Site icon Vistara News

Hyderabad City | ಮಹಿಳಾಸ್ನೇಹಿ ನಗರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡ ಹೈದ್ರಾಬಾದ್!

Hyderabad City @ Woman Friendly city

ಹೈದರಾಬಾದ್: ಮಹಿಳಾ ಸ್ನೇಹಿ ನಗರಗಳ ಪೈಕಿ ತೆಲಂಗಾಣದ ಹೈದ್ರಾಬಾದ್ (Hyderabad City) 4ನೇ ಸ್ಥಾನವನ್ನು ಪಡೆದುಕೊಂಡಿದೆ. ಶೇ.62.47 ಸಿಟಿ ಇನ್‌ಕ್ಲೂಷನ್ ಸ್ಕೋರ್‌ನೊಂದಿಗೆ, ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಟಾಪ್ 25 ಮಹಿಳಾ ಸ್ನೇಹಿ ನಗರಗಳ ಪಟ್ಟಿಯಲ್ಲಿ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ವೈವಿಧ್ಯತೆ, ಇಕ್ವಿಟಿ ಮತ್ತು ಇನ್‌ಕ್ಲೂಷನ್ ಸಲೂಷನ್ ಸಂಸ್ಥೆಯಾದ ಅವತಾರ್ ಗ್ರೂಪ್ ನಡೆಸಿದ ಅಧ್ಯಯನವು ಚೆನ್ನೈ, ಪುಣೆ, ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈಗಳನ್ನು ಭಾರತದ ಅತ್ಯಂತ ಇನ್‌ಕ್ಲೂಸಿವ್ ನಗರಗಳೆಂದು ಗುರುತಿಸಿದೆ.

ಭಾರತದಲ್ಲಿ ಮಹಿಳೆಯರಿಗಾಗಿ ಉನ್ನತ ನಗರಗಳು ಎಂಬ ಶೀರ್ಷಿಕೆಯಡಿ ಅಧ್ಯಯನವನ್ನು ಒಂದು ವರ್ಷಗಳ ಕಾಲ ಅವತಾರ್ ಗ್ರೂಪ್ ನಡೆಸಿದೆ. ಪ್ರಸ್ತುತ ಜೀವನ ಸೂಚ್ಯಂಕ, ಕಾರ್ಮಿಕ ಬಲ ಸಮೀಕ್ಷೆ, ರಾಷ್ಟ್ರೀಯ ಜನಗಣತಿ, ಅಪರಾಧ ದಾಖಲೆಗಳು, ರಾಷ್ಟ್ರೀಯ ಕುಟುಂಬ ಸೇರಿದಂತೆ 200 ಕ್ಕೂ ಹೆಚ್ಚು ಮೂಲಗಳಿಂದ ದತ್ತಾಂಶದ ಅಲ್ಗಾರಿದಮಿಕ್ ಮಾಹಿತಿಯನ್ನು ಈ ಪಟ್ಟಿ ತಯಾರಿಸಲು ಪಡೆದುಕೊಳ್ಳಲಾಗಿದೆ.

ಇಷ್ಟು ಮಾತ್ರವಲ್ಲದೇ, ಆರೋಗ್ಯ ಸಮೀಕ್ಷೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವಾರ್ಷಿಕ ವರದಿ, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಜೊತೆಗೆ ಉದ್ಯೋಗದಾತ ಸಂಸ್ಥೆಗಳು ಮತ್ತು ಮಹಿಳೆಯರೊಂದಿಗೆ ಅವತಾರ್ ಅವರ ಪ್ರಾಥಮಿಕ ಸಂಶೋಧನೆಯ ಮಾಹಿತಿಯನ್ನು ಬಳಸಿಕೊಂಡು ಸಮಗ್ರ ನಗರ ಸೇರ್ಪಡೆ ಸ್ಕೋರ್ (CIS) ಗುರುತಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ | ವಿಸ್ತಾರ Explainer: ಅಬಾರ್ಷನ್‌- ಎಲ್ಲಿ ಓಕೆ, ಎಲ್ಲಿ ನಾಟ್‌ ಓಕೆ?

Exit mobile version