ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ (isro) ಚಂದ್ರನ (Chandrayaan -3) ಮೇಲೆ ಇಳಿಸಿರುವ ಚಂದ್ರಯಾನ 3 ಲ್ಯಾಂಡರ್ನ ಒಳಗಿದ್ದ ರೋವರ್ (Rover) ಹೊರಕ್ಕೆ ಬಂದು ಅನ್ವೇಷಣೆ ಆರಂಭ ಮಾಡಿದೆ. ಇದರ ವಿಡಿಯೊವನ್ನು ಇಸ್ರೊ ಸಂಸ್ಥೆ ಬಿಡುಗಡೆ ಮಾಡಿದೆ. ಪ್ರಜ್ಞಾನ್ ರೋವರ್ ಲ್ಯಾಂಡರ್ ಒಳಗಿಂದ ಹೊರಕ್ಕೆ ಬರುತ್ತಿರುವ ವಿಡಿಯೊವನ್ನು ಶೇರ್ ಮಾಡಿದ ತಕ್ಷಣವೇ ಕುತೂಹಲಿಗರ ಗಮನ ಸೆಳೆದಿದೆ.
ವಿಡಿಯೊ ಡಿಲೀಟ್ ಮಾಡಿದ ಇಸ್ರೊ
ಚಂದ್ರಯಾನ -2 ಆರ್ಬಿಟರ್ ತನ್ನ ಹೈ ಡೆಫಿನಿಷಿನ್ ಕ್ಯಾಮೆರಾವನ್ನು ಬಳಸಿಕೊಂಡು ಚಂದ್ರನ ಮೇಲೆ ಎರಡು ದಿನದ ಹಿಂದೆ ಕಾಲಿಟ್ಟಿರುವ ಚಂದ್ರಯಾನ 3 ಲ್ಯಾಂಡರ್ ಅನ್ನು ಗುರುತಿಸಿದೆ ಎಂದು ಇಸ್ರೋ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡು ತಿಳಿಸಿತ್ತು. 2019 ರಲ್ಲಿ ಚಂದ್ರಯಾನ 2 ರ ಲ್ಯಾಂಡರ್ ಚಂದ್ರನ ಮೇಲೆ ಕ್ರ್ಯಾಶ್ ಲ್ಯಾಂಡ್ ಆದ ಬಳಿಕದಿಂದ ಅದರ ಆರ್ಬಿಟರ್ ಕಳೆದ ನಾಲ್ಕು ವರ್ಷಗಳಿಂದ ಪ್ರಮುಖ ಡೇಟಾವನ್ನು ಸಂಗ್ರಹಿಸುತ್ತಲೇ ಇದೆ. ಇದೀಗ ಲ್ಯಾಂಡರ್ ಮೊನ್ನೆ ಮೊನ್ನೆ ಇಳಿದಿರುವ ವಿಕ್ರಮ್ ಲ್ಯಾಂಡರ್ ಫೋಟೊವನ್ನು ಕಳುಹಿಸಿತ್ತು. ಇದೀಗ ಆ ಪೋಸ್ಟ್ ಅನ್ನು ಇಸ್ರೊ ಡಿಲೀಟ್ ಮಾಡಿದೆ. ಆದರೆ ಅದಕ್ಕೆ ಕಾರಣ ಕೊಟ್ಟಿಲ್ಲ.
ಚಂದ್ರಯಾನ 3 ಮಿಷನ್ನ ‘ವಿಕ್ರಮ್’ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿದ ಕೆಲವೇ ಗಂಟೆಗಳ ನಂತರ, ಇಸ್ರೋದ ತನ್ನ ಹಿಂದಿನ ಚಂದ್ರ ಮಿಷನ್ ಆರ್ಬಿಟರ್ ಮೂಲಕ ಅದರ ಚಿತ್ರವನ್ನು ಸೆರೆ ಹಿಡಿದಿತ್ತು. ಇದು ಪ್ರಸ್ತುತ ಚಂದ್ರನ ಮೇಲ್ಮೈನ ಉತ್ತಮ ರೆಸಲ್ಯೂಶನ್ ಫೋಟೋ ಆಗಿದೆ.
“ನಾನು ನಿನ್ನನ್ನು ಬೇಹುಗಾರಿಕೆ ಮಾಡುತ್ತೇನೆ! “ಚಂದ್ರಯಾನ -2 ಆರ್ಬಿಟರ್, ಚಂದ್ರಯಾನ -3 ಲ್ಯಾಂಡರ್ ಅನ್ನು ಫೋಟೋಶೂಟ್ ಮಾಡಿದೆ” ಎಂದು ಇಸ್ರೋ ಎಕ್ಸ್ ನಲ್ಲಿ ಪೋಸ್ಟ್ ಮಾಡಿತ್ತು.
ಚಂದ್ರಯಾನ -2ರ ಆರ್ಬಿಟರ್ ಹೊಂದಿರುವ ಹೈ-ರೆಸಲ್ಯೂಶನ್ ಕ್ಯಾಮೆರಾ (ಒಎಚ್ಆರ್ಸಿ) – ಪ್ರಸ್ತುತ ಚಂದ್ರನ ಸುತ್ತಲೂ ಸುತ್ತುತ್ತಿರುವ ಅತ್ಯುತ್ತಮ ರೆಸಲ್ಯೂಶನ್ ಕ್ಯಾಮೆರಾ ಕಣ್ಣಾಗಿದೆ. ಆ ಕ್ಯಾಮೆರಾ ನಮ್ಮದೇ ಲ್ಯಾಂಡರ್ನ ಚಿತ್ರವನ್ನು ಸೆರೆ ಹಿಡಿದಿತ್ತು.
ಈ ಚಿತ್ರವನ್ನು ಯಾವುದೇ ಕಾರಣ ನೀಡದೇ ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಲಾಗಿದೆ. ಚಂದ್ರಯಾನ -3 ಮಿಷನ್ನ ಪ್ರತ್ಯೇಕ ಎಕ್ಸ್ ಖಾತೆಯೂ ಇದೇ ರೀತಿಯ ಪೋಸ್ಟ್ ಅನ್ನು ಹಂಚಿಕೊಂಡಿತ್ತು. ಆ ಹ್ಯಾಂಡಲ್ನಲ್ಲಿ ಚಿತ್ರ ಲಭ್ಯವಿದೆ.
ಇದನ್ನೂ ಓದಿ : Chandrayaan 3: ವಿಕ್ರಮ್ ಲ್ಯಾಂಡರ್ ಕಣ್ಣಿನಲ್ಲಿ ಸೆರೆಯಾದ ಲ್ಯಾಂಡಿಂಗ್ ವೇಳೆಯ ರೋಚಕ ಚಂದಿರ!
ಪ್ರಜ್ಱನ್ ರೋವರ್ ಅನ್ನು ಹೊಟ್ಟೆಯಲ್ಲಿ ಹೊಂದಿರುವ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ. ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹದ ಅಜ್ಞಾತ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗಿದೆ.
ಸಂಶೋಧನೆ ಆರಂಭ
ಲ್ಯಾಂಡರ್ ಮಾಡ್ಯೂಲ್ (ಎಲ್ಎಂ) ಪೇಲೋಡ್ಗಳನ್ನಿ ಆನ್ ಮಾಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಹಿಂದೆ ತಿಳಿಸಿತ್ತು.
ಎಲ್ಲಾ ಚಟುವಟಿಕೆಗಳು ನಿಗದಿತ ಸಮಯಕ್ಕೆ ನಡೆಯುತ್ತಿವೆ. ಎಲ್ಲಾ ವ್ಯವಸ್ಥೆಗಳು ಸಲೀಸಾಗಿ ಕೆಲಸ ಮಾಡುತ್ತಿದೆ. ಲ್ಯಾಂಡರ್ ಮಾಡ್ಯೂಲ್ ಪೇಲೋಡ್ ಗಳಾದ ಐಎಲ್ಎಸ್ ಎ, ರಂಭಾ ಮತ್ತು ಚಾಸ್ಟೆ ಇಂದು ಆನ್ ಆಗಿವೆ. ರೋವರ್ ಮೊಬಿಲಿಟಿ ಕಾರ್ಯಾಚರಣೆಗಳು ಪ್ರಾರಂಭವಾಗಿವೆ. ಪ್ರೊಪಲ್ಷನ್ ಮಾಡ್ಯೂಲ್ನಲ್ಲಿ ಶೇಪ್ ಪೇಲೋಡ್ ಅನ್ನು ಭಾನುವಾರ ಆನ್ ಮಾಡಲಾಗಿದೆ ಎಂದು ಇಸ್ರೊ ಪೋಸ್ಟ್ ಮಾಡಿ ತಿಳಿಸಿದೆ.
ರೋವರ್ ಚಲನೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.
ಲ್ಯಾಂಡರ್ ಉದ್ದೇಶಿತ ಸ್ಥಳದಲ್ಲಿಯೇ ಇಳಿದಿದೆ. ಲ್ಯಾಂಡಿಂಗ್ ಸ್ಥಳವನ್ನು 4.5 ಕಿಮೀ x 2.5 ಕಿಮೀ ಎಂದು ಗುರುತಿಸಲಾಗಿದೆ. ಆ ಜಾಗವೇ ನಿಖರ ಲ್ಯಾಂಡಿಂಗ್ ಸ್ಥಳವೆಂದು ಗುರುತಿಸಲಾಗಿದೆ. ಆ ಸ್ಥಳದಿಂದ 200 ಮೀಟರ್ ವ್ಯಾಪ್ತಿಯೊಳಗೆ ಇಳಿಯಿತು. ಇದರರ್ಥ ಇದು ಲ್ಯಾಂಡಿಂಗ್ಗೆ ಗುರುತಿಸಲಾದ ಪ್ರದೇಶದೊಳಗೆ ಇದೆ ಎಂದು ಸೋಮನಾಥ್ ಪಿಟಿಐಗೆ ತಿಳಿಸಿದ್ದಾರೆ.