ನವದೆಹಲಿ: ಹಲವು ಉಗ್ರ ಕೃತ್ಯಗಳ(Terror Incidents) ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ ಹಿಜ್ಬುಲ್ ಮುಜಾಹಿದ್ದೀನ್(Hizbul Mujahideen) ಸಂಘಟನೆಯ ಭಯೋತ್ಪಾದಕ ಜಾವೇದ್ ಮಟ್ಟೂನನ್ನು (Terrorist Javed Mattoo) ದಿಲ್ಲಿಯಲ್ಲಿ ಗುರುವಾರ ಬಂಧಿಸಲಾಗಿದೆ(Delhi Police). ಜಮ್ಮು ಕಾಶ್ಮೀರದಲ್ಲಿ ನಡೆದ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ಈತನ ಕೈವಾಡವಿದೆ.
ದಿಲ್ಲಿ ಪೊಲೀಸ್‌ನ ಸ್ಪೆಷಲ್ ಸೆಲ್ ಅಧಿಕಾರಿಗಳು ಉಗ್ರ ಜಾವೇದ್ ಮಟ್ಟೂನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಜಾವೇದ್‌ನಿಂದ ಪಿಸ್ತೂಲ್, ಮ್ಯಾಗ್‌ಜಿನ್ ಮತ್ತು ಕಳ್ಳತನ ಮಾಡಿದ ಕಾರನ್ನು ಪೊಲೀಸ್ ಅಧಿಕಾರಿಗಳ ತಂಡವು ವಶಪಡಿಸಿಕೊಂಡಿದೆ.
ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಮಟ್ಟೂ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿದ ಆರೋಪ ಎದುರಿಸುತ್ತಿದ್ದಾನೆ. ಭದ್ರತಾ ಏಜೆನ್ಸಿಗಳು ಉಗ್ರರ ಟಾಪ್ 10 ಪಟ್ಟಿಯಲ್ಲಿ ಜಾವೇದ್ ಮಟ್ಟೂ ಕೂಡ ಇದ್ದ. ಈತನನ್ನು ಹಿಡಿದುಕೊಟ್ಟವರಿಗೆ ತನಿಖಾ ಸಂಸ್ಥೆಗಳು 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದವು.
ಉಗ್ರ ಜಾವೇದ್ ಮಟ್ಟೂ ಜಮ್ಮು ಕಾಶ್ಮೀರದ ಸೋಪೋರ್ ನಿವಾಸಿಯಾಗಿದ್ದಾನೆ ಮತ್ತು ಅನೇಕ ಬಾರಿ ಆತ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದಾನೆ.
ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆ ವೇಳೆ, ಹಿಜ್ಬುಲ್ ಉಗ್ರ ಜಾವೇದ್‌ನ ಸಹೋದರ ರಯೀಸ್ ಮಟ್ಟೂ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಭಾರೀ ಸುದ್ದಿಯಲ್ಲಿದ್ದರು. ಈ ಸಂಬಂಧ ವಿಡಿಯೋ ಕೂಡ ಭಾರೀ ವೈರಲ್ ಆಗಿತ್ತು. ರಾಷ್ಟ್ರ ಧ್ವಜವನ್ನು ನಾನು ನನ್ನ ಮನಸಾರೆ ಹಾರಿಸಿದ್ದೇನೆ. ಇದಕ್ಕಾಗಿ ಯಾರಿಂದಲೂ ಒತ್ತಡ ಇರಲಿಲ್ಲ ಎಂದು ಹೇಳಿದ್ದ. ಆಗಸ್ಟ್ 14ರ ಬಳಿಕ ರಯೀಸ್ ಮೊದಲ ಬಾರಿಗೆ ತನ್ನ ಅಂಗಡಿಯನ್ನೂ ತೆರೆದಿದ್ದ.
ಈ ಸುದ್ದಿಯನ್ನೂ ಓದಿ: Kashmir Encounter: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಐವರು ಲಷ್ಕರ್ ಉಗ್ರರ ಹತ್ಯೆ