Site icon Vistara News

Himachal Election Result | ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಮತ ಗಳಿಕೆಯ ಅಂತರ 1%ಕ್ಕಿಂತಲೂ ಕಡಿಮೆ!

vote share

ನವ ದೆಹಲಿ: ಹಿಮಾಚಲ ಪ್ರದೇಶದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ, (Himachal Election Result ) ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಮತಗಳ ಗಳಿಕೆಯಲ್ಲಿ ಅಂತರ 1%ಕ್ಕಿಂತಲೂ ಕಡಿಮೆಯಾಗಿದೆ.

ಕಾಂಗ್ರೆಸ್ 43.90% ಹಾಗೂ ಬಿಜೆಪಿ 42.99% ಮತ ಗಳಿಸಿದೆ. ಅಂದರೆ ಕೇವಲ 0.91 ಮತಗಳ ಅಂತರ ಮಾತ್ರ ಉಂಟಾಗಿದೆ. ಇತರರು 10.4% ಮತಗಳನ್ನು ಗಳಿಸಿದ್ದಾರೆ.

68 ಸೀಟುಗಳ ವಿಧಾನ ಸಭೆಯಲ್ಲಿ ಕಾಂಗ್ರೆಸ್‌ 40 ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಬಹುಮತಕ್ಕೆ 35 ಸೀಟುಗಳ ಅವಶ್ಯಕತೆ ಇದೆ. ಸಿಎಂ ಜೈರಾಮ್‌ ಠಾಕೂರ್‌ ಗುರುವಾರ ಸೋಲನ್ನು ಒಪ್ಪಿಕೊಂಡಿದ್ದಾರೆ.

Exit mobile version