ನವದೆಹಲಿ: ನಿರೀಕ್ಷೆಯಂತೆ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ಜಾರ್ಖಂಡ್‌ನ (Jharkhand) ಮಾಜಿ ಸಿಎಂ ಹೇಮಂತ್ ಸೋರೆನ್(Hemant Soren Arrested) ಅವರನ್ನು ಜಾರಿ ನಿರ್ದೇಶನಾಲಯವು(enforcement directorate) ಬುಧವಾರ ರಾತ್ರಿ ಅರೆಸ್ಟ್ ಮಾಡಿದೆ. ಸೋರೆನ್ ಅವರು ತಮ್ಮ ಸಿಎಂ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಬಳಿಕ, ಬಂಧಿಸಿದೆ.
यह एक विराम है
— Hemant Soren (@HemantSorenJMM) January 31, 2024
जीवन महासंग्राम है
हर पल लड़ा हूं, हर पल लड़ूंगा
पर समझौते की भीख मैं लूंगा नहीं
क्या हार में, क्या जीत में
किंचित नहीं भयभीत मैं
लघुता न अब मेरी छुओ
तुम हो महान, बने रहो
अपने लोगों के हृदय की वेदना
मैं व्यर्थ त्यागूंगा नहीं
हार मानूंगा नहीं…
जय झारखण्ड! pic.twitter.com/oduWMRGOmQ
ಇದಕ್ಕೂ ಸ್ವಲ್ಪ ಮೊದಲು, ಹೇಮಂತ್ ಸೋರೆನ್ ಅವರು ರಾಜಭವನದಲ್ಲಿ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ಈ ವೇಳೆ ತಮ್ಮ ಪಕ್ಷ ಹಾಗೂ ಮೈತ್ರಿ ಪಕ್ಷಗಳ ಶಾಸಕರೊಂದಿಗೆ ರಾಜಭವನಕ್ಕೆ ತೆರಳಿದ್ದರು. ಸಾಕಷ್ಟು ಬೆಳವಣಿಗೆಗಳ ಬಳಿಕ ಆಡಳಿತಾರೂಢ ಜೆಎಂಎಂ ನೇತೃತ್ವದ ಒಕ್ಕೂಟವು ಜಾರ್ಖಂಡ್‌ನ ಮುಂದಿನ ಮುಖ್ಯಮಂತ್ರಿಯಾಗಿ ಹಿರಿಯ ನಾಯಕ ಚಂಪಯಿ ಸೊರೆನ್ ಅವರ ಹೆಸರನ್ನು ಪ್ರಸ್ತಾಪಿಸಿತು. ಅವರು ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
"I am a tribal, i will fight & never bow down to this regime. Arrest me or do anything"#HemantSoren after arrest 🔥🔥 pic.twitter.com/7h94BmvZIm
— Amock (@Politics_2022_) January 31, 2024
ಬುಧವಾರ ಬೆಳಗ್ಗೆ ಹರಿದಾಡಿದ ಸುದ್ದಿಗಳ ಪ್ರಕಾರ, ಹೇಮಂತ್ ಸೋರೆನ್ ಅವರ ಪತ್ನಿಯೇ ಮುಂದಿನ ಸಿಎಂ ಆಗಲಿದ್ದಾರೆಂದು ಹೇಳಲಾಗಿತ್ತು. ಆದರೆ, ಸಂಜೆ ಹೊತ್ತಿಗೆ ಸಾರಿಗೆ ಸಚಿವ ಚಂಪಯಿ ಸೋರೆನ್ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ಘೋಷಿಸಲಾಯಿತು. ಇದಕ್ಕೆ ಕಾಂಗ್ರೆಸ್ ಕೂಡ ತನ್ನ ಬೆಂಬಲ ನೀಡಿದೆ.
One more feather in cap of corruption of INDI alliance in the form of #HemantSoren
— Shehzad Jai Hind (@Shehzad_Ind) January 31, 2024
There was a time Kejriwal used to demand arrest of Lalu , Soren, Sonia
These days this U turn master shamelessly defends them because he himself is mastermind of Sharab Ghotala
Kya se kya ho… pic.twitter.com/3fkY4ObgK9
ಇದು ಬ್ರೇಕಿಂಗ್ ಸುದ್ದಿಯಾಗಿದ್ದು, ಇನ್ನಷ್ಟು ಮಾಹಿತಿ ನಿರೀಕ್ಷಿಸಿ…
ಈ ಸುದ್ದಿಯನ್ನೂ ಓದಿ: Jharkhand Politics: ಹೇಮಂತ್ ಸೋರೆನ್ ರಾಜೀನಾಮೆ, ಜಾರ್ಖಂಡ್ ನೂತನ ಸಿಎಂ ಚಂಪಯಿ ಸೋರೆನ್!