ಕೇದರನಾಥ: ಉತ್ತರಾಖಂಡದ ಕೇದಾರನಾಥ ಬಳಿಯ ಗರುಡ ಚೆಟ್ಟಿ ಬಳಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತ(Helicopter Crash)ದಲ್ಲಿ ಪೈಲಟ್ ಸೇರಿ ಸೇರಿ ಒಟ್ಟು 6 ಜನರು ಮೃತಪಟ್ಟಿದ್ದಾರೆ. ಈ ಹೆಲಿಕಾಪ್ಟರ್ ಕೇದಾರನಾಥ ಕ್ಷೇತ್ರಕ್ಕೆ ಯಾತ್ರಿಗಳನ್ನು ಕರೆದುಕೊಂಡು ಹೋಗುತ್ತಿತ್ತು. ಕೇದರನಾಥದಿಂದ 2 ಕಿ.ಮೀ ದೂರದಲ್ಲಿ ಈ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಕೆಲವರು ಗಾಯಗೊಂಡಿರುವ ಶಂಕೆಯೂ ಇದೆ.
ಈ ಹೆಲಿಕಾಪ್ಟರ್ ದುರಂತ ಕುರಿತು ತನಿಖೆಗೂ ಆದೇಶಿಸಲಾಗಿದೆ. ಹೆಲಿಕಾಪ್ಟರ್ ದುರಂತಕ್ಕೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪತನಕ್ಕೀಡಾದ ಹೆಲಿಕಾಪ್ಟರ್ ಕೇದಾರನಾಥದಿಂದ ಗುಪ್ತಕಾಶಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮೋಡ ಕವಿವ ವಾತಾವರಣ ಕಾರಣಕ್ಕಾಗಿ ಕಾಪ್ಟರ್ ಪತನವಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಪತನಕ್ಕೀಡಾದ ಕಾಪ್ಟರ್ ದಿಲ್ಲಿ ಮೂಲದ ಆರ್ಯನ್ ಏವಿಯೇಷನ್ ಕಂಪನಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.