ನವದೆಹಲಿ: ಮೊಬೈಲ್ ನಂಬರ್ ಚೇಂಜ್ ಆಗಿರುತ್ತದೆ. ಹೊಸ ಸಿಮ್ ಖರೀದಿಸಿರುತ್ತೀರಿ. ಆದರೆ, ಅದನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವುದು ಹೇಗೆ ಎಂಬ ಗೊಂದಲ ಕಾಡುತ್ತಿದೆಯೇ? ಹಾಗಾದರೆ, ಸುಲಭವಾಗಿ ಲಿಂಕ್ ಮಾಡುವ ಕುರಿತ ಸ್ಟೆಪ್ ಬೈ ಸ್ಟೆಪ್ (Aadhaar Update) ಮಾಹಿತಿ ಇಲ್ಲಿದೆ.
ಸ್ಟೆಪ್ 1: UIDAI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಸ್ಥಳೀಯ ಆಧಾರ್ ಎನ್ರಾಲ್‌ಮೆಂಟ್ ಕೇಂದ್ರದ ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳಿ
ಸ್ಟೆಪ್ 2: ನೋಂದಣಿ ಮಾಡಿಕೊಂಡ ದಿನ ಕೇಂದ್ರಕ್ಕೆ ತೆರಳಿ, ಅಧಿಕಾರಿಗಳನ್ನು ಭೇಟಿ ಮಾಡಿ
ಸ್ಟೆಪ್ 3: ಆಧಾರ್ ಎಕ್ಸಿಕ್ಯೂಟಿವ್‌ಗೆ ಆಧಾರ್ ಎನ್ರಾಲ್‌ಮೆಂಟ್ ಫಾರ್ಮ್ ಕೊಡಿ
ಸ್ಟೆಪ್ 4: ಬಯೋಮೆಟ್ರಿಕ್ ಮೂಲಕ ನೀವು ನೀಡಿರುವ ಮಾಹಿತಿಯನ್ನು ಎಕ್ಸಿಕ್ಯೂಟಿವ್ ಪರಿಶೀಲಿಸುತ್ತಾರೆ
ಸ್ಟೆಪ್ 5: ಎಕ್ಸಿಕ್ಯೂಟಿವ್ ನಿಮ್ಮ ಮೊಬೈಲ್ ನಂಬರ್ ಬದಲಾಯಿಸುತ್ತಾರೆ
ಸ್ಟೆಪ್ 6: ಆಧಾರ್ ಅಪ್‌ಡೇಟ್ ಸೇವೆಗಾಗಿ ನೀವು ಶುಲ್ಕ ಪಾವತಿಸಬೇಕು
ಸ್ಟೆಪ್ 7: ಅಧಿಕಾರಿಗಳು ನಿಮಗೆ ಸರ್ಟಿಫಿಕೇಟ್ ನೀಡುತ್ತಾರೆ. ಅದರಲ್ಲಿ, ಅಪ್‌ಡೇಟ್ ರಿಕ್ವೆಸ್ಟ್ ನಂಬರ್ (URN) ಇರುತ್ತದೆ. ಯುಐಡಿಎಐ ವೆಬ್‌ಸೈಟ್‌ನಲ್ಲಿ ಮೊಬೈಲ್ ನಂಬರ್ ಅಪ್‌ಡೇಟ್ ಆಗಿರುವುದನ್ನು ಟ್ರ್ಯಾಕ್ ಮಾಡಬಹುದು.
ಇದನ್ನೂ ಓದಿ | Aadhaar Address Change | ಕುಟುಂಬದ ಮುಖ್ಯಸ್ಥರ ವಿಳಾಸ ಬಳಸಿ ನಿಮ್ಮ ಆಧಾರ್ ವಿಳಾಸ ಬದಲಾವಣೆ ಹೇಗೆ? ಹೀಗೆ ಮಾಡಿ