ಹೈದ್ರಾಬಾದ್: ಪ್ರವಾದಿ ವಿರುದ್ದ ಆಕ್ಷೇಪಾರ್ಹ ಮಾತುಗಳನ್ನಾಡಿದ್ದಾನೆ ಎನ್ನಲಾದ ಕಾಲೇಜು ವಿದ್ಯಾರ್ಥಿಯ ಮೇಲೆ ಹಾಸ್ಟೇಲ್‌ನಲ್ಲಿ ಹಲ್ಲೆ ಮಾಡಿದ ಘಟನೆ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೀಡಾದ ವಿದ್ಯಾರ್ಥಿಯನ್ನು ಹಿಮಂಕ್ ಬನ್ಸಲ್ ಎಂದು ಗುರುತಿಸಲಾಗಿದೆ. ಹೈದ್ರಾಬಾದ್‌ನ ಐಎಫ್ಎಚ್ಇನಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದಾರೆ(Hyderabad Student).
ಈ ಘಟನೆಯ ಕುರಿತು ನವೆಂಬರ್ 11ರಂದು ಪೊಲೀಸರಿಗೆ ದೂರು ನೀಡಲಾಗಿದೆ. ನವೆಂಬರ್ 1ರಂದು ಕಾಲೇಜ್ ಕ್ಯಾಂಪಸ್ಸಿನಲ್ಲಿ ನನ್ನ ಹಾಸ್ಟೆಲ್ ರೂಮಿಗೆ ನುಗ್ಗಿದ 15ರಿಂದ 20 ವಿದ್ಯಾರ್ಥಿಗಳು ನನಗೆ ದೈಹಿಕವಾಗಿ ಮತ್ತು ಲೈಂಗಿಕವಾಗಿ ಹಿಂಸೆ ನೀಡಿ, ಹಲ್ಲೆ ಮಾಡಿದ್ದಾರೆಂದು ಎಂದು ಸಂತ್ರಸ್ತ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾನೆ.
ಮುಖಕ್ಕೆ ಗುದ್ದಿದ್ದಾರೆ. ಕಪಾಳಿಗೆ ಹೊಡೆದಿದ್ದಾರೆ. ಕಿಬ್ಬೊಟ್ಟಿಗೆ ಒದ್ದಿದ್ದಾರೆ. ಅಲ್ಲದೇ, ದೇಹದ ಖಾಸಗಿ ಭಾಗವನ್ನು ಹಿಡಿದು ಎಳೆದಾಡಿದ್ದಾರೆ. ಕೆಲವು ಕೆಮಿಕಲ್ ಮತ್ತ ಪೌವಡರ್ ತಿನ್ನಿಸಲು ಮುಂದಾದರು. ಕೆಲವರು ತಮ್ಮ ಖಾಸಗಿ ಅಂಗವನ್ನು ನನ್ನ ಬಾಯಿಗೆ ತರುಕಲು ಪ್ರಯತ್ನಿಸಿದ್ದಾರೆ. ಕೊನೆಗೆ ನನ್ನ ಬಟ್ಟೆ ಹರಿದು, ಬೆತ್ತಲೆ ಮಾಡಿ ಹೊಡೆಯುತ್ತಲೇ ಇದ್ದರು. ಒಬ್ಬರಾದ ಮೇಲೆ ಒಬ್ಬರು ಹಲ್ಲೆ ಮಾಡುತ್ತಿದ್ದರು. ಕೆಲವರು ಸಾಯೋವರೆಗೂ ಹೊಡೆಯಿರಿ ಎಂದು ಚೀರುತ್ತಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾನೆ.
ಇದೇ ವೇಳೆ, ಹಲ್ಲೆ ನಡೆಸಿದ ಫೋಟೋಗಳು, ವಿಡಿಯೋಗಳನ್ನು ಕಾಲೇಜು ಗ್ರೂಪ್‌ನಲ್ಲಿ ಹರಿಬಿಡಲಾಗಿದೆ. ಇದಕ್ಕೂ ಮೊದಲು ವಿದ್ಯಾರ್ಥಿ ಆರೋಪಿತ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಐಎಫ್ಎಚ್ಇ ಕಾಲೇಜು ಅಧಿಕಾರಿಗಳಿಗೆ ದೂರು ನೀಡಿದ್ದರು. ತನ್ನ ಗೆಳತಿಯೊಂದಿಗೆ ಚಾಟ್ ಮಾಡುವಾಗ ಪ್ರವಾದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಎನ್ನಲಾಗಿದೆ. ಈ ಸಂಭಾಷಣೆಯನ್ನು ಆಕೆ ಬಹಿರಂಗ ಮಾಡಿದ್ದಳು. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ | ಪ್ರವಾದಿ ಮೊಹಮ್ಮದ್ಗೆ ಅವಹೇಳನ; ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಪಕ್ಷದಿಂದಲೇ ಅಮಾನತು