ಗುವಾಹಟಿ: ಹಿಂದುಗಳ ಜನಸಂಖ್ಯೆ, ಮದುವೆ ಕುರಿತು ಹೇಳಿಕೆ ನೀಡಿದ್ದ ಅಸ್ಸಾಂ ಸಂಸದ, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್ (Badruddin Ajmal Apology) ಈಗ ಹಿಂದುಗಳ ಕ್ಷಮೆಯಾಚಿಸಿದ್ದಾರೆ.
“ನನ್ನ ಹೇಳಿಕೆ ಬಗ್ಗೆ ನನಗೇ ನಾಚಿಕೆಯಾಗುತ್ತಿದೆ. ನಾನೊಬ್ಬ ಹಿರಿಯ ರಾಜಕಾರಣಿಯಾಗಿ ಅಂತಹ ಮಾತು ಹೇಳಬಾರದಿತ್ತು. ನನಗೆ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಇರಲಿಲ್ಲ. ನನ್ನ ಮಾತಿನಿಂದ ಯಾರಿಗೆಲ್ಲ ನೋವಾಗಿದೆಯೋ, ಅವರೆಲ್ಲರ ಕ್ಷಮೆ ಕೇಳುತ್ತೇನೆ” ಎಂದಿದ್ದಾರೆ.
“ಜನಸಂಖ್ಯೆ ಹೆಚ್ಚಿಸಿಕೊಳ್ಳುವುದರಲ್ಲಿ ಮುಸ್ಲಿಮರಿಗಿಂತ ಹಿಂದುಗಳು ಹಿಂದಿದ್ದಾರೆ. ಹಿಂದುಗಳು ಕೂಡ ೨೦-೨೨ನೇ ವಯಸ್ಸಿಗೆ ಮದುವೆಯಾಗುವ ಮೂಲಕ ಜನಸಂಖ್ಯೆ ಹೆಚ್ಚಿಸಿಕೊಳ್ಳಬೇಕು. ಹಿಂದುಗಳು ೪೦ನೇ ವಯಸ್ಸಿನ ತನಕ ಮೂರ್ನಾಲ್ಕು ಮಹಿಳೆಯರೊಂದಿಗೆ ಅಕ್ರಮ ಸಂಬಂದ ಹೊಂದಿರುತ್ತಾರೆ. ೪೦ನೇ ವಯಸ್ಸಿಗೆ ಮದುವೆಯಾಗುತ್ತಾರೆ. ಆ ಜಾಸ್ತಿ ಮಕ್ಕಳನ್ನು ಪಡೆಯಲು ಆಗುವುದಿಲ್ಲ” ಎಂದು ಬದ್ರುದ್ದೀನ್ ಹೇಳಿದ್ದರು.
ಇದನ್ನೂ ಓದಿ | Muslim Formula | ಜನಸಂಖ್ಯೆ ಹೆಚ್ಚಳದಲ್ಲಿ ಮುಸ್ಲಿಮರಿಗಿಂತ ಹಿಂದುಗಳು ಹಿಂದೆ, ಅಸ್ಸಾಂ ಸಂಸದ ಮೌಲಾನಾ ವಿವಾದ