Site icon Vistara News

Hire And Fire Policy | ಕೆಲಸದಿಂದ ವಜಾಗೊಳಿಸುವ ನೀತಿ ಮಾನವ ಹಕ್ಕುಗಳ ವಿರೋಧಿ: ಎನ್‌ಎಚ್‌ಆರ್‌ಸಿ ಅಧ್ಯಕ್ಷ

Hire And Fire Policy

ನವದೆಹಲಿ: ಜಗತ್ತಿನಾದ್ಯಂತ ಫೇಸ್‌ಬುಕ್‌, ಟ್ವಿಟರ್‌ ಸೇರಿ ಹಲವು ಪ್ರಮುಖ ಬಹುರಾಷ್ಟ್ರೀಯ ಟೆಕ್‌ ಕಂಪನಿಗಳೇ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿವೆ. ಕೊರೊನಾದಿಂದ ಉಂಟಾದ ಆರ್ಥಿಕ ನಷ್ಟ ತೂಗಿಸುವುದು, ವೆಚ್ಚ ತಗ್ಗಿಸುವುದು ಸೇರಿ ಹಲವು ಕಾರಣ ನೀಡಿ ಕಂಪನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಇದರಿಂದ ಭಾರತಕ್ಕೂ ತೊಂದರೆಯಾಗಿದೆ. ಇದರ ಬೆನ್ನಲ್ಲೇ, “ಕೆಲಸದಿಂದ ವಜಾಗೊಳಿಸುವ ನೀತಿಯು (Hire And Fire Policy) ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ.ಅರುಣ್‌ ಕುಮಾರ್‌ ಮಿಶ್ರಾ ಹೇಳಿದ್ದಾರೆ.

ಜಸ್ಟಿಸ್‌ ಅರುಣ್‌ ಕುಮಾರ್‌ ಮಿಶ್ರಾ.

ದೆಹಲಿಯ ವಿಜ್ಞಾನ ಭವನದಲ್ಲಿ ವಿಶ್ವ ಮಾನವ ಹಕ್ಕುಗಳ ದಿನದ ಹಿನ್ನೆಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಕೆಲಸದಿಂದ ವಜಾಗೊಳಿಸುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗುತ್ತದೆ. ಹಾಗಾಗಿ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾಗೂ ಮಾನವ ಹಕ್ಕುಗಳ ಆಯೋಗ ಸೇರಿ ಇಂತಹ ಕ್ರಮಗಳನ್ನು ತಡೆಯಲು ಹಾದಿ ಕಂಡುಕೊಳ್ಳಬೇಕು” ಎಂದು ಸಲಹೆ ನೀಡಿದ್ದಾರೆ.

“ಜಾಗತೀಕರಣದಿಂದಾಗಿ ಅಪಾರ ಪ್ರಮಾಣದ ವಿದೇಶಿ ಬಂಡವಾಳ ಹೂಡಿಕೆಯಾಗುತ್ತದೆ. ಇದರಿಂದ ದೇಶ ದೇಶಗಳ ಮಧ್ಯೆ ಸ್ಪರ್ಧೆ, ಕಂಪನಿ ಕಂಪನಿಗಳ ಮಧ್ಯೆ ಅತೀವ ಸ್ಪರ್ಧೆ ಉಂಟಾಗುತ್ತದೆ. ಜಾಗತಿಕ ಮಾರುಕಟ್ಟೆ, ವಿಶ್ವದ ಬೆಳವಣಿಗೆಗಳಂತೆ ವರ್ತಿಸುತ್ತವೆ. ಹಾಗಾಗಿ, ಉದ್ಯೋಗಿಗಳು ಏಕಾಏಕಿ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Layoffs Season | ಟೆಕ್ ಕಂಪನಿಗಳು ಏಕೆ ಉದ್ಯೋಗ ಕಡಿತ ಮಾಡುತ್ತಿವೆ? ಇದಕ್ಕೇನು ಕಾರಣ?

Exit mobile version