Site icon Vistara News

LK Advani: ನನ್ನ ತತ್ವಗಳಿಗೆ ಸಂದ ಗೌರವ; ಭಾರತರತ್ನ ಬಳಿಕ ಅಡ್ವಾಣಿ ಭಾವುಕ ನುಡಿ

LK Advani

BJP veteran LK Advani admitted to Apollo Hospital, condition stable: Report

ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ (Bharat Ratna) ಲಭಿಸಿರುವುದಕ್ಕೆ ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ (LK Advani) ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಘೋಷಣೆ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಅವರು, “ಅತ್ಯಂತ ವಿನಮ್ರತೆ ಹಾಗೂ ಕೃತಜ್ಞ ಭಾವನೆಯಿಂದ ನಾನು ಭಾರತರತ್ನ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ. ಇದು ಕೇವಲ ನಾನೊಬ್ಬ ವ್ಯಕ್ತಿಯಾಗಿ ಸಿಕ್ಕಿರುವ ಗೌರವ ಅಲ್ಲ, ನಾನು ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿರುವ ತತ್ವಗಳು, ಸೇವೆಗೆ ಸಿಕ್ಕ ಗೌರವ” ಎಂದಿದ್ದಾರೆ.

“ನಾನು ಮೊದಲು ಸ್ವಯಂಸೇವಕನಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸೇರ್ಪಡೆಯಾದಾಗ, ಪ್ರಶಸ್ತಿ ಎಂದರೆ ದೇಶಕ್ಕಾಗಿ ಸಲ್ಲಿಸುವುದು ಎಂಬುದನ್ನು ಅರಿತೆ. ಯಾವುದೇ ಸ್ವಹಿತಾಸಕ್ತಿ, ಸ್ವಾರ್ಥ ಇಲ್ಲದೆ, ದೇಶಕ್ಕಾಗಿ ದುಡಿಯುವುದು, ಸಂಘವು ನನಗೆ ವಹಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡುವುದಷ್ಟೇ ನನ್ನ ಗುರಿಯಾಗಿತ್ತು. ಅದನ್ನೇ ನಾನು ಪಾಲಿಸಿಕೊಂಡು ಬಂದಿದ್ದೇನೆ. ಈಗ ನನ್ನ ತತ್ವಗಳಿಗೆ ಭಾರತರತ್ನ ಪ್ರಶಸ್ತಿ ಮೂಲಕ ಗೌರವ ಸಿಕ್ಕಂತಾಗಿದೆ” ಎಂದು ಅಡ್ವಾಣಿ ಅವರು ಪ್ರಕಟಣೆ ಹೊರಡಿಸಿದ್ದಾರೆ.

ತಂದೆಗೆ ಸಿಹಿ ತಿನ್ನಿಸಿದ ಪುತ್ರಿ

ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ (ಫೆಬ್ರವರಿ 3) ಬೆಳಗ್ಗೆ ಘೋಷಿಸಿದರು. “ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವವನ್ನು ಪಡೆದಿರುವುದಕ್ಕೆ ಅವರನ್ನು ಅಭಿನಂದಿಸಿದ್ದೇನೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Lal Krishna Advani: ಭಾರತ ರತ್ನ ಎಲ್​ ಕೆ. ಆಡ್ವಾಣಿ ಅವರ ಅಪರೂಪದ ಚಿತ್ರಗಳು

“ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜಕೀಯ ತಜ್ಞರಲ್ಲಿ ಒಬ್ಬರಾದ ಲಾಲ್​ ಕೃಷ್ಣ ಅಡ್ವಾಣಿ ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ಪಕ್ಷದ ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಹಿಡಿದು ನಮ್ಮ ದೇಶದ ಉಪ ಪ್ರಧಾನಿಯಾಗಿ ರಾಷ್ಟ್ರದ ಸೇವೆ ಮಾಡುವವರೆಗಿನ ಅವರ ಜೀವನ ಆದರ್ಶಮಯ. ಅವರು ನಮ್ಮ ಗೃಹ ಸಚಿವರಾಗಿ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವರಾಗಿ ಹೆಸರು ಗಳಿಸಿಕೊಂಡವರು. ಅವರ ಸಂಸದೀಯ ಮಧ್ಯಸ್ಥಿಕೆಗಳು ಯಾವಾಗಲೂ ಅನುಕರಣೀಯ ಹಾಗೂ ಬೌದ್ಧಿಕ ಒಳನೋಟಗಳಿಂದ ತುಂಬಿವೆ” ಎಂದು ಅವರು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version