ಮುಂಬೈ: ಅತ್ಯಾಚಾರ ಪ್ರಕರಣ(Rape Case)ವನ್ನು ಒಪ್ಪಂದದ ಮೂಲಕ ಬಗೆಹರಿಸುವ ಪ್ರಸ್ತಾಪಕ್ಕೆ ಬಾಂಬೆ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ. ಆರೋಪಿಯಾಗಿರುವ ಬಿನೋಯ್ ಕೋಡಿಯೇರಿ, ಸಂತ್ರಸ್ತ ಮಹಿಳೆಗೆ 80 ಲಕ್ಷ ರೂ. ಪರಿಹಾರವಾಗಿ ನೀಡುವುದು ಕೋರ್ಟ್ ಸಮ್ಮತಿಸಿದೆ. ಕೇರಳದ ಸಿಪಿಎಂ ಪಕ್ಷದ ಹಿರಿಯ ನಾಯಕ ಕೋಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೋಯ್ ಕೋಡಿಯೇರಿ ವಿರುದ್ಧ ಬಿಹಾರದ ಮಹಿಳೆಯೊಬ್ಬಳು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.
ನ್ಯಾಯಮೂರ್ತಿ ಆರ್ ಪಿ ಮೊಹಿತೆ ದೆರೆ ಮತ್ತು ಎಸ್ ಎಂ ಮೊದಕ್ ಅವರಿದ್ದ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠವು, ಇಬ್ಬರಿಂದಲೂ ಪ್ರಸ್ತಾಪವಾದ ಈ ಒಪ್ಪಂದಕ್ಕೆ ಸಮ್ಮತಿ ನೀಡಿತು. ಈ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿದೆ.
ನ್ಯಾಯಾಲಯಕ್ಕೆ ಒದಗಿಸಲಾಗಿರುವ ದಾಖಲೆಗಳ ಪ್ರಕಾರ, ಸಂತ್ರಸ್ತ ಮಹಿಳೆಯು 80 ಲಕ್ಷ ರೂ. ಪಡೆಯಲಿದ್ದಾಳೆ. ಜತೆಗೇ, ಅವರಿಗೆ ಜನಿಸಿದ ಮಗುವಿನ ತಂದೆಯ ಸ್ಥಾನವನ್ನು ಬಿನೋಯ್ ನಿರಾಕರಿಸುವಂತಿಲ್ಲ ಎಂಬ ಷರತ್ತು ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳಲ್ಲಿ ಇದೆ.
ಇದೇ ನ್ಯಾಯಾಲಯದ ಮತ್ತೊಂದು ವಿಭಾಗೀಯ ಪೀಠವು, ಮದುವೆ ಪ್ರಸ್ತಾಪವನ್ನು ಮಂಡಿಸಿತ್ತು. ಆ ಬಳಿಕ ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವರ್ಗಾವಣೆಯನ್ನು ಮಾಡಲಾಗಿತ್ತು. ಕೋಡಿಯೇರಿ ವಿರುದ್ಧ 2019ರಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ | ಸಾಮೂಹಿಕ ಅತ್ಯಾಚಾರಕ್ಕೊಳಗಾದ ಹುಡುಗಿ ಚಿತ್ರ, ವಿಡಿಯೊ ವೈರಲ್ ಮಾಡಿದ ಬಿಜೆಪಿ ಶಾಸಕನ ಮೇಲೆ ಕೇಸ್