ನವದೆಹಲಿ: ಹಸುಗಳನ್ನು ಇಸ್ಕಾನ್ (ISKCON) ಕಟುಕರಿಗೆ ಮಾರಾಟ ಮಾಡುತ್ತಿದೆ (selling cow) ಎಂದು ಆರೋಪಿಸಿದ್ದ ಬಿಜಪಿಯ ಸಂಸದೆ ಮನೇಕಾ ಗಾಂಧಿ (BJP MP Maneka Gandhi) ವಿರುದ್ಧ, ಇಸ್ಕಾನ್ 100 ಕೋಟಿ ರೂ. ಮಾನನಷ್ಟ ನೋಟಿಸ್ (Defamation Notice) ಕಳುಹಿಸಿದೆ. ಈ ಪ್ರಕರಣವನ್ನು ಕಾನೂನುಬದ್ಧವಾಗಿ ಕೊನೆಯವರೆಗೂ ಕೊಂಡೊಯ್ಯಲಾಗುವುದು ಎಂದು ಇಸ್ಕಾನ್ ಉಪಾಧ್ಯಕ್ಷ ರಾಧಾರಮಣ ದಾಸ್ (ISKCON vice president Radharamn Das) ಅವರು ತಿಳಿಸಿದ್ದಾರೆ. ಕೇಂದ್ರದಲ್ಲಿ ಸಚಿವರಾಗಿದ್ದ, ಸಂಸದೆ ಮನೇಕಾ ಗಾಂಧಿ ಅವರು ಇಸ್ಕಾನ್ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಸುಳ್ಳು ಹೇಳಿದ್ದಾರೆ. ಮನೇಕಾ ಗಾಂಧಿ ಅವರು ಅನಂತಪುರದ ಗೋಶಾಲೆಗೆ ಭೇಟಿ ನೀಡಿದ್ದಾಗಿ ಹೇಳಿದ್ದಾರೆ. ಅಲ್ಲಿನವರೆಗೆ ಮನೇಕಾ ಗಾಂಧಿ ಬಂದಿದ್ದೆ ನೆನಪಿಲ್ಲ. ಹಾಗಾಗಿ ಮನೆಯಲ್ಲಿ ಕುಳಿತು ಅವರು ಈ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ರಮಣ ದಾಸ್ ಅವರು ಹೇಳಿದ್ದಾರೆ.
With this let this be clear to all those who think they can abuse and threaten ISKCON anytime with false allegations and get away with it.
— Official Amogh Lila Das (@amoghliladas) September 29, 2023
We are committed to serve by spreading Kṛṣṇa Consciousness. https://t.co/MY19UBT8l9
ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಇಸ್ಕಾನ್, ಹಸು ಮತ್ತು ಗೂಳಿ ರಕ್ಷಣೆ ಮತ್ತು ಆರೈಕೆಯಲ್ಲಿ ಮುಂಚೂಣಿಯಲ್ಲಿದೆ. ಹಸುಗಳು ಮತ್ತು ಗೂಳಿಗಳನ್ನು ಕೊನೆಯವರೆಗೂ ನೋಡಿಕೊಳ್ಳಲಾಗುತ್ತದೆಯೇ ಹೊರತು ಕಟುಕರಿಗೆ ಮಾರಾಟ ಮಾಡಲಾಗುವುದಿಲ್ಲ. ಗೋಮಾಂಸವನ್ನು ಹೊಂದಿರುವ ಪ್ರಪಂಚದ ಅನೇಕ ಭಾಗಗಳಲ್ಲಿ ಇಸ್ಕಾನ್ ಗೋಸಂರಕ್ಷಣೆಯನ್ನು ಪ್ರಾರಂಭಿಸಿದೆ. ಭಾರತದೊಳಗೆ, ಇಸ್ಕಾನ್ 60 ಕ್ಕೂ ಹೆಚ್ಚು ಗೋಶಾಲೆಗಳನ್ನು ನಡೆಸುತ್ತದೆ ಮತ್ತು ನೂರಾರು ಪವಿತ್ರ ಹಸುಗಳು ಮತ್ತು ಗೂಳಿಗಳನ್ನು ರಕ್ಷಣೆ ಮಾಡುತ್ತಿದೆ. ಅವುಗಳ ಜೀವಿತಾವಧಿಯವರೆಗೆ ವೈಯಕ್ತಿಕ ಆರೈಕೆಯನ್ನು ಮಾಡಲಾಗುತ್ತದೆ. ಪ್ರಸ್ತುತ ಇಸ್ಕಾನ್‌ನ ಗೋಶಾಲೆಗಳಲ್ಲಿ ಇರುವ ಹಸುಗಳು ಪೈಕಿ ಬಹುತೇಕ ಹಸುಗಳ ಮಾಲೀಕರಿಂದ ಬಿಟ್ಟದ್ದು, ಗಾಯಗೊಂಡಿರುವ ಹಸುಗಳಾಗಿವೆ. ಇಲ್ಲವೇ ಕುಟುಕರಿಂದ ರಕ್ಷಿಸಲಾದ ಹಸುಗಳಾಗಿವೆ ಎಂದು ಇಸ್ಕಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಹಲವಾರು ಇಸ್ಕಾನ್ ಗೋಶಾಲೆಗಳು ಗೋಶಾಲೆಗಳು ಸರ್ಕಾರದಿಂದ ತಮ್ಮ ಉನ್ನತ ಗೋಸಂರಕ್ಷಣಾ ಮಾನದಂಡಗಳಿಗಾಗಿ ಗುರುತಿಸಲ್ಪಟ್ಟಿವೆ ಮತ್ತು ಪ್ರಶಂಸಿಸಲ್ಪಟ್ಟಿವೆ. ಮನೇಕಾ ಗಾಂಧಿ ಅವರು ಪ್ರಸಿದ್ಧ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮತ್ತು ಇಸ್ಕಾನ್‌ನ ಹಿತೈಷಿ ಹೌದು. ಆದರೆ, ಅವರು ನೀಡಿರುವ ಹೇಳಿಕೆಗಳಿಂದ ನಾವು ಆಶ್ಚರ್ಯಚಕಿತರಾಗಿದ್ದೇವೆ ಇಸ್ಕಾನ್ ಹೇಳಿದೆ.
ಬಿಜೆಪಿ ಸಂಸದೆ ಮನೇಕಾ ಗಾಂಧಿ ಹೇಳಿದ್ದೇನು?
“ದೇಶದಲ್ಲಿ ಇಸ್ಕಾನ್ ಬಹುದೊಡ್ಡ ಮೋಸಗಾರ ಧಾರ್ಮಿಕ ಸಂಸ್ಥೆಯಾಗಿದೆ. ಇಸ್ಕಾನ್‌ನ ಗೋಶಾಲೆಗಳಲ್ಲಿರುವ ಗೋವುಗಳನ್ನು ಮಾರಾಟ ಮಾಡಿದಷ್ಟು ದೇಶದಲ್ಲಿ ಯಾರೂ ಮಾರಾಟ ಮಾಡಿಲ್ಲ. ಗೋವುಗಳ ರಕ್ಷಣೆ ಹೆಸರಲ್ಲಿ ಗೋಶಾಲೆಗಳನ್ನು ನಿರ್ಮಿಸಿ, ಸರ್ಕಾರದಿಂದ ಹೆಚ್ಚಿನ ಪ್ರಮಾಣದ ಜಾಗ ಸೇರಿ ಹಲವು ಅನುಕೂಲ ಪಡೆಯುವ ಇಸ್ಕಾನ್ ಸಂಸ್ಥೆಯು ಗೋವುಗಳನ್ನು ಕಟುಕರಿಗೆ ಮಾರಾಟ ಮಾಡುತ್ತದೆ” ಎಂದು ಹೇಳಿದ್ದಾರೆ. ಮನೇಕಾ ಗಾಂಧಿ ಹೀಗೆ ಹೇಳಿದ ವಿಡಿಯೊವನ್ನು ಆರ್‌ಜೆಡಿ ನಾಯಕ ಪ್ರಶಾಂತ್ ಕನೋಜಿಯಾ ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ.
Sad reality of ISCON Temple
— INDIA Alliance (@2024_For_INDIA) September 27, 2023
ISCON temple exposed by Maneka Gandhi ji#ISKCON | @yudhistirGD | #ManekaGandhi | Maneka Gandhi | मेनका गांधी pic.twitter.com/2hgc7ED7Aq
ಈ ಸುದ್ದಿಯನ್ನೂ ಓದಿ: Maneka Gandhi: ಕಟುಕರಿಗೆ ಇಸ್ಕಾನ್ ಗೋವುಗಳನ್ನು ಮಾರುತ್ತಿದೆ ಎಂದ ಮನೇಕಾ ಗಾಂಧಿ; ಇಸ್ಕಾನ್ ಪ್ರತಿಕ್ರಿಯೆ ಏನು?
ಹಾಲು ಕೊಡದ ಹಸುಗಳ ಮಾರಾಟ
“ಆಂಧ್ರಪ್ರದೇಶದ ಅನಂತಪುರದಲ್ಲಿರುವ ಇಸ್ಕಾನ್ ಗೋಶಾಲೆಯೊಂದಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಹಾಲು ನೀಡದಿರುವ ಒಂದೇ ಒಂದು ಹಸು ಕೂಡ ಇರಲಿಲ್ಲ. ಕರುಗಳು ಕೂಡ ಇರಲಿಲ್ಲ. ಹಾಲು ಕೊಡದ ಎಲ್ಲ ಹಸುಗಳನ್ನು ಇಸ್ಕಾನ್ ಕಟುಕರಿಗೆ ಮಾರಾಟ ಮಾಡಿದೆ ಎಂದೇ ಅರ್ಥ. ಇಸ್ಕಾನ್‌ನವರು ಬೀದಿ ಬೀದಿಯಲ್ಲಿ “ಹರೇ ರಾಮ ಹರೇ ಕೃಷ್ಣ” ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಅವರ ಜೀವನವೇ ಹಾಲಿನ ಮೇಲೆ ಅವಲಂಬಿತವಾಗಿದೆ ಎಂದು ಹೇಳುತ್ತಾರೆ. ಆದರೆ, ಕಟುಕರಿಗೆ ಇವರಷ್ಟು ಮಾರಾಟ ಮಾಡಿದಷ್ಟು ಗೋವುಗಳನ್ನು ಯಾರೂ ಮಾರಾಟ ಮಾಡಿರಲಿಕ್ಕಿಲ್ಲ” ಎಂದಿದ್ದಾರೆ.