Site icon Vistara News

ಹೆಂಡತಿಗೆ ಚಳ್ಳೆಹಣ್ಣು ತಿನ್ನಿಸಿ ಹಣ ಲಪಟಾಯಿಸಿದ ಗಂಡ! ಇದು ಗ್ರಾಹಕ ವ್ಯಾಜ್ಯ ಅಲ್ಲ ಎಂದ ಆಯೋಗ

Pay rs 9 crore including rs 4 crore to applicant Says Consumer Court

ಮುಂಬೈ, ಮಹಾರಾಷ್ಟ್ರ: ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ವಿರುದ್ಧದ ಸಲ್ಲಿಸಲಾಗಿದ್ದ ಸೇವೆಯಲ್ಲಿನ ಕೊರತೆಯ ದೂರನ್ನು ಜಿಲ್ಲಾ ಗ್ರಾಹಕ ಆಯೋಗ (consumer commission) ವಜಾಗೊಳಿಸಿದ್ದು, ದೂರುದಾರರ ಪತಿ ಆನ್‌ಲೈನ್ ವಂಚನೆ ಮಾಡುವುದು ಕ್ರಿಮಿನಲ್ ವಿಷಯವೇ ಹೊರತು ಗ್ರಾಹಕರ ಸಮಸ್ಯೆಯಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ದೂರುದಾರಳ ಪತಿ, ಅವರ ಉಳಿಕೆಯ ಹಣವನ್ನು ಆನ್‌ಲೈನ್ ಟ್ರಾನ್ಸ್‌ಕ್ಷನ್ ಮೂಲಕ ಕಬಳಿಸಿದ್ದರು. ಈ ಸಂಬಂಧ ದೂರುದಾರ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್ ಸೇವೆಯಲ್ಲಿನ ಲೋಪಗಳೇ ತಾವು ವಂಚನೆ ಹೋಗಲು ಕಾರಣ ಎಂದು ಆಪಾದಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಲಯವು, ಈ ಆನ್‌ಲೈನ್ ಟ್ರಾನ್ಸಕ್ಷನ್‌ಲ್ಲಿ ಬ್ಯಾಂಕ್ ಮಧ್ಯಪ್ರವೇಶಿಸಿಲ್ಲ. ಅಲ್ಲದೇ, ಬ್ಯಾಂಕಿನ ಸಹಾಯದಿಂದ ಇಂತಹ ಮೋಸದ ವಹಿವಾಟು ನಡೆಸಲಾಗಿದೆ ಅಥವಾ ವಂಚನೆಯ ಆನ್‌ಲೈನ್ ವಹಿವಾಟಿನಲ್ಲಿ ಬ್ಯಾಂಕ್ ಭಾಗಿಯಾಗಿದೆ ಎಂಬುದಕ್ಕೆ ದೂರುದಾರರು ಯಾವುದೇ ಪುರಾವೆಗಳನ್ನು ಸಲ್ಲಿಸಿಲ್ಲ. ಈ ರೀತಿಯ ಟ್ರಾನ್ಸಕ್ಷನ್‌ಗಳ ಸಹಜ. ಯಾಕೆಂದರೆ, ಆನ್‌ಲೈನ್ ಟ್ರಾನ್ಸಕ್ಷನ್‌ಗೆ ಬೇಕಾದ ಎಲ್ಲ ವಿವಾರಗಳನ್ನು ದೂರುದಾರಳ ಪತಿ ಹೊಂದಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ: ಗ್ರಾಹಕ ಜಾಗೃತಿ ಅಂಕಣ | ಅತಿರಂಜಿತ ಹಾನಿ ತೋರಿಸಿ ಪರಿಹಾರ ಕೇಳಿದರೆ ವಿಮೆ ಸಿಗಲಾರದು

ಗಂಡ ಪತ್ನಿಯ ಉಳಿಕೆ-ಗಳಿಕೆ ಹಣ ಎಗರಿಸಿದ್ದು ಹೇಗೆ?

ಮುಂಬೈನ ಕಾಂದಿವಲಿ ನಿವಾಸಿ ನಿವಿಯಾ ಛಾಬ್ರಾ, ಎಚ್‌ಡಿಎಫ್‌ಸಿ ಬ್ಯಾಂಕ್ ವಿರುದ್ಧ ನೀಡಿದ ದೂರಿನಲ್ಲಿ, ತನ್ನ ಸ್ವಂತ ಪತಿಯಿಂದ ಆನ್‌ಲೈನ್ ವಂಚನೆಗೆ ಬಲಿಯಾಗಿದ್ದೇನೆ ಎಂದು ತಿಳಿಸಿದ್ದಾರೆ. ತನ್ನ ಎಲ್ಲಾ ಉಳಿತಾಯದ ಹಣವನ್ನು ಡ್ರಾ ಮಾಡಿ, ಹೆಚ್ಚುವರಿಯಾಗಿ ₹ 5.11 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಸಾಲವನ್ನು ಪಡೆದಿದ್ದಾರೆ. ಕೂಡಲೇ ಎಲ್ಲ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಪರಾರಿಯಾಗಿದ್ದಾನೆ. ಈ ವಹಿವಾಟು ಅಕ್ಟೋಬರ್ 7, 2017 ಮತ್ತು ಅಕ್ಟೋಬರ್ 16, 2017ರ ನಡುವೆ ನಡೆದಿದೆ.

ಈ ಕುರಿತು ನಿವಿಯಾ ಅವರು ಎಫ್ಐಆರ್ ಕೂಡ ದಾಖಲಿಸಿದ್ದಾರೆ. ಸೇವೆಯಲ್ಲಿನ ಲೋಪಗಳು, ನ್ಯೂನತೆಗಳು ಮತ್ತು ಬ್ಯಾಂಕ್‌ನ ಅನ್ಯಾಯದ ವ್ಯಾಪಾರ ಅಭ್ಯಾಸಗಳಿಂದಾಗಿ ನನ್ನ ಖಾತೆಯಲ್ಲಿನ ಹಣವನ್ನು ಅಕ್ರಮವಾಗಿ ತೆಗೆಯಲು ಸಾಧ್ಯವಾಗಿದೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Exit mobile version