Site icon Vistara News

Hindu Population: ಅಸ್ಸಾಂನಲ್ಲಿ ಹಿಂದುಗಳ ಸಂಖ್ಯೆ ಶೇ.10ರಷ್ಟು ಕುಸಿತ; ಲೆಕ್ಕ ಕೊಟ್ಟ ಹಿಮಂತ ಬಿಸ್ವಾ ಶರ್ಮಾ!

Hindu Population

ದಿಸ್ಪುರ: ಭಾರತದಲ್ಲಿ ಕೆಲ ದಶಕಗಳಿಂದ ಹಿಂದುಗಳ ಜನಸಂಖ್ಯೆಯು (Hindu Population) ಕಡಿಮೆಯಾಗಿದೆ ಎಂಬ ವರದಿಗಳು ಇತ್ತೀಚೆಗೆ ಕೇಳಿಬಂದು, ಭಾರಿ ಚರ್ಚೆಗೆ ಗ್ರಾಸವಾಗಿದ್ದವು. ಇದರ ಬೆನ್ನಲ್ಲೇ, ಅಸ್ಸಾಂನಲ್ಲಿ ಹಿಂದುಗಳ ಜನಸಂಖ್ಯೆಯು ಕಡಿಮೆಯಾಗಿದೆ ಎಂಬುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ತಿಳಿಸಿದ್ದಾರೆ. ಇದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

“ಅಸ್ಸಾಂ ಹಾಗೂ ಬಾಂಗ್ಲಾದೇಶದ ಜನಸಂಖ್ಯೆಯಲ್ಲಿ ಬದಲಾವಣೆಯಾಗಿರುವ ಕುರಿತು 2011ರ ಜನಗಣತಿಯ ಮಾಹಿತಿಯೇ ಹೇಳುತ್ತದೆ. ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್‌ನಲ್ಲೂ ಇದೇ ಪರಿಸ್ಥಿತಿ ಇದೆ. ಜನಗಣತಿ ದಾಖಲೆ ಪ್ರಕಾರ, ಅಸ್ಸಾಂನಲ್ಲಿ 1951ರಿಂದ 2011ರ ಅವಧಿಯಲ್ಲಿ ಹಿಂದು ಜನಸಂಖ್ಯೆಯ ಪ್ರಮಾಣವು ಶೇ.9.23ರಷ್ಟು ಕಡಿಮೆಯಾಗಿದೆ. ಬಾಂಗ್ಲಾದೇಶದಲ್ಲಂತೂ ಹಿಂದುಗಳ ಸ್ಥಿತಿ ಕಷ್ಟಕರವಾಗಿದ್ದು, ಶೇ.13.5ಕ್ಕೆ ಇಳಿಕೆಯಾಗಿದೆ” ಎಂಬುದಾಗಿ ವರದಿ ತಿಳಿಸಿದೆ.

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದಾಳಿ ನಡೆಸುತ್ತಿರುವ ಕುರಿತು ಮಾತನಾಡಿದ ಅವರು, “ಬಾಂಗ್ಲಾದೇಶದಲ್ಲಿ ಹಿಂದುಗಳ ಸ್ಥಿತಿಯು ಚಿಂತಾಜನಕವಾಗಿದೆ. ಗಾಜಾದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗಿದೆ ಎಂಬುದಾಗಿ ದೇಶದಲ್ಲಿ ಪ್ರತಿಭಟನೆ ನಡೆಸಿದರು. ಆದರೆ, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಆಗುತ್ತಿರುವ ದಾಳಿಗಳ ಕುರಿತು ಪ್ರತಿಪಕ್ಷಗಳ ನಾಯಕರು ಮಾತನಾಡುವುದಿಲ್ಲ. ಜಗತ್ತಿನ ಮುಸ್ಲಿಮರ ಬಗ್ಗೆ ಕಾಳಜಿ ತೋರುವ ಕಾಂಗ್ರೆಸ್‌, ಹಿಂದುಗಳ ಬಗ್ಗೆ ಯಾವುದೇ ಕಾಳಜಿ ತೋರುವುದಿಲ್ಲ” ಎಂದರು.

ಕೆಲ ದಿನಗಳ ಹಿಂದೆಯೂ ಹಿಮಂತ ಬಿಸ್ವಾ ಶರ್ಮಾ ಅವರು ಹಿಂದುಗಳ ಕುರಿತು ಮಾತನಾಡಿದ್ದರು. “ಹಿಂದುಗಳಿಂದ ದೇಶದಲ್ಲಿ ಕೋಮುವಾದ ಸೃಷ್ಟಿಯಾಗುವುದಿಲ್ಲ. ದೇಶದಲ್ಲಿ ಬಾಂಗ್ಲಾದೇಶ ಮೂಲದ ಧರ್ಮವು (ಇಸ್ಲಾಂ) ಕೋಮುವಾದ ಸೃಷ್ಟಿಸುತ್ತದೆ. ಇದಕ್ಕೆ ಲೋಕಸಭೆ ಚುನಾವಣೆಯೇ ಸಾಕ್ಷಿಯಾಗಿದೆ” ಎಂದು ಅವರು ಹೇಳಿದ್ದರು. ಅಸ್ಸಾಂನಲ್ಲಿ ಯಾವ ಧರ್ಮದವರು ಯಾವ ಪಕ್ಷಕ್ಕೆ ಮತ ನೀಡಿದ್ದಾರೆ ಎಂಬುದನ್ನು ವಿಶ್ಲೇಷಿಸುತ್ತ ಅವರು ಹೀಗೆ ಹೇಳಿದ್ದರು.

ಇದನ್ನೂ ಓದಿ: Himanta Sarma: ಹಿಂದು ಅಲ್ಲ, ಆ ಒಂದು ಧರ್ಮದಿಂದ ಕೋಮುವಾದ ಸೃಷ್ಟಿ ಎಂದ ಹಿಮಂತ ಶರ್ಮಾ! ಯಾವುದದು?

Exit mobile version