ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಸಮಾಜ ಘಾತುಕ ಕೆಲಸ ಮಾಡುವವರ ಮನೆ, ಆಸ್ತಿಪಾಸ್ತಿಗಳನ್ನು ಮುಲಾಜಿಲ್ಲದೆ ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗುತ್ತಿದೆ. ಇತ್ತೀಚೆಗೆ ಉಜ್ಜಯಿನಿಯಲ್ಲಿ ನಡೆದಿದ್ದ ಬಾಬಾ ಮಹಾಕಾಲ್ ಕೀ ಸವಾರಿ (ಮಹಾಕಾಲ ದೇವರ ಮೆರವಣಿಗೆ) ಧಾರ್ಮಿಕ ಮೆರವಣಿಗೆ ನಡೆಯುತ್ತಿದ್ದಾಗ ಅದರ ಮೇಲೆ ನೀರು ಉಗುಳಿದ್ದವರಿಗೂ ಈಗ ಅದೇ ಶಿಕ್ಷೆ ನೀಡಲಾಗಿದೆ. ಶಂಕಿತ ಮೂವರು ಆರೋಪಿಗಳ ಅಕ್ರಮ ಮನೆಗಳನ್ನು ಸ್ಥಳೀಯ ಆಡಳಿತ ಬುಲ್ಡೋಜರ್ ಮೂಲಕ ಕೆಡವಿದೆ..ಅದೂ ಕೂಡ ಸಂಗೀತ-ವಾದ್ಯಗಳೊಂದಿಗೆ..ಈ ವಿಡಿಯೊ ವೈರಲ್ (Viral Video) ಆಗಿದೆ.
ಉಜ್ಜಯಿನಿ ಎಎಸ್ ಪಿ ಆಕಾಶ್ ಭುರಿಯಾ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮಹಾಕಾಲ ಸ್ವಾಮಿ ಮೆರವಣಿಗೆ ಮೇಲೆ ನೀರು ಉಗುಳಿದ ಆರೋಪದಡಿ ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಮೂರು ಜನರ ಮನೆಗಳು, ಅಕ್ರಮ ಆಸ್ತಿಯನ್ನು ಬುಲ್ಡೋಜರ್ ನಿಂದ ಕೆಡವಲಾಗಿದೆ. ಡಾಬಾರಸ್ತೆ, ಟಾಂಕಿ ಚೌಕ್ ಮತ್ತು ಗೋಲ್ಡ್ ಬೇಕರಿ ಸಮೀಪ ಇವರ ಮನೆಗಳು ಇದ್ದವು. ಬಿಗಿ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಮೂರು ಮನೆಗಳನ್ನು ಕೆಡವುವಾಗ ಭರ್ಜರಿ ಡಿಜೆ ಮ್ಯೂಸಿಕ್ ಇತ್ತು. ಒಂದಷ್ಟು ಯುವಕರು ತಮಟೆ, ಡ್ರಮ್ ಗಳನ್ನು ಬಡಿದಿದ್ದಾರೆ. ಅಂದು ಅದ್ಧೂರಿಯಾಗಿ, ಸಂಭ್ರಮದಿಂದ ನಡೆಯುತ್ತಿದ್ದ ಮೆರವಣಿಗೆಯನ್ನು ಹಾಳು ಮಾಡಿದ್ದಕ್ಕೆ ಪ್ರತಿಯಾಗಿ, ಇವರ ಮನೆಗಳನ್ನು ಅಷ್ಟೇ ಸಂಭ್ರಮದಿಂದ ತಮಟೆ, ಡ್ರಮ್ ವಾದ್ಯಗಳೊಂದಿಗೆ ಕೆಡವಲಾಗಿದೆ. ಸ್ಥಳದಲ್ಲಿ ಪೊಲೀಸರು, ಮಾಧ್ಯಮ ಸಿಬ್ಬಂದಿ, ಸ್ಥಳೀಯ ಆಡಳಿತಾಧಿಕಾರಿಗಳು ಇದ್ದರು..
ಇದನ್ನೂ ಓದಿ: Viral Video: ಫೋನ್‌ನಲ್ಲೇ ಮುಳುಗಿರಬೇಡ ಎಂದು ಪೋಷಕರು ಬೈದಿದ್ದಕ್ಕೆ ಜಲಪಾತಕ್ಕೆ ಜಿಗಿದ ಯುವತಿ
ಮಧ್ಯಪ್ರದೇಶದಲ್ಲ ಬುಲ್ಡೋಜರ್ ಬಾಬಾ ಕ್ರಮ ಶುರುವಾಗಿ ವರ್ಷಗಳೆ ಕಳೆದಿವೆ. ಇತ್ತೀಚೆಗೆ ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದವನ ಅಕ್ರಮ ಮನೆಯನ್ನೂ ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿತ್ತು. ಉತ್ತರ ಪ್ರದೇಶದಲ್ಲಿ ಕೂಡ ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರು, ಕ್ರಿಮಿನಲ್ ಗಳಿಗೆ ಇದೇ ಶಿಕ್ಷೆ ನೀಡಲಾಗುತ್ತಿದೆ.
मध्य प्रदेश के उज्जैन में सोमवार को बाबा महाकाल की सवारी के दौरान बोतल से पानी पीकर सवारी पर थूकने का वीडियो वायरल हुआ। आरोप में तीन लोगों को गिरफ्तार किया गया। अब पुलिस कार्रवाई के तहत आरोपियों के घर बुलडोजर लेकर पहुंची है। किसी का घर घर रहा। कोई ढोल नगाड़े बजा रहा। pic.twitter.com/DrLWrH0G8I
— Bhadohi Wallah (@Mithileshdhar) July 19, 2023