ನವದೆಹಲಿ: ಬುಧವಾರ ಸಂಭವಿಸಿದ ಲೋಕಸಭೆ ಭದ್ರತಾ ವೈಫಲ್ಯ (Security breach in Lok Sabha) ಪ್ರಕರಣ ಕುರಿತು ಕೇಂದ್ರ ಗೃಹ ಸಚಿವಾಲಯವು (Home Ministry) ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯ ಪ್ರಧಾನ ನಿರ್ದೇಶಕ ಅನಿಶ್ ದಯಾಲ್ ಸಿಂಗ್ (CRPF DG Anish Dayal Singh) ಅವರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಲಾಗುತ್ತಿದೆ (Probe Committee). ಈ ಸಮಿತಿಯಲ್ಲಿ ಇತರ ಭದ್ರತಾ ಪಡೆಗಳ ಅಧಿಕಾರಿಗಳು ಮತ್ತು ತಜ್ಞರು ಸದಸ್ಯರಾಗಿರಲಿದ್ದಾರೆ. ಈ ಮಾಹಿತಿಯನ್ನು ಗೃಹ ಸಚಿವಾಲಯವು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದೆ.
ತನಿಖಾ ಸಮಿತಿಯು ಭದ್ರತಾ ವೈಫಲ್ಯದ ಕಾರಣಗಳು, ಲೋಪಗಳನ್ನು ಗುರುತಿಸುವುದು ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳು ಕುರಿತು ಶಿಫಾರಸು ಮಾಡಲಿದೆ. ಸಮಿತಿಯು, ಸಂಸತ್ತಿನಲ್ಲಿ ಭದ್ರತೆಯನ್ನು ಸುಧಾರಿಸುವ ಸಲಹೆಗಳನ್ನು ಒಳಗೊಂಡಂತೆ ಶಿಫಾರಸುಗಳೊಂದಿಗೆ ತನ್ನ ವರದಿಯನ್ನು ಶೀಘ್ರವಾಗಿ ಸಲ್ಲಿಸಲಿದೆ ಎಂದು ಎಕ್ಸ್ ವೇದಿಕೆಯಲ್ಲಿ ಹಂಚಿಕೊಳ್ಳಲಾಗಿರುವ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.
ಬುಧವಾರ ಮಧ್ಯಾಹ್ನ ಇಬ್ಬರು ಆಗುಂತಕರು ವ್ಯಾಪಕ ಭದ್ರತೆಯ ನಡುವೆಯೂ ಹಳದಿ ಕ್ಯಾನಿಸ್ಟರ್ಸ್‌ಗಳನ್ನು ಲೋಕಸಭೆಗೆ ತೆಗೆದುಕೊಂಡು ಹೋಗಿ, ಎಸೆದು ದಾಂಧಲೆ ಮಾಡಿದ್ದಾರೆ. ಅವರಿಬ್ಬರು ವಿಸಿಟರ್ಸ್ ಗ್ಯಾಲರಿಯಿಂದ ಲೋಕಸಭೆ ಸದಸ್ಯರಿರುವ ಜಾಗಕ್ಕೆ ಜಂಪ್ ಮಾಡಿ, ಬಣ್ಣದ ಗ್ಯಾಸಿನ ಡಬ್ಬಿಗಳನ್ನು ಎಸೆದೆ, ಹಳಿದ ಹೊಗೆ ಸೃಷ್ಟಿಸಿ ಆತಂಕಕ್ಕೆ ಕಾರಣರಾದರು.
ಹೊಸ ಸಂಸತ್ತಿನಲ್ಲಿಅತ್ಯುನ್ನತ ಭದ್ರತೆಯ ಹೊರತಾಗಿಯೂ, ಭದ್ರತಾ ಉಲ್ಲಂಘನೆಯು ನಡೆಯಿತು. ಹಾಗಾಗಿ, ಈ ಘಟನೆಯ ಭದ್ರತಾ ವೈಫಲ್ಯ ಮತ್ತು ಭದ್ರತಾ ಲೋಪದೋಷಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ. ಸಂಸತ್ತು ಕಟ್ಟಡದ ಸುತ್ತಲಿನ ಬಹು ಸ್ತರದ ಭದ್ರತೆಯು ಹಿನ್ನೆಲೆಯಲ್ಲಿ ವಿವಿಧ ಪರಿಶೀಲನೆಗಳು, ತಪಾಸಣೆ, ಬ್ಯಾಗೇಜ್ ಚೆಕ್-ಇನ್ ಮತ್ತು ದೆಹಲಿ ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳು ಸೇರಿದಂತೆ ಅನೇಕ ಏಜೆನ್ಸಿಗಳು ನಡೆಸುವ ಇತರ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ.
ಲೋಕಸಭೆಗೆ ನುಗ್ಗಿದ ಇಬ್ಬರೂ ತಮ್ಮ ಬಣ್ಣದ ಸ್ಮೋಕ್ ಡಬ್ಬಿಗಳನ್ನು ಬೂಟ್‌ನಲ್ಲಿಟ್ಟುಕೊಂಡಿದ್ದರು ಎಂಬ ಶಂಕೆ ಇದೆ. ಹಾಗಾಗಿ, ಅವರು ಭದ್ರತಾ ತಪಾಸಣೆಯಲ್ಲಿ ಸುಲಭವಾಗ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರತಾಪ್ ಸಿಂಹ ಅವರನ್ನೂ ತನಿಖೆಗೆ ಒಳಪಡಿಸಲು ಒತ್ತಾಯ
ಈ ಮಧ್ಯೆ, ಇಬ್ಬರು ಆಗುಂತಕರಿಗೆ ವಿಸಿಟರ್ ಪಾಸ್ ಶಿಫಾರಸು ಮಾಡಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ್ ಅವರನ್ನೂ ತನಿಖೆ ಒಳಪಡಿಸಬೇಕು ಎಂದು ಪ್ರತಿಪಕ್ಷ ಇಂಡಿಯಾ ಕೂಟದ ನಾಯಕರು ಒತ್ತಾಯಿಸಿದ್ದಾರೆ. ಭದ್ರತಾ ವೈಫಲ್ಯವು ಭಯೋತ್ಪಾದನಾ ಕೃತ್ಯವೇ ಆಗಿದೆ ಎಂದು ಅವರು ಆರೋಪಿಸಿದ್ದಾರೆ.
ಲೋಕಸಭೆ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಆರು ಜನರ ಪೈಕಿ ಐವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರನ್ನು ಮೈಸೂರಿನ ಡಿ. ಮನೋರಂಜನ್(D Manoranjan), ಉತ್ತರ ಪ್ರದೇಶದ ಸಾಗರ್ ಶರ್ಮಾ(Sagar Sharma), ಮಹಾರಾಷ್ಟ್ರದ ಲಾತೂರಿನ ಅಮೋಲ್ ಶಿಂಧೆ (Amol Shinde) ಮತ್ತು ಹರ್ಯಾಣದ ಹಿಸಾರ್‌ನ ನೀಲಮ್ ದೇವಿ(Neelam Devi), ಗುರುಗ್ರಾಮದ ಲಲಿತ್ ಝಾ (Lalit Jha) ಮತ್ತು ವಿಕ್ಕಿ ಶರ್ಮಾ (Vicky Sharma) ಎಂದು ಗುರುತಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Security breach in Loksabha : ಸಾಗರ್ ಶರ್ಮಾಗೆ ಪಾಸ್ ಕೊಟ್ಟಿದ್ದೇಕೆ?: ಇಲ್ಲಿದೆ ಪ್ರತಾಪ್‌ಸಿಂಹ ವಿವರಣೆ