Site icon Vistara News

Dawoodi Bohra Muslims: ನಾನಿಲ್ಲಿ ಬೋಹ್ರಾ ಮುಸ್ಲಿಂ ಕುಟುಂಬದ ಸದಸ್ಯನಾಗಿ ಬಂದಿರುವೆ ಎಂದ ಮೋದಿ, ಮುಖಂಡರ ಜತೆ ಒಡನಾಟ

Narendra Modi With Bohra Muslims

#image_title

ಮುಂಬೈ: ಇಸ್ಲಾಂನಲ್ಲಿಯೇ ಪ್ರಬಲ ಸಮುದಾಯ ಎನಿಸಿರುವ ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದವರ (Dawoodi Bohra Muslims) ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲಿನಿಂದಲೂ ಉತ್ತಮ ಒಡನಾಟ ಹೊಂದಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಮುಂಬೈನಲ್ಲಿ ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಶಿಕ್ಷಣ ಸಂಸ್ಥೆಯೊಂದನ್ನು ಉದ್ಘಾಟಿಸಿದ ಮೋದಿ, ಮುಸ್ಲಿಂ ಮುಖಂಡರ ಕೈ ಹಿಡಿದು ಓಡಾಡಿದ್ದಾರೆ.

ದಾವೂದಿ ಬೋಹ್ರಾ ಮುಸ್ಲಿಂ ಸಮುದಾಯದ ಮುಖ್ಯಸ್ಥರಾದ ಸೈಯದ್ನಾ ಮುಫದ್ದಲ್‌ ಸೈಫುದ್ದೀನ್‌ ಅವರ ಕೈ ಹಿಡಿದು ಮೋದಿ ಕ್ಯಾಂಪಸ್‌ನಲ್ಲಿ ಓಡಾಡಿದರು. ಅಲ್ಜಮೀಟಸ್-ಸೈಫಿಯಾ (The Saifee Acadey) ಕ್ಯಾಂಪಸ್‌ಅನ್ನು ಉದ್ಘಾಟಿಸಿದರು. ಇದಾದ ಬಳಿಕವೂ ಮುಸ್ಲಿಂ ಮುಖಂಡರ ಜತೆ ಮೋದಿ ಆತ್ಮೀಯವಾಗಿ ಸಂವಾದ ನಡೆಸಿದರು.

ಇದನ್ನೂ ಓದಿ: Global Investors Summit: ಉತ್ತರ ಪ್ರದೇಶದ ದೃಷ್ಟಿಕೋನ ಬದಲಾಗಿದೆ, ಹೂಡಿಕೆದಾರರಿಗೆ ಸ್ವಾಗತ ಎಂದ ಪ್ರಧಾನಿ ಮೋದಿ

ಕ್ಯಾಂಪಸ್‌ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, “ಸೈಯದ್ನಾ ಸಾಹೇಬರ ನಾಲ್ಕು ಪೀಳಿಗೆಗಳು ನನಗೆ ಗೊತ್ತು. ನಾನಿಲ್ಲಿ ಸೈಯದ್ನಾ ಸಾಹೇಬರ ಕುಟುಂಬದ ಸದಸ್ಯರಲ್ಲಿ ಒಬ್ಬನಾಗಿ ಬಂದಿದ್ದೇನೆ. ನೀವು ಇಂತಹ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ 150 ವರ್ಷದ ಕನಸನ್ನು ನನಸು ಮಾಡಿದ್ದೀರಿ” ಎಂದು ಹೇಳಿದ್ದಾರೆ.

Exit mobile version