Site icon Vistara News

PM Narendra Modi: ಪ್ರಧಾನಿ ಮೋದಿ ಗಿಫ್ಟ್ ನಿಮಗೂ ಬೇಕಾ? ಹಾಗಾದ್ರೆ, ಆನ್‌ಲೈನ್‌ ಹರಾಜಿನಲ್ಲಿ ಭಾಗವಹಿಸಿ

Modi gifts

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಿತ್ಯ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಈ ವೇಳೆ, ಅವರಿಗೆ ಹಲವಾರು ಸ್ಮರಣಿಕೆಗಳು, ಕಾಣಿಕೆಗಳು ನೀಡಲಾಗುತ್ತದೆ. ಆ ಎಲ್ಲ ಕಾಣಿಕೆಗಳನ್ನು ಒಟ್ಟು ಸೇರಿಸಿ, ಹರಾಜು ಹಾಕಲಾಗುತ್ತದೆ(Online Auction). ಪ್ರಧಾನಿಗೆ ದೊರೆತ ಗಿಫ್ಟ್‌ಗಳನ್ನು ತಮ್ಮದಾಗಿಸಿಕೊಳ್ಳಬೇಕು ಎನ್ನುವವರು ಈ ಹರಾಜಿನಲ್ಲಿ ಪಾಲ್ಗೊಂಡು ಪಡೆದುಕೊಳ್ಳಬಹುದು. ಪಿಎಂ ಮೆಮೆಂಟೊಸ್ ಪೋರ್ಟಲ್ (PM Mementos Portal) ಈಗ ಆನ್‌ಲೈನ್ ಹರಾಜು ಪ್ರಕ್ರಿಯೆ ಆರಂಭಿಸಿದೆ ಮತ್ತು ಅಕ್ಟೋಬರ್ 31ರವರೆಗೂ ಹರಾಜು ಇರಲಿದೆ. ಆನ್‌ಲೈನ್‌ ಹರಾಜಿನಲ್ಲಿ ಪಾಲ್ಗೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಸ್ಮರಣಿಕೆಗಳು, ಸೊಗಸಾದ ಶಿಲ್ಪಗಳು, ವರ್ಣಚಿತ್ರಗಳು, ರೇಖಾಚಿತ್ರಗಳು, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಅಂಗವಸ್ತ್ರಗಳು, ಪಗ್ಡಿಗಳು, ಕತ್ತಿಗಳು ಸೇರಿದಂತೆ ಅನೇಕ ಗಿಫ್ಟ್‌ಗಳು ಹರಾಜಿಗೆ ಇಡಲಾಗಿದೆ. ಈ ಗಿಫ್ಟ್‌ಗಳ ಬೆಲೆ 700 ರೂ.ನಿಂದ 64,80,000 ರೂ.ವರೆಗೂ ಇರಲಿದೆ ಎಂದು ತಿಳಿಸಲಾಗಿದೆ.

ಈ ಹರಾಜು ಪ್ರಕ್ರಿಯೆಯನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡರ್ನ್ ಆರ್ಟಿ(NGMA) ನಡೆಸಿಕೊಡುತ್ತಿದೆ. ಈ ಆನ್‌ಲೈನ್ ಹರಾಜು ಕೇವಲ ಭಾರತದಲ್ಲಿ ವಾಸಿಸುವರಿಗೆ ಮಾತ್ರವೇ ಲಭ್ಯವಿರುತ್ತದೆ. ಈ ವೇದಿಕೆಯಲ್ಲಿ ಲಭ್ಯವಿರುವ ವಸ್ತುಗಳನ್ನು ದೇಶದೊಳಗೇ ಮಾತ್ರವೇ ಕಳುಹಿಸುವ ವ್ಯಸ್ಥೆಯನ್ನು ಮಾಡಲಾಗುತ್ತದೆ. ಈ ಹರಾಜು ಮೂಲಕ ಬರುವ ಆದಾವನ್ನು ನಮಾಮಿ ಗಂಗಾ ಯೋಜನೆಗೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನ್‌ಲೈನ್‌ ಹರಾಜಿನಲ್ಲಿ ಖರೀದಿಸುವುದು ಹೇಗೆ?

-ಮೊದಲಿಗೆ PM Mementos Portal ಪೋರ್ಟಲ್‌ಗೆ ಭೇಟಿ ನೀಡಿ, ಹೋಮ್‌ ಪುಟದಲ್ಲಿರುವ ಬೈಯರ್ ಸೈನ್‌ಅಪ್ ಬಟನ್ ಮೇಲೆ ಕ್ಲಿಕ್ ಮಾಡಿ.
-ಬೈಯರ್ ಸೈನ್‌ಅಪ್‌ ಪುಟದಲ್ಲಿ ಕೇಳಲಾಗುವ ಮೊಬೈಲ್ ನಂಬರ್, ಇಮೇಲ್ ವಿಳಾಸ ಸೇರಿದಂತೆ ಇನ್ನಿತರ ಮಾಹಿತಿಯನ್ನು ನೀಡಬೇಕು.
-ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡುವ ಮೂಲಕ ಹರಾಜಿನ ಷರತ್ತುಗಳಿಗೆ ಒಪ್ಪಿಗೆಯನ್ನು ಸೂಚಿಸಬೇಕು.
-ನೋಂದಾಯಿತ ಮೊಬೈಲ್ ‌ಮತ್ತು ಇಮೇಲ್‌ ಐಡಿಗೆ ಕಳುಹಿಸಲಾಗುವ ಒಟಿಪಿಯನ್ನು ನಮೂದಿಸಬೇಕು.
-ಬಳಿಕ ಹೆಸರು, ಲಿಂಗ, ಜನ್ಮದಿನಾಂಕ ಮತ್ತು ವಿಳಾಸ ಸೇರಿದಂತೆ ಇನ್ನಿತರ ಮಾಹಿತಿಯನ್ನು ಪ್ರೊಫೈಲ್‌ ಪುಟಕ್ಕೆ ಸೇರಿಸಬೇಕು.
-ಎಲ್ಲ ಮಾಹಿತಿಯನ್ನು ಒಮ್ಮೆ ಖಚಿತಪಡಿಸಿಕೊಂಡ ಬಳಿಕ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
-ಇಷ್ಟಾದ ಬಳಿಕ Successfully Signed up ಸಂದೇಶವು ನಿಮ್ಮ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
-ಲಾಗಿನ್ ಕ್ರೆಡೆನ್ಷಯಲ್‌ ನಮೂದಿಸಿ (ಮಾನ್ಯವಾದ ಪಾಸ್‌ವರ್ಡ್‌ನೊಂದಿಗೆ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ) ಮತ್ತು ಪೋರ್ಟಲ್‌ಗೆ ಲಾಗ್ ಇನ್ ಮಾಡಿ. ಬಳಿಕ ಆಧಾರ್ ದೃಧೀಕರಣ ಮಾಡಬೇಕಾಗುತ್ತದೆ.

ಈ ಸುದ್ದಿಯನ್ನೂ ಓದಿ: IPL ನೇರ ಪ್ರಸಾರದ ಹಕ್ಕುಗಳ ಹರಾಜು, ಮೊದಲ ದಿನವೇ ₹43,000 ಕೋಟಿ ಬಿಡ್

ಯಾವೆಲ್ಲ ವಸ್ತುಗಳಿವೆ ಚೆಕ್ ಮಾಡಿ-

-ಲಾಗಿನ್ ಆದ ಬಳಿಕ ಖರೀದಿದಾರರು, ಲೈವ್ ಹಜಾರು ಕೆಟಗರಿಗೆ ಸೇರಿದಂತೆ ಹರಾಜಿಗೆ ಲಭ್ಯವಿರುವ ವಸ್ತುಗಳ ಪಟ್ಟಿಯನ್ನು ಬ್ರೌಸ್ ಮಾಡಬಹುದು.
-ಖರೀದಿದಾರರಿಗೆ ಇಷ್ಟವಾದ ವಸ್ತುವನ್ನು ಕಾರ್ಟ್‌ಗೆ ಸೇರಿಸಿ, ಬಿಡ್ ಮೊತ್ತವನ್ನು ನಮೂದಿಸಬೇಕಾಗುತ್ತದೆ.
-ಕಾರ್ಟ್‌ಗೆ ಸೇರಿಸುವುದು ಕಡ್ಡಾಯವಾಗಿರುತ್ತದೆ. ಹಾಗೆಯೇ, ಕಾರ್ಟ್‌ಗೆ ಸೇರಿಸಲಾದ ವಸ್ತುಗಳ ಹರಾಜಿನಲ್ಲಿ ಭಾಗವಹಿಸಬಹುದು.
-ಕಾರ್ಟ್‌ಗೆ ಉತ್ಪನ್ನವನ್ನು ಸೇರಿಸಿದ ನಂತರ, ಖರೀದಿದಾರನು ಬಿಡ್ ಉಲ್ಲೇಖಿಸಬಹುದು ಮತ್ತು ನಡೆಯುತ್ತಿರುವ ಹರಾಜಿನಲ್ಲಿ ಸಕ್ರಿಯವಾಗಿ ಭಾಗವಹಿಸಬಹುದು. ಹರಾಜು ಮುಗಿಯುವರೆಗೂ ಭಾಗವಹಿಸಲು ಅವಕಾಶವಿರುತ್ತದೆ.
-ಕೊನೆಯದಾಗಿ ಪೇಮೆಂಟ್‌ ಮಾಡಬೇಕಾಗುತ್ತದೆ. ಹರಾಜು ಮುಗಿದ ನಂತರ ಮತ್ತು ಬಳಕೆದಾರರು ಅತಿ ಹೆಚ್ಚು ಉಲ್ಲೇಖಿಸಿದ ಬಿಡ್‌ದಾರರನ್ನು ಅನುಮೋದಿಸಿತ್ತಾರೆ. ಬಳಿಕ, ಬಿಡ್ ಗೆದ್ದ ಖರೀದಿದಾರರು ಪೋರ್ಟಲ್ ಮೂಲಕ ಪಾವತಿಯನ್ನು ಮುಂದುವರಿಸಬಹುದು. ದೇಶದೊಳಗಿನ ನಿಮ್ಮ ವಿಳಾಸಕ್ಕೆ ಐಟಂ ಅನ್ನು ತಲುಪಿಸಲಾಗುತ್ತದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version