Site icon Vistara News

Vande Bharat Express Train: ಆಗಸ್ಟ್ 25ಕ್ಕೆ ಬೆಂಗಳೂರು-ಹೈದ್ರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ?

Soon Bengaluru To Coimbatore Vande bharat Express train

ನವದೆಹಲಿ: ಬೆಂಗಳೂರು-ಹೈದ್ರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಆಗಸ್ಟ್ 25ರಂದು ಚಾಲನೆ ದೊರೆಯುವ ಸಾಧ್ಯತೆಗಳಿವೆ (Bengaluru-Hyderabad Vande Bharat Express Train) ಎಂದು ಹೇಳಲಾಗುತ್ತಿದೆ. ತೆಲಂಗಾಣದಲ್ಲಿ ಕಾರ್ಯಾಚರಣೆಯಲ್ಲಿರುವ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಿಕಂದರಾಬಾದ್ ಜಂಕ್ಷನ್‌ನಿಂದ (Secunderabad Junction) ಕಾರ್ಯಾಚರಣೆ ನಡೆಸಿದರೆ, ಬೆಂಗಳೂರು-ಹೈದ್ರಾಬಾದ್ ವಂದೆ ಭಾರತ್ ಎಕ್ಸ್‌ಪ್ರೆಸ್ ರೈಲು ಕಚೇಗುಡ ರೈಲು ನಿಲ್ದಾಣದಿಂದ (Kacheguda railway station) ಬೆಂಗಳೂರಿಗೆ ಹೊರಡಲಿದೆ. ಹೈದ್ರಾಬಾದ್‌ನ ಮೊದಲ ವಂದೇ ಭಾರತ್ ರೈಲು 2023ರ ಜನವರಿ 15ರಂದು ಆರಂಭವಾಗಿತ್ತು. ಈ ರೈಲು ಸಿಕಂದರಾಬಾದ್- ವಿಶಾಖಪಟ್ಟಣಂ ಮಧ್ಯೆ ಸಂಪರ್ಕ ಕಲ್ಪಸುತ್ತದೆ. ಇದೀಗ ಹೈದ್ರಾಬಾದ್‌ನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಲಿದೆ(Vande Bharat Express Train).

ಈ ವಂದೆ ಭಾರತ್ ಎಕ್ಸ್‌ಪ್ರೆಸ್ ರೈಲು ಹೈದ್ರಾಬಾದ್ ಮತ್ತು ಬೆಂಗಳೂರು ನಡುವಿನ 615 ಕಿ.ಮೀ ಕ್ರಮಿಸಲಿದೆ. ಪ್ರಯಾಣದ ಅವಧಿ ಸುಮಾರು 8 ಗಂಟೆ 15 ನಿಮಿಷಗಳವರೆಗೆ ಇರಲಿದೆ. ದೇಶದ ಎರಡು ಐಟಿ ಹಬ್‌ಗಳಾಗಿರುವ ಬೆಂಗಳೂರು ಮತ್ತು ಹೈದ್ರಾಬಾದ್‌ ನಗರಗಳ ಮಧ್ಯೆ ಸಂಪರ್ಕ ಕಲ್ಪಿಸುವ ಮೂಲಕ ಈ ರೈಲು ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು-ಹೈದ್ರಾಬಾದ್ ವಂದೇ ಭಾರತ್ ಎಲ್ಲೆಲ್ಲಿ ಸ್ಟಾಪ್?

ನಿರೀಕ್ಷಿತ ಬೆಂಗಳೂರು-ಹೈದ್ರಾಬಾದ್ ವಂದೇ ಭಾರತ್ ರೈಲು ಸೇಡಂ, ರಾಯಚೂರು ಜಂಕ್ಷನ್, ಗುಂತಕಲ್ ಜಂಕ್ಷನ್‌ಗಳಲ್ಲಿ ನಿಲುಗಡೆಯನ್ನು ಹೊಂದಲಿದೆ. ಪ್ರಯಾಣಿಕರಿಗೆ ಈ ನಿಲುಗಡೆಗಲು ಅನುಕೂಲಕತೆಯನ್ನು ಹೆಚ್ಚಿಸಲಿವೆ ಮತ್ತು ಹೈದ್ರಾಬಾದ್ ಮತ್ತು ಬೆಂಗಳೂರು ನಡಿವೆ ಸಂಪರ್ಕವನ್ನು ಹೆಚ್ಚಿಸಲಿವೆ. ಹೈದ್ರಾಬಾದ್‌ನ ಕಚೇಗೌಡ ರೈಲು ನಿಲ್ಧಾಣದಿಂದ ಹೊರಡುವ ಈ ರೈಲು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದವರೆಗೂ ಪ್ರಯಾಣ ಬೆಳೆಸಲಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ಕರೆಯಲಾಗುವ ಟ್ರೈನ್ 10 ಸೆಮಿ ಹೈ ಸ್ಪೀಡ್ ರೈಲು ಆಗಿದ್ದು, ಭಾರತೀಯ ರೈಲ್ವೆ ಇಲಾಖೆ ನಿರ್ವಹಣೆ ಮಾಡುತ್ತದೆ. 2019ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪರಿಚಯಿಸಲಾಯಿತು. ಅಲ್ಲಿಂದ ಈ ರೈಲು ಹೆಚ್ಚು ಜನಪ್ರಿಯವಾಗುತ್ತ ಬಂದಿದೆ.

ಚೆನ್ನೈ-ಮೈಸೂರು ವಂದೇ ಭಾರತ್‌ ರೈಲಿನ ವೇಗ ಹೆಚ್ಚಳ

ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ್‌ (Vande Bharat) ಎಕ್ಸ್‌ಪ್ರೆಸ್‌ ರೈಲಿನ ವೇಗವನ್ನು ಮತ್ತಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಚೆನ್ನೈನಿಂದ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಗಳಲ್ಲಿ ಪ್ರಯಾಣಿಸಬಹುದಾಗಿದೆ. ಚೆನ್ನೈನಿಂದ ಬೆಂಗಳೂರಿಗೆ (Chennai To Bengaluru) ಆಗಮಿಸುವ ಪ್ರಯಾಣಿಕರಿಗೆ ಇದರಿಂದ ಅರ್ಧ ಗಂಟೆ ಸಮಯ ಉಳಿತಾಯವಾಗಲಿದೆ ಎಂದು ತಿಳಿದುಬಂದಿದೆ.

ಅರಕ್ಕೋಣಂ ಹಾಗೂ ಜೋಳಾರ್‌ಪೆಟ್ಟೈ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಗಂಟೆಗೆ 110ರಿಂದ 130 ಕಿಲೋಮೀಟರ್‌ ವೇಗದಲ್ಲಿ ಓಡಿಸಲು ರೈಲ್ವೆ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ. ಇದರಿಂದಾಗಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಪ್ರಯಾಣಿಕರು ಕೇವಲ ನಾಲ್ಕು ಗಂಟೆಗಳಲ್ಲಿ ಬೆಂಗಳೂರು ತಲುಪಬಹುದಾಗಿದೆ. ಸುಮಾರು 25 ನಿಮಿಷ ಪ್ರಯಾಣಿಕರಿಗೆ ಉಳಿತಾಯವಾಗಲಿದೆ.

ಈ ಸುದ್ದಿಯನ್ನೂ ಓದಿ: Vande Bharat Metro: ವಂದೇ ಭಾರತ್ ರೀತಿಯಲ್ಲೇ ರಾಜ್ಯಕ್ಕೆ ವಂದೇ ಮೆಟ್ರೋ ಟ್ರೈನ್! ಬೆಂಗಳೂರಲ್ಲೇ ಚಾಲನೆ?

ಅರಕ್ಕೋಣಂ ಹಾಗೂ ಜೋಳಾರ್‌ಪೆಟ್ಟೈ ಲೇನ್‌ಗಳ ಮರು ಅಭಿವೃದ್ಧಿ ಕಾರ್ಯ ಮುಗಿದಿದೆ. ಇದರಿಂದಾಗಿ ಎರಡೂ ರೈಲು ನಿಲ್ದಾಣಗಳ ಮಧ್ಯೆ ವಂದೇ ಭಾರತ್‌, ಶತಾಬ್ದಿ ಅಥವಾ ಬೃಂದಾವನ್‌ ಎಕ್ಸ್‌ಪ್ರೆಸ್‌ ಸೇರಿ ಹಲವು ರೈಲುಗಳು ಗರಿಷ್ಠ 130 ಕಿಲೋಮೀಟರ್‌ ವೇಗದಲ್ಲಿ ಚಲಿಸಲು ರೈಲ್ವೆ ಇಲಾಖೆಯು ಅನುಮತಿ ನೀಡಿದೆ. ಮುಂದಿನ ವಾರದಿಂದಲೇ ಹೊಸ ಆದೇಶ ಜಾರಿಗೆ ಬರಲಿದ್ದು, ಪ್ರಯಾಣಿಕರ ಸಮಯವು ಉಳಿತಾಯವಾಗಲಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version