ನವದೆಹಲಿ: ಮೇ 28ರಂದು ಹೊಸ ಸಂಸತ್ ಭವನ ಉದ್ಘಾಟನೆಯಾಗಲಿದೆ(New Parliament). ಸಂವಿಧಾನದ ಮುಖ್ಯಸ್ಥರಾಗಿರುವ ರಾಷ್ಟ್ರಪತಿಗಳು (Rashtrapati) ಸಂಸತ್ ಭವನವನ್ನು ಉದ್ಘಾಟಿಸಬೇಕೆಂದು ಕೆಲವು ಪ್ರತಿಪಕ್ಷಗಳು ಪಟ್ಟು ಹಿಡಿದು, ಸಮಾರಂಭವನ್ನು ಬಹಿಷ್ಕರಿಸಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೇ ಈ ಭವನವನ್ನು ಮೇ 28ರಂದು ಲೋಕಾರ್ಪಣೆ ಮಾಡಲಿದ್ದಾರೆ. ಈಗಾಗಲೇ 20 ರಾಜಕೀಯ ಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದರೆ, ಕೆಲವು ಪಕ್ಷಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಸಿರು ನಿಸಾನೆ ತೋರಿಸಿವೆ.
ಯಾವೆಲ್ಲ ಪಾರ್ಟಿಗಳು ಪಾಲ್ಗೊಳ್ಳಲಿವೆ?
ಬಿಜು ಜನತಾ ದಳ(BJD), ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ(YSRCP), ಶಿರೋಮಣಿ ಅಕಾಲಿ ದಳ(SAD), ತೆಲುಗು ದೇಶಮ್ ಪಾರ್ಟಿ (TDP), ಶಿವಸೇನೆ(ಶಿಂಧೆ ಬಣ), ಆಲ್ ಇಂಡಿಯಾ ಅಣ್ಣಾ ದ್ರಾವಿಡ್ ಮುನ್ನೇತ್ರ ಕಳಗಂ (AIADMK), ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP), ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (NDPP), ಸಿಕ್ಕಿಮ್ ಕ್ರಾಂತಿಕಾರಿ ಮೋರ್ಚಾ (SKM), ಮಿಜೋ ನ್ಯಾಷನಲ್ ಫ್ರಂಟ್ (MNF), ಜನನಾಯಕ ಜನತಾ ಪಾರ್ಟಿ (JJP), ಆಲ್ ಜಾರ್ಖಂಡ್ ಸ್ಟುಡೆಂಟ್ಸ್ ಯುನಿಯನ್(AJSU), ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿ (RLJP), ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (RPI), ಅಪ್ನಾದಳ (ಎಸ್), ಇಂಡಿಯಾ ಮಕ್ಕಳ್ ಕಲ್ವಿ ಮುನ್ನೇತ್ರ ಕಳಗಂ (IMKMK), ತಮಿಳು ಮಾನಿಲಾ ಕಾಂಗ್ರೆಸ್, ಲೋಕ ಜನಶಕ್ತಿ ಪಾರ್ಟಿ (LJP-ರಾಮ್ ವಿಲಾಸ್), ಬಹುಜನ ಸಮಾಜ್ ಪಾರ್ಟಿ (BSP).
ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಿದ ಪಾರ್ಟಿಗಳು
ಕಾಂಗ್ರೆಸ್ (Congress), ಡಿಎಂಕೆ (DMK), ಆಮ್ ಆದ್ಮಿ ಪಾರ್ಟಿ (AAP), ತೃಣಮೂಲ ಕಾಂಗ್ರೆಸ್(TMC), ಶಿವಸೇನಾ (ಉದ್ಧವ್ ಠಾಕ್ರೆ ಬಣ), ಸಂಯುಕ್ತ ಜನತಾ ದಳ (JDU), ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (NCP), ಕಮ್ಯುನಿಸ್ಟ್ ಪಾರ್ಟಿ ಆಪ್ ಇಂಡಿಯಾ-ಮಾರ್ಕ್ಸ್‌ವಾದಿ (CPI-M), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI), ರಾಷ್ಟ್ರೀಯ ಜನತಾ ದಳ (RJD), ಜಾರ್ಖಂಡ್ ಮುಕ್ತಿ ಮೋರ್ಚಾ (JMM), ವಿಸಿಕೆ (VCK), ರಾಷ್ಟ್ರೀಯ ಲೋಕ ದಳ (RLD), ಆರ್‌ಎಸ್‌ಪಿ (RSP), ಎಂಡಿಎಂಕೆ ಮುಸ್ಲೀಮ್ ಲೀಗ್, ನ್ಯಾಷನಲ್ ಕಾನ್ಫರೆನ್ಸ್, ಕೇರಳ ಕಾಂಗ್ರೆಸ್ ಪಕ್ಷಗಳು ಹೊಸ ಸಂಸತ್ ಭವನ ಉದ್ಘಾಟನೆಯನ್ನು ಬಹಿಷ್ಕರಿಸಿವೆ.
ಎಲ್ಲ ಸಂಸದರಿಗೆ ಆಹ್ವಾನ
ಹೊಸದಾಗಿ ನಿರ್ಮಾಣ ಮಾಡಲಾಗಿರುವ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭಾ ಸ್ಫೀಕರ್ ಓಂ ಬಿರ್ಲಾ ಅವರು ಮೇ 28ರಂದು ಲೋಕಾರ್ಪಣೆ ಮಾಡಲಿದ್ದಾರೆ. ರಾಜ್ಯಸಭೆ ಮತ್ತು ಲೋಕಸಭೆಯ ಎಲ್ಲ ಸಂಸದರಿಗೆ ಭೌತಿಕವಾಗಿ ಮತ್ತು ಡಿಜಿಟಲ್ ಆಗಿ ಆಮಂತ್ರಣವನ್ನು ಕಳುಹಿಸಿಕೊಡಲಾಗಿದೆ. ಜತೆಗೆ, ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳಿಗೆ ಆಹ್ವಾನವನ್ನು ನೀಡಲಾಗಿದೆ.
#WATCH | The #NewParliamentBuilding will be inaugurated on Sunday, 28th May. Visuals from outside the new building in Delhi. pic.twitter.com/UK6PQzrVZ2
— ANI (@ANI) May 25, 2023
ಪ್ರತಿಪಕ್ಷಗಳ ಜಂಟಿ ಹೇಳಿಕೆ
ಸಂಸತ್ ಭವನವನ್ನು ಲೋಕಾರ್ಪಣೆ ಕಾರ್ಯಕ್ರಮಕ್ಕೆ 19 ಪ್ರತಿಪಕ್ಷಗಳು ಬಹಿಷ್ಕಾರ ಹಾಕಿವೆ. ಸಂಸತ್ತಿನಿಂದ ಪ್ರಜಾಪ್ರಭುತ್ವದ ಆತ್ಮವನ್ನೇ ಕಿತ್ತು ಹಾಕಿರುವಾಗ, ಹೊಸ ಕಟ್ಟಡದಲ್ಲಿ ಯಾವುದೇ ಮೌಲ್ಯ ಇರಲು ಸಾಧ್ಯವಿಲ್ಲ ಎಂದು 19 ಪಕ್ಷಗಳು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿವೆ.
ಇದನ್ನೂ ಓದಿ: New Parliament : ಹೊಸ ಸಂಸತ್ ಭವನ ಉದ್ಘಾಟನೆ ಬಹಿಷ್ಕರಿಸಿದ 19 ಪ್ರತಿಪಕ್ಷಗಳು, ಜಂಟಿ ಹೇಳಿಕೆ ಬಿಡುಗಡೆ
ಶಿವಸೇನೆ (UBT)ಯ ನಾಯಕ ಸಂಜಯ್ ರಾವತ್ ಅವರೂ ಈ ಬಗ್ಗೆ ಹೇಳಿಕೆ ನೀಡಿದ್ದು, ಎಲ್ಲ ಪ್ರತಿಪಕ್ಷಗಳು ಹೊಸ ಸಂಸತ್ ಭವನ ಉದ್ಘಾಟನೆಯನ್ನು ಬಹಿಷ್ಕರಿಸಿವೆ. ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಭಾರತ್ ರಾಷ್ಟ್ರ ಸಮಿತಿ(BRS) ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.