Site icon Vistara News

Viral Video | ನಾನು ಪುರುಷ, ನನ್ನ ಬಾಡಿ ಟಚ್‌ ಮಾಡದಿರಿ ಎಂದು ಸುವೇಂದು ಅಧಿಕಾರಿ ಹೇಳಿದ್ದು ಯಾರಿಗೆ?

Suvendu

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರ ವಾಹನಕ್ಕೇ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದು, ಗುಂಪು ಚದುರಿಸಲು ಅಶ್ರುವಾಯು, ಜಲಫಿರಂಗಿ ಬಳಸಿದ್ದಾರೆ. ಇದರ ಬೆನ್ನಲ್ಲೇ, ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಅವರು ಪೊಲೀಸರ ಜತೆ ನಡೆಸಿದ ಸಂಭಾಷಣೆಯನ್ನು ತೃಣಮೂಲ ಕಾಂಗ್ರೆಸ್‌ ವ್ಯಂಗ್ಯ ಮಾಡಿದೆ. ಸುವೇಂದು ಅಧಿಕಾರಿ ಹೇಳಿಕೆ ಇರುವ ವಿಡಿಯೊ ವೈರಲ್‌ (Viral Video) ಆಗಿದೆ.

ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಕಾರಣ ಒಂದಷ್ಟು ಮಹಿಳಾ ಪೊಲೀಸರು ಸುವೇಂದು ಅಧಿಕಾರಿ ಅವರನ್ನು ಬಂಧಿಸಿ, ವಾಹನಕ್ಕೆ ಹತ್ತಿಸಲು ಮುಂದಾಗಿದ್ದಾರೆ. ಇದರಿಂದ ಕುಪಿತಗೊಂಡ ಸುವೇಂದು, “ನೀವು ಮಹಿಳೆ, ನಾನು ಪುರುಷ. ನೀವು ನನ್ನ ದೇಹವನ್ನು ಮುಟ್ಟದಿರಿ. ನಾನು ಪ್ರತಿಯೊಬ್ಬ ಹೆಣ್ಣುಮಗಳಲ್ಲೂ ದುರ್ಗೆಯನ್ನು ಕಾಣುತ್ತೇನೆ” ಎಂದು ಹೇಳಿದ್ದಾರೆ.

ಸುವೇಂಧು ಅಧಿಕಾರಿ ಹೇಳಿರುವ ವಿಡಿಯೊವನ್ನು ಟಿಎಂಸಿ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. “೫೬ ಇಂಚಿನ ಎದೆಯ ಮಾದರಿ ಬಯಲಾಗಿದೆ. ಇವತ್ತಿನ ಘೋಷಣೆ ಎಂದರೆ, ನಾನು ಪುರುಷ, ನನ್ನನ್ನು ಮುಟ್ಟದಿರಿ ಎಂಬುದಾಗಿದೆ” ಎಂದು ಟಿಎಂಸಿ ಟಾಂಗ್‌ ನೀಡಿದೆ.

ಇದನ್ನೂ ಓದಿ | BJP March | ಬಂಗಾಳದಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಪೊಲೀಸರ ವಾಹನಕ್ಕೆ ಬೆಂಕಿ, ಸುವೇಂದು ಅಧಿಕಾರಿ ಬಂಧನ

Exit mobile version