ ಬಿದ್ದಿದ್ದಾರೆ. ಹೃದಯಾಘಾತದಿಂದಾಗಿ ಅವರ ಪ್ರಾಣ ಹೋಗಿದೆ.
ತಕ್ಷಣ ಪ್ರದೀಪ್ ಅವರ ಜಿಮ್ ಟ್ರೈನರ್ ಹಾಗೂ ಅಲ್ಲಿದ್ದ ಕೆಲವರು ಅವರ ಹತ್ತಿರ ಓಡಿ ಬಂದಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ ಅವರು ಆಸ್ಪತ್ರೆಗೆ ಬರುವುದಕ್ಕೂ ಮೊದಲೇ ಪ್ರಾಣ ಬಿಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಜಿಮ್‌ನಲ್ಲಿ ಪ್ರದೀಪ್ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿದೆ.
ಮುನ್ನೆಚ್ಚರಿಕೆ ಮುಖ್ಯ
ಪ್ರದೀಪ್ ಅವರನ್ನು ಪರಿಶೀಲನೆ ಮಾಡಿರುವ ವೈದ್ಯರು ವರ್ಕ್‌ಔಟ್ ಮಾಡುವವರಿಗೆ ಕೆಲವು ಎಚ್ಚರಿಕೆಗಳನ್ನು ಕೊಟ್ಟಿದ್ದಾರೆ. “ಈಗ ಪ್ರತಿಯೊಬ್ಬರಿಗೂ ಜಿಮ್‌ಗೆ ಹೋಗಿ ವರ್ಕ್‌ಔಟ್ ಮಾಡುವ ಅಭ್ಯಾಸ ಆರಂಭವಾಗಿದೆ. ಆದರೆ ಹೆಚ್ಚು ವಯಸ್ಸಾದವರು ಈ ರೀತಿ ವರ್ಕ್‌ಔಟ್ ಮಾಡುವುದಕ್ಕೂ ಮೊದಲು ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಪ್ರೋಟೀನ್‌ಗಳನ್ನು ಸೇವಿಸುವುದಕ್ಕೂ ಮೊದಲು ವೈದ್ಯರಿಂದ ಸಲಹೆ ಪಡೆಯಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ: Heart attack | ಕೈನಲ್ಲಿ ಟೀ ಹಿಡಿದು ನಡೆದು ಹೋಗುತ್ತಲೇ ಕುಸಿದು ಬಿದ್ದು ಸಾವು; ಬದುಕಿನ ಕ್ಷಣಿಕತೆ ಸಿಸಿಟಿವಿಯಲ್ಲಿ ಸೆರೆ!
ಕೆಲವು ತಿಂಗಳ ಹಿಂದೆ ಹಿಂದಿಯ ಹಾಸ್ಯ ನಟ ರಾಜು ಶ್ರೀವಾಸ್ತವ್ ಅವರು ಕೂಡ ಥ್ರೆಡ್‌ಮಿಲ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೆಲ ವಾರಗಳ ಕಾಲ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದ ಅವರು ನಂತರ ಪ್ರಾಣ ಬಿಟ್ಟಿದ್ದರು.