Site icon Vistara News

Security breach in Lok Sabha: ಸಂಸತ್ ಪ್ರವೇಶಿಸಲು ವಿಸಿಟರ್ ಪಾಸ್ ಪಡೆಯುವುದು ಹೇಗೆ?

How to get visitors pass to enter Parliament?

ನವದೆಹಲಿ: ಲೋಕಸಭೆ ಭದ್ರತಾ ಲೋಪ ಪ್ರಕರಣದಲ್ಲಿ (Security breach in Lok Sabha) ಬಂಧಿತರಾಗಿರುವ ಆರು ಜನರ ಪೈಕಿ ಮೈಸೂರಿನ ಡಿ ಮನೋರಂಜನ್ (D Manoranjan) ಮತ್ತು ಉತ್ತರ ಪ್ರದೇಶದ ಸಾಗರ್ ಶರ್ಮಾ (Sagar Sharma) ಅವರು ಮೈಸೂರು ಸಂಸದ ಪ್ರತಾಪ್ ಸಿಂಹ (MP Pratap Simha) ಅವರ ಶಿಫಾರಸು ಮೂಲಕ ಲೋಕಸಭೆಯನ್ನು ಪ್ರವೇಶಿಸಿದ್ದರು. ಈ ಕುರಿತು ಪ್ರತಾಪ್ ಸಿಂಹ ಅವರೂ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ತಾವೇಕೆ ಪಾಸ್‌ ನೀಡಲು ಶಿಫಾರಸು ಮಾಡಿದ್ದಾಗಿ ತಿಳಿಸಿದ್ದಾರೆ. ಆದರೆ, ಈ ವಿಸಿಟರ್ಸ್ ಪಾಸ್ ಹೇಗೆ ನೀಡಲಾಗುತ್ತದೆ (Visitor Pass) ಎಂಬ ಕುತೂಹಲ ಈಗ ಹೆಚ್ಚಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ, ಓದಿ.

ಸಂದರ್ಶಕರ ಪ್ರವೇಶವನ್ನು(ವಿಸಿಟರ್ಸ್) ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 386 ರ ಮೂಲಕ ನಿಯಂತ್ರಿಸಲಾಗುತ್ತದೆ. ಅಪರಿಚಿತರ ಪ್ರವೇಶ ಖಾತ್ರಿ ಪಡಿಸುವುದು, ವಿಥ್‌ಡ್ರಾವಲ್ ಮಾಡುವುದು ಮತ್ತು ಸಂಪೂರ್ಣವಾಗಿ ಪ್ರವೇಶವನ್ನು ನಿರಾಕರಿಸುವ ನಿಯಮಗಳನ್ನು ಇದು ಒಳಗೊಂಡಿದೆ. ಸದನ ಕಲಾಪ ನಡೆಯುತ್ತಿದ್ದಾಗ ಅಪರಿಚಿತರ ಪ್ರವೇಶ ಎಲ್ಲ ಕಡೆಗೂ ಇರುವುದಿಲ್ಲ. ಸ್ಪೀಕರ್ ನೀಡುವ ಆದೇಶದ ಅನುಸಾರ ಸದನದ ಅಧಿವೇಶನಗಳ ಸಮಯದಲ್ಲಿ ಸದಸ್ಯರ ವಿಶೇಷ ಬಳಕೆಗಾಗಿ ಕಾಯ್ದಿರಿಸದ ಸದನದ ಭಾಗಗಳಿಗೆ ಅಪರಿಚಿತರ ಪ್ರವೇಶವನ್ನು ನಿಯಂತ್ರಿಸಲಾಗುತ್ತದೆ ನಿಯಮದಲ್ಲಿ ತಿಳಿಸಲಾಗಿದೆ.

ಎಮ್ ಎನ್ ಕೌಲ್ ಮತ್ತು ಎಸ್ ಎಲ್ ಶಕ್ಧೇರ್ ಅವರ “ಸಂಸತ್ತಿನ ಪದ್ಧತಿ ಮತ್ತು ಕಾರ್ಯವಿಧಾನ” ದ ಪ್ರಕಾರ, ಒಬ್ಬ ಸದಸ್ಯರು ವೈಯಕ್ತಿಕವಾಗಿ ತಮಗೆ ಚೆನ್ನಾಗಿ ತಿಳಿದಿರುವವರಿಗೆ ಮಾತ್ರ ಸಂದರ್ಶಕರ ಕಾರ್ಡ್‌ಗಳ ವಿತರಣೆಗೆ ಅರ್ಜಿ ಸಲ್ಲಿಸಬಹುದು. ಅಂದರೆ, ಕೇವಲ ಪರಿಚಿತರಾದರೆ ಸಾಲದು. ಚೆನ್ನಾಗಿ ತಿಳಿದವರೇ ಆಗಿರಬೇಕು ಎಂದು ನಿಯಮವು ಹೇಳುತ್ತದೆ.

ಸಂದರ್ಶಕರ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸುವಾಗ, ಸದಸ್ಯರು ಈ ಮೇಲಿನ ಹೆಸರಿನ ಸಂದರ್ಶಕರು ನನ್ನ ಸಂಬಂಧಿ/ವೈಯಕ್ತಿಕ ಸ್ನೇಹಿತ/ ನನಗೆ ವೈಯಕ್ತಿಕವಾಗಿ ಪರಿಚಿತರು ಮತ್ತು ನಾನು ಅವನ/ಅವಳ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳುವ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ.

ಜತೆಗೆ ಭದ್ರತೆಯ ಕಾರಣಕ್ಕಾಗಿ ಸಂದರ್ಶಕರು ಫೋಟೋ ಗುರುತಿನ ಪತ್ರವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ನಿಯಮಗಳ ಪ್ರಕಾರ, ಸಂದರ್ಶಕರ ಹೆಸರುಗಳನ್ನು ಸಂಪೂರ್ಣವಾಗಿ ನೀಡಬೇಕಾಗುತ್ತದೆ. ಸಂದರ್ಶಕರ ತಂದೆಯ/ಗಂಡನ ಹೆಸರನ್ನು ಸಹ ಏಕರೂಪವಾಗಿ ಪೂರ್ಣವಾಗಿ ನೀಡಬೇಕಾಗುತ್ತದೆ. ಅಂತಿಮವಾಗಿ ಅವರಿಗೆ ಸಂಸದರಿಂದ ಶಿಫಾರಸು ಮಾಡಲಾದ ವ್ಯಕ್ತಿಗಳಿಗೆ ವಿಸಿಟರ್ಸ್ ಪಾಸ್ ನೀಡಲಾಗುತ್ತದೆ. ಇದೇ ನಿಯಮವು ರಾಜ್ಯಸಭೆ ಪ್ರವೇಶ ಪಡೆಯುವ ಸಂದರ್ಶಕರಿಗೂ ಅನ್ವಯವಾಗುತ್ತದೆ.

ಈ ಸುದ್ದಿಯನ್ನೂ ಓದಿ: Security breach in Lok Sabha: ನಾಲ್ವರಲ್ಲ ಆರು ಜನರ ಬಂಧನ; ಎಲ್ಲರೂ ಪರಸ್ಪರ ಪರಿಚಯದವರೇ!

Exit mobile version