ನವದೆಹಲಿ: ಭಾರತ್ ಜೋಡೋ ಯಾತ್ರೆಯನ್ನು ಕೈಗೊಂಡಿರುವ ರಾಹುಲ್ ಗಾಂಧಿ (Rahul Gandhi) ಅವರು, ಹಿಂದಿ ಭಾಷೆ ಬಳಕೆ ಸಂಬಂಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಜಸ್ಥಾನದ ಅಲವರ್‌ನಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ಜಗತ್ತಿನ ಇತರ ಭಾಗದ ಜನರೊಂದಿಗೆ ನೀವು ಮಾತನಾಡಬೇಕಿದ್ದರೆ ಕೇವಲ ಹಿಂದಿ ಗೊತ್ತಿದ್ದರೆ ಸಾಲದು, ಇಂಗ್ಲಿಷ್ ಕೂಡ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಒಂದು ವೇಳೆ, ಜಗತ್ತಿನ ಇತರ ಭಾಗಗಳ ಜನರೊಂದಿಗೆ ಮಾತನಾಡಬೇಕಿದ್ದರೆ ಹಿಂದಿ ಕೆಲಸಕ್ಕೆ ಬರುವುದಿಲ್ಲ, ಆಗ ಇಂಗ್ಲಿಷ್ ಬೇಕಾಗುತ್ತದೆ. ಹಾಗಾಗಿ, ನಮ್ಮ ಬಡ ಕೃಷಿಕರು, ಕಾರ್ಮಿಕರ ಮಕ್ಕಳು ಓದಿ, ಅಮೆರಿಕನ್ನರೊಂದಿಗೆ ಸ್ಪರ್ಧಿಸಿ ಗೆಲ್ಲಬೇಕು. ಅವರು(ಅಮೆರಿಕ) ಬಳಸುವ ಭಾಷೆಯನ್ನು ಬಳಸಿಕೊಂಡು ಅವರ ವಿರುದ್ಧವೇ ಗೆಲ್ಲಬೇಕು. ಹಾಗಾಗಿ, ರಾಜಸ್ಥಾನದಲ್ಲಿ 1,700 ಇಂಗ್ಲಿಷ್ ಶಾಲೆಗಳನ್ನು ತೆರೆದಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದರು.
ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಸುವುದು ಬಿಜೆಪಿ ನಾಯಕರಿಗೆ ಬೇಕಾಗಿಲ್ಲ. ಆದರೆ, ಬಿಜೆಪಿಯ ನಾಯಕರು ಮಾತ್ರ ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಮ್ಮು ಸ್ಕೂಲಿಗೆ ಕಳುಹಿಸುತ್ತಾರೆ. ವಾಸ್ತವದಲ್ಲಿ ಅವರಿಗೆ ನಮ್ಮ ಬಡ ಕೃಷಿಕರು, ಕಾರ್ಮಿಕರ ಮಕ್ಕಳು ಇಂಗ್ಲಿಷ್ ಕಲಿಯುವುದು ಬೇಕಾಗಿಲ್ಲ. ಹಾಗಾಗಿ, ದೊಡ್ಡದಾಗಿ ಕನಸು ಕಾಣಿ ಎಂದು ಅವರು ಹೇಳಿದರು.
ಇದನ್ನೂ ಓದಿ | Rahul Gandhi | ಬಿಜೆಪಿ ಕಾರ್ಯಕರ್ತರತ್ತ ಕೈ ಬೀಸಿ, ಗಾಳಿಯಲ್ಲಿ ಮುತ್ತು ತೇಲಿಬಿಟ್ಟ ರಾಹುಲ್ ಗಾಂಧಿ!