ನವದೆಹಲಿ: 75 ವರ್ಷದ ಹಿರಿಯ ವ್ಯಕ್ತಿಯನ್ನು ಹನಿಟ್ರ್ಯಾಪ್ (Hone Trap) ಮಾಡಿದ ಆರೋಪದ ಮೇರೆಗೆ ಕೇರಳ ಟಿವಿ ನಟಿ ನಿತ್ಯಾ ಶಶಿ (TV Actress Nithya Sasi) ಮತ್ತು ಆಕೆಯ ಗೆಳೆಯ ಬಿನು (Binu) ಅವರನ್ನು ಶುಕ್ರವಾರ ಕೇರಳ ಪೊಲೀಸರು (Kerala Police) ಬಂಧಿಸಿದ್ದಾರೆ. ಸಂತ್ರಸ್ತ ವ್ಯಕ್ತಿಯಿಂದ ಇವರಿಬ್ಬರೂ 11 ಲಕ್ಷ ರೂ. ಸುಲಿಗೆ ಮಾಡಿದ್ದರು. ಸಂತ್ರಸ್ತ (Victim) ಹಿರಿಯ ನಾಗರಿಕ ಈ ಹಿಂದೆ ಭಾರತೀಯ ಸೇನೆಯಲ್ಲಿ (Ex Army man) ಕೆಲಸ ಮಾಡಿದ್ದಾರೆ. ಪತ್ತನಂತಿಟ್ಟ ಮೂಲದ ಮಲಯಾಳಂ ನಟಿ (malayalam actress) ನಿತ್ಯಾ ಹಾಗೂ ಆಕೆಯ ಸ್ನೇಹಿತ ಪರವೂರು ಮೂಲದ ಬಿನು ಅವರನ್ನು ಕೊಲ್ಲಮ್‌ನ ಪರವೂರಿನಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
75 ವರ್ಷದ ಸಂತ್ರಸ್ತ ವ್ಯಕ್ತಿ ಈಗ ಕೇರಳ ವಿಶ್ವವಿದ್ಯಾಲಯದಲ್ಲಿ ಉದ್ಯೋಗಿಯಾಗಿದ್ದು, ತಿರುವನಂಥಪುರಂ ನಗರದ ಪಟ್ಟೊಮ್‌ನಲ್ಲಿ ವಾಸವಾಗಿದ್ದಾರೆ. ನಟಿ ನಿತ್ಯಾ ನ್ಯಾಯವಾದಿಯೂ ಹೌದು. ಮೇ 24ರಂದು ನಿತ್ಯಾ ಹಾಗೂ ಸಂತ್ರಸ್ತ ವ್ಯಕ್ತಿಯ ನುಡವೆ ಸಂಪರ್ಕ ಉಂಟಾಗಿತ್ತು. ಬಾಡಿಗೆ ಮನೆಗೆ ಸಂಬಂಧಿಸಿದಂತೆ ಮೇ 24ರಂದು ನಟಿ ನಿತ್ಯಾ ಮತ್ತು ಸಂತ್ರಸ್ತ ವ್ಯಕ್ತಿಯ ನಡುವೆ ಸಂಪರ್ಕ ಏರ್ಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ವ್ಯಕ್ತಿಯು ನಿರಂತರ ದೂರವಾಣಿ ಕರೆಗಳ ಮೂಲಕ ಶಶಿ ಗೆಳೆತನ ಗಳಿಸಿದ್ದಾರೆ. ಬಳಿಕ ಆಕೆ ಆಗಾಗ ಆತನನ್ನು ಭೇಟಿಯಾಗಲು ಆರಂಭಿಸಿದಳು ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ಭೇಟಿಯಾಗುತ್ತಿರುವಾಗ ಒಮ್ಮೆ, ಸಂತ್ರಸ್ತನಿಗೆ ಬಟ್ಟೆ ಬಿಚ್ಚುವಂತೆ ಬೆದರಿಸಿದ್ದಾಳೆ. ಅಲ್ಲದೇ ಈ ಮೊದಲೇ ಯೋಜನೆ ಹಾಕಿಕೊಂಡಿರುವಂತೆ ಆಕೆಯ ಸ್ನೇಹಿತ ಬಿನು ಅವರಿಬ್ಬರು ಇದ್ದ ಸ್ಥಳಕ್ಕೆ ಆಗಮಿಸಿದ್ದಾರೆ ಮತ್ತು ಅವರಿಬ್ಬರೂ ಜತೆಯಾಗಿರುವ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Digital Honey Trap: ಸಂಸದ ಸಿದ್ದೇಶ್ವರ್‌ಗೆ ಅಶ್ಲೀಲ ವಿಡಿಯೊ ಕಾಲ್ ಮಾಡಿ ಬ್ಲ್ಯಾಕ್‌ಮೇಲ್‌ಗೆ ಯತ್ನ!
ಈ ಫೋಟೋಗಳನ್ನು ಇಟ್ಟುಕೊಂಡು ನಿತ್ಯಾ ಹಾಗೂ ಬಿನು ಅವರು ಸಂತ್ರಸ್ತನಿಗೆ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಾರೆ. 25 ಲಕ್ಷ ರೂ. ನೀಡದಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡುವುದಾಗಿ ಹೆದರಿಸಿದ್ದಾರೆ. ಆಗ ಸಂತ್ರಸ್ತ ವ್ಯಕ್ತಿಯ 11 ಲಕ್ಷ ರೂಪಾಯಿ ನೀಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಇನ್ನೂ ಹೆಚ್ಚಿನ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವುದನ್ನು ಮುಂದುವರಿಸಿದ್ದಾರೆ. ಇದರಿಂದ ಬೇಸತ್ತ ಸಂತ್ರಸ್ತ ವ್ಯಕ್ತಿಯು ಕೊನೆಗೆ ಜುಲೈ 18ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ಇಡೀ ಪ್ರಕರಣವು ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.