Site icon Vistara News

Delhi Rain | ಭಾರಿ ಮಳೆಗೆ ದಿಲ್ಲಿಯಲ್ಲಿ 13 ಸಾವು, ಶಾಲೆಗೆ ರಜೆ, ಮನೆಯಿಂದಲೇ ಕೆಲಸ ಮಾಡಲು ಸೂಚನೆ

Delhi Rain

ನವ ದೆಹಲಿ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜಧಾನಿ ದಿಲ್ಲಿಯಲ್ಲಿ (Delhi Rain) ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಸಂಬಂಧಿ ಘಟನೆಗಳಲ್ಲಿ ಈವರೆಗೆ ಒಟ್ಟು 13 ಜನರು ಮೃತಪಟ್ಟಿದ್ದು, ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮನೆಯಿಂದಲೇ ಕೆಲಸ ಮಾಡಲು ನೌಕರರಿಗೆ ಸೂಚಿಸಲಾಗಿದೆ. ನಗರದ ರಸ್ತೆಗಳೆಲ್ಲವೂ ನೀರಿನಿಂದ ಆವೃತ್ತವಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮತ್ತೊ ಆತಂಕದ ಸಂಗತಿ ಏನೆಂದರೆ, ಶುಕ್ರವಾರ ಇನ್ನಷ್ಟು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ದಕ್ಷಿಣ ದಿಲ್ಲಿ, ಆಗ್ನೇಯ ದಿಲ್ಲಿ, ಎನ್‌ಸಿಆರ್, ಯಮುನಾನಗರ, ಕುರುಕ್ಷೇತ್ರ, ಕೊಟ್ಪುಟ್ಲಿ, ಅಳ್ವಾರ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಗುರುಗ್ರಾಮ್‌ನ ಹಲವಡೆ ನೀರು ನಿಂತಿದ್ದು, ಸಂಚಾರಕ್ಕೆ ಭಾರಿ ತೊಂದರೆಯಾಗುತ್ತಿದೆ.

ಗುರುಗ್ರಾಮ್‌ನಲ್ಲಿ ಗುರುವಾರ 54 ಮಿಮೀ, ವಝೀರಾಬಾದ್ ಗರಿಷ್ಠ 60 ಮಿಮೀ, ಮಣೇಸರ್‌ 50 ಮಿಮೀ, ಸೋಹ್ನಾ 43 ಮಿಮೀ, ಹರ್ಸಾರ್ 54 ಮಿಮೀ, ಬಾದಶಪುರ 30 ಮಿಮೀ, ಪಟೌಡಿ 20 ಮತ್ತು ಫಾರೂಕ್‌ನಗರದಲ್ಲಿ 29 ಮಿಮೀ ಮಳೆಯಾಗಿದೆ. ಈ ಎಲ್ಲ ಪ್ರದೇಶಗಳಲ್ಲೂ ದಾಖಲೆಯ ಮಳೆ ಸುರಿದಿದೆ.

ಇದನ್ನೂ ಓದಿ | Heavy rain in delhi: ಭಾರಿ ಮಳೆಗೆ ನಲುಗಿದ ದಿಲ್ಲಿ, ಮುಳುಗಿದ ರಸ್ತೆ, ಹಾರದ ವಿಮಾನ

Exit mobile version