1. BK Hariprasad: ಮತ್ತೆ ಸಿಎಂ ವಿರುದ್ಧ ಸಿಡಿದ ಬಿ.ಕೆ.ಹರಿಪ್ರಸಾದ್, ಡಿಕೆಶಿಗೂ ತಿವಿತ
ಬೆಂಗಳೂರು: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದ ಕಾಂಗ್ರೆಸ್ ಹಿರಿಯ ನಾಯಕ, ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ (BK Hariprasad) ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದು, ಜತೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಾರ್ಯ ವೈಖರಿ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ರೆಬೆಲ್ಗಳಿಗೆ ಮಣೆ; ಹರಿಪ್ರಸಾದ್, ಪೈಲೆಟ್ಗೆ ಸ್ಥಾನ
2. ಅತ್ತ ರಷ್ಯಾ ನೌಕೆ ತೆವಳುತ್ತಿದ್ದರೆ; ಇತ್ತ ಭಾರತದ ನೌಕೆಯ ವೇಗ ತಗ್ಗಿಸುವಿಕೆ ಪೂರ್ಣ; ಮುಂದಿನ ನಿಲ್ದಾಣ ಚಂದ್ರನೇ!
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಹತ್ವಾಕಾಂಕ್ಷಿ ಚಂದ್ರಯಾನ 3 (Chandrayaan 3) ಮಿಷನ್ ಹಂತಿಮ ಹಂತ ತಲುಪಿದೆ. ವಿಕ್ರಮ್ ಲ್ಯಾಂಡರ್‌ನ ವೇಗ ತಗ್ಗಿಸುವಿಕೆಯನ್ನು (Deboosting) ಎರಡನೇ ಹಾಗೂ ಕೊನೆಯ ಬಾರಿಗೆ ಭಾನುವಾರ (ಆಗಸ್ಟ್ 20) ಬೆಳಗಿನ ಜಾವ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇನ್ನು ಮುಂದಿನ ನಿಲ್ದಾಣ ಚಂದ್ರನೇ ಆಗಿದ್ದಾನೆ. ಒಂದೆಡೆ ರಷ್ಯಾದ ಲೂನಾ 25 ನೌಕೆಯು ಚಂದ್ರನ ಅಂಗಳದಲ್ಲಿ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದರೆ, ಭಾರತದ ನೌಕೆಯು ಸುರಕ್ಷಿತವಾಗಿದೆ. ಹಾಗಾಗಿ, ನಮ್ಮದೇ ನೌಕೆಯು ದಕ್ಷಿಣ ಧ್ರುವದಲ್ಲಿ ಮೊದಲು ಇಳಿಯಲಿದೆ ಎಂದು ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Chandrayana – 3 : ಆ. 23ರಂದು ಸಂಜೆ 6:04ಕ್ಕೆ ಚಂದ್ರಯಾನ 3 ಲ್ಯಾಂಡ್; ಇನ್ನಷ್ಟು ಮಾಹಿತಿ ಪ್ರಕಟಿಸಿದ ಇಸ್ರೊ
3. Power Point with HPK : ಭಾಷಣದ ಉತ್ಸಾಹದಲ್ಲಿ ಸಿದ್ದರಾಮಯ್ಯ ನಂಗೂ-ನಿಂಗೂ ಫ್ರೀ ಅಂದ್ರು ಅಷ್ಟೆ: ಕೆ.ಜೆ. ಜಾರ್ಜ್
ಬೆಂಗಳೂರು: ಸಿದ್ದರಾಮಯ್ಯ (CM Siddramaiah) ಅವರು ಚುನಾವಣೆಗೆ ಮೊದಲು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು (Congress Guarantee scheme) ಎಲ್ಲರಿಗೂ ಫ್ರೀ ಎಂದು ಹೇಳಿರುವುದು ಭಾಷಣ ಮಾಡುವ ಉತ್ಸಾಹದಲ್ಲಿಯೇ ವಿನಃ ಅದನ್ನು ಎಲ್ಲರಿಗೂ ಎಂದು ಅರ್ಥೈಸಬಾರದು. ಅವರು ಹೇಳಿರುವುದು ಬಹುಪಾಲು ಜನರಿಗೆ ಉಚಿತ ಎಂಬ ಅರ್ಥದಲ್ಲಾಗಿದೆ ಎಂದು ಬೆಂಗಳೂರಿನ ಸರ್ವಜ್ಞ ನಗರ ಶಾಸಕ, ಇಂಧನ ಸಚಿವ ಕೆ.ಜೆ. ಜಾರ್ಜ್ (KJ George) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Power Point with HPK : ಗೌಳಿವಾಡ ಸೇರಿ 2 ಗ್ರಾಮಕ್ಕೆ ಕೂಡಲೇ ವಿದ್ಯುತ್: ವಿಸ್ತಾರ ನ್ಯೂಸ್ ವರದಿಗೆ ಜಾರ್ಜ್ ಸ್ಪಂದನೆ
4. Govt School : ಇನ್ಮುಂದೆ ಸರ್ಕಾರಿ ಶಾಲೆಯಲ್ಲೂ ಪ್ರೀ ನರ್ಸರಿ
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲೂ (Govt School) ಇನ್ನು ಮುಂದೆ ಪೂರ್ವ ಪ್ರಾಥಮಿಕ ತರಗತಿ (Lkg Class) ಪ್ರಾರಂಭಿಸಲಾಗುತ್ತಿದೆ. ಮುಂದಿನ 2023-24ರ ಶೈಕ್ಷಣಿಕ ವರ್ಷಕ್ಕೆ ಆಯ್ದ 262 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (Pre Primary Schools Opening) ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಕೆಲ ಷರತ್ತುಗಳೊಂದಿಗೆ ನಡೆಸಲು ಕೇಂದ್ರ ಶಿಕ್ಷಣ ಇಲಾಖೆಯ ಪಿಎಬಿಯಲ್ಲಿ ಅನುಮತಿ ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Onion Price : ಈರುಳ್ಳಿ ತುರ್ತು ಸಂಗ್ರಹ 5 ಲಕ್ಷ ಟನ್ಗೆ ಹೆಚ್ಚಿಸಿದ ಕೇಂದ್ರ ಸರಕಾರ
ನವದೆಹಲಿ: ಟೊಮೆಟೊ ಬಳಿಕ ಇದೀಗ ಈರುಳ್ಳಿ ಬೆಲೆಯು (Onion Price Rise) ಗಗನಕ್ಕೇರುತ್ತಿದೆ. ಈರುಳ್ಳಿಯ ಬೆಲೆ ಏರಿಕೆಯು ಸರಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅಂದಾಜಿಸಿರುವ ಆಡಳಿತಗಾರರು ನಿಯಂತ್ರಣಕ್ಕೆ ನಾನಾ ಸರ್ಕಸ್ ಮಾಡುತ್ತಿದ್ದಾರೆ. ಈರುಳ್ಳಿ ರಫ್ತಿನ (Onion Export) ಮೇಲೆ ಶೇಕಡಾ 40ರಷ್ಟು ತೆರಿಗೆ ವಿಧಿಸುವ ಮೂಲಕ ವಿದೇಶಕ್ಕೆ ಈರುಳ್ಳಿ ಹೋಗದಂತೆ ನೋಡಿಕೊಂಡಿರುವ ಜತೆಗೆ ಇದೀಗ ತುರ್ತು ಸಂಗ್ರಹದ ಪ್ರಮಾಣವನ್ನೂ ಏರಿ ಮಾಡಲು ನಿರ್ಧರಿಸಿದೆ. 3 ಲಕ್ಷ ಟನ್ ಆರಂಭಿಕ ಖರೀದಿ ಗುರಿಯನ್ನು ಸಾಧಿಸಲಾಗಿದ್ದು ಅದರ ಪ್ರಮಾಣವನ್ನು 5 ಲಕ್ಷ ಟನ್ಗೆ ಏರಿಕೆ ಮಾಡಲಾಗಿದೆ ಈ ನಿಟ್ಟಿನಲ್ಲಿ, ಗ್ರಾಹಕ ವ್ಯವಹಾರಗಳ ಇಲಾಖೆ ಎನ್ಸಿಎಫ್ (NCFC) ಮತ್ತು ನಾಫೆಡ್ಗೆ (NAFED) ಹೆಚ್ಚುವರಿ ಖರೀದಿ ಗುರಿಯನ್ನು ಸಾಧಿಸಲು ತಲಾ 1.00 ಲಕ್ಷ ಟನ್ ಸಂಗ್ರಹಿಸಲು ನಿರ್ದೇಶನ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Weather Report : ಆ.21ರಂದು ಬಿರುಗಾಳಿ ಸಹಿತ ಗುಡುಗಿನ ಮಳೆ!
7. Rahul Gandhi On China: ಚೀನಾದಿಂದ ಭಾರತದ ಜಾಗ ವಶ ಎಂದ ರಾಹುಲ್‌ಗೆ ನಿವೃತ್ತ ಲೆಫ್ಟಿನೆಂಟ್ ಜನರಲ್ ಚಾಟಿ
8. ICC World Cup: ಮತ್ತೆ ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿ ಬದಲಾವಣೆ; ಈ ಬಾರಿಯೂ ಪಾಕ್ ಪಂದ್ಯದ್ದೇ ಸಮಸ್ಯೆ
ಈ ಸುದ್ದಿಯನ್ನೂ ಓದಿ : Asia Cup: ಏಷ್ಯಾಕಪ್ನ ಭಾರತ ಸಂಭಾವ್ಯ ತಂಡದ ಪಟ್ಟಿ ಸೋರಿಕೆ; ಸ್ಟಾರ್ ಆಟಗಾರನಿಗಿಲ್ಲ ಅವಕಾಶ
9. Suprestar Rajnikanth : ಅಯೋಧ್ಯೆಯ ಹನುಮಾನ್ ಮಂದಿರ ದರ್ಶನ ಮಾಡಿದ ಸೂಪರ್ಸ್ಟಾರ್ ರಜನಿಕಾಂತ್
10. Wife Missing : ಗಂಡ ಬಾತ್‌ರೂಂನಲ್ಲಿ, ಹೆಂಡತಿ ಪ್ರಿಯತಮನ ಜತೆಯಲ್ಲಿ ಪರಾರಿ!
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ..