ಮುಂಬಯಿ: ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಒಂದು ದಿನದ ಮಟ್ಟಿಗೆ ಜಾಮೀನು ನೀಡುವಂತೆ ಕೋರಿದ ಮಹಾರಾಷ್ಟ್ರದ ಸಚಿವ, ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರ ಅರ್ಜಿಯನ್ನು ಬಾಂಬ್ ಹೈಕೋರ್ಟ್ ವಜಾ ಮಾಡಿದೆ.
ನಿನ್ನೆ (ಜೂನ್ 9) ರಂದು ನವಾಬ್ ಮಲಿಕ್ ರಾಜ್ಯಸಭಾ ಚುನಾವಣೆಗೆ ಮತದಾನ ಮಾಡಲು ಒಂದು ದಿನದ ಮಟ್ಟಿಗೆ ಜಾಮೀನು ನೀಡುವಂತೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇಂದು (ಶುಕ್ರವಾರ) ವಿಚಾರಣೆ ನಡೆಸಿದ ಕೋರ್ಟ್ ಅರ್ಜಿ ತಿರಸ್ಕಾರ ಮಾಡಿದೆ.
ಇದನ್ನು ಓದಿ| ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ, ಫಲಿತಾಂಶ 21ಕ್ಕೆ; ಚುನಾವಣಾ ಆಯೋಗ ಘೋಷಣೆ
ಸಚಿವರ ಪರ ವಕೀಲರು ಕೋರ್ಟ್‌ನಲ್ಲಿ ಜಾಮೀನಿಗಾಗಿ ಒತ್ತಾಯಿಸುತ್ತಿಲ್ಲ. ಕೇವಲ ನವಾಬ್ ಮಲಿಕ್‌ರನ್ನು ಮತ ಚಲಾಯಿಸಲು ವಿಧಾನ ಭವನಕ್ಕೆ ಕರೆದೊಯ್ಯಲು ಒಂದು ದಿನದ ಮಟ್ಟಿಗೆ ಪೊಲೀಸ್ ಬೆಂಗಾವಲು ನೀಡುವಂತೆ ಮನವಿ ಮಾಡಿಕೊಂಡರು. ಆದರೆ ಕೋರ್ಟ್ ಅರ್ಜಿಯನ್ನು ಮತ್ತೊಮ್ಮೆ ತಿದ್ದುಪಡಿ ಮಾಡಿ ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸೂಚನೆ ನೀಡಿದೆ.
ಈ ಮೊದಲು ಮತ್ತೊಬ್ಬ ಎನ್‌ಸಿಪಿ ನಾಯಕ ಅನಿಲ್ ದೇಶ್ ಮುಖ್ ಅವರು ಕೂಡ ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ಮಾಡಿಕೊಡುವಂತೆ ಮುಂಬೈನ ವಿಶೇಷ ನ್ಯಾಯಲಯದ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ಕೂಡ ಕೋರ್ಟ್ ವಜಾಗೊಳಿಸಿತ್ತು. ಈಗ ನವಾಬ್ ಮಲಿಕ್ ಅವರ ಅರ್ಜಿಯನ್ನು ಕೂಡ ವಜಾಗೊಳಿಸಿದೆ. ಅಲ್ಲದೆ ಕೈದಿಗಳಿಗೆ ಜನಪ್ರತಿನಿಧಿಗಳ ಕಾಯ್ದೆಯಡಿ ಮತ ಚಲಾಯಿಸುವ ಹಕ್ಕು ಇರುವುದಿಲ್ಲ ಎಂದು ಹೇಳಿದೆ.
ಇದನ್ನು ಓದಿ| ವಿಸ್ತಾರ Explainer: ರಾಜ್ಯಸಭೆ ಮೇಲುಗೈಗೆ ಬಿಗ್ ಫೈಟ್, ಮೇಲ್ಮನೆಗೆ ಇರುವ ಪವರ್ ಏನು? ಸದಸ್ಯರ ಆಯ್ಕೆ ಮಾಡೋದು ಹೇಗೆ?
ಕುಖ್ಯಾತ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಫೆಬ್ರವರಿ 23ರಂದು ಸಚಿವ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಇನ್ನು ಭ್ರಷ್ಟಚಾರ ಆರೋಪದಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಅನಿಲ್ ದೇಶ್‌ಮುಖ್‌ರನ್ನು ಬಂಧಿಸಲಾಗಿತ್ತು.