Site icon Vistara News

India China Clash | ಅರುಣಾಚಲ ಗಡಿಯಲ್ಲಿ ಚೀನಾ ಯೋಧರಿಗೆ ಭಾರತದ ಯೋಧರು ಹೇಗೆ ಬಡಿದರು? ಇಲ್ಲಿದೆ ವಿಡಿಯೊ

India China Clash

ಇಟಾನಗರ: ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನಲ್ಲಿರುವ ಗಡಿಯಲ್ಲಿ ಡಿಸೆಂಬರ್‌ 9ರಂದು ಭಾರತ ಹಾಗೂ ಚೀನಾ ಯೋಧರ ಮಧ್ಯೆ ಸಂಘರ್ಷ (India China Clash) ನಡೆದಿದ್ದು, ಇದರ ವಿಡಿಯೊ ಲಭ್ಯವಾಗಿದೆ.

ಕಾಲು ಕೆರೆದುಕೊಂಡು ಭಾರತದ ಯೋಧರ ಮೇಲೆ ಎರಗಲು ಬಂದ ಚೀನಾದ ಸೈನಿಕರನ್ನು ಭಾರತದ ಯೋಧರು ದಿಟ್ಟವಾಗಿ ಹಿಮ್ಮೆಟ್ಟಿಸಿದ್ದಾರೆ. ಸಂಘರ್ಷದ ವಿಡಿಯೊ ಈಗ ವೈರಲ್‌ ಆಗಿದ್ದು, ಕೆಣಕಿದ ಕಮ್ಯುನಿಸ್ಟ್‌ ರಾಷ್ಟ್ರದ ಸೈನಿಕರಿಗೆ ಭಾರತದ ಯೋಧರು ದೊಣ್ಣೆಗಳಿಂದ ಹೊಡೆದು, ಹಿಂದಡಿ ಇಡುವಂತೆ ಮಾಡಿದ್ದಾರೆ.

ಘಟನೆ ವೇಳೆ ಭಾರತದ ಆರು ಯೋಧರಿಗೆ ಗಾಯಗಳಾಗಿದ್ದು, ಅವರಿಗೆ ಗುವಾಹಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಾರತಕ್ಕಿಂತ ಚೀನಾದ ಹೆಚ್ಚು ಸೈನಿಕರಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | Amit Shah On Nehru | ಚೀನಾ ಮೇಲೆ ನೆಹರು ಪ್ರೀತಿಯಿಂದ ಭಾರತದ ಕೈತಪ್ಪಿದ ವಿಶ್ವಸಂಸ್ಥೆ ಕಾಯಂ ಸದಸ್ಯತ್ವ, ಶಾ ವಾಗ್ದಾಳಿ

Exit mobile version