ನವದೆಹಲಿ: ಮುಸ್ಲಿಮ್ ವಿದ್ಯಾರ್ಥಿಗೆ (Muslim Boy) ಇತರ ವಿದ್ಯಾರ್ಥಿಗಳಿಂದ ಕಪಾಳಮೋಕ್ಷ ಮಾಡಿಸಿದ್ದ ಶಾಲಾ ಶಿಕ್ಷಕಿ (UP School Teacher) ವಿರುದ್ಧ ಪ್ರಕರಣ ದಾಖಲಾಗಿದೆ. ಕೋಮು ಭಾವನೆ ಕೆರಳಿಸಿದ್ದ ಈ ವಿಡಿಯೋ ಭಾರೀ ವೈರಲ್ (Viral video) ಆಗಿತ್ತು ಮತ್ತು ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು. ಮುಜಾಫರ್‌ನಗರದ ನೇಹಾ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರೂ ಆಗಿರುವ ತ್ರಿಪ್ತಾ ತ್ಯಾಗಿ ಅವರು 7 ವರ್ಷದ ಬಾಲಕನಿಗೆ ಕಪಾಳಮೋಕ್ಷ ಮಾಡುವಂತೆ ಹೇಳಿದ್ದರು. ಈ ವೇಳೆ, ಕೋಮುವಾದಿ ಟೀಕೆಗಳನ್ನು ಮಾಡುತ್ತಿದ್ದ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದಾಗ್ಯೂ, ತ್ರಿಪ್ತಾ ತ್ಯಾಗಿ ಅವರು ತಮ್ಮ ಈ ಅತಿರೇಕದ ಕೃತ್ಯಕ್ಕೆ “ನಾಚಿಕೆಪಡುವುದಿಲ್ಲ” (Not Ashamed) ಎಂದು ಹೇಳಿದ್ದಾರೆ. ಅಲ್ಲದೇ ಮಕ್ಕಳನ್ನು ನಿಯಂತ್ರಣ ಮಾಡಲು ಈ ರೀತಿಯ ಕ್ರಮಗಳು ಅಗತ್ಯ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಾನೂನುಗಳು ಏನೇ ಇರಲಿ. ಶಾಲೆಯಲ್ಲಿ ಮಕ್ಕಳನ್ನು ನಾವು ನಿಯಂತ್ರಿಸಬೇಕಾಗುತ್ತದೆ. ನಾವು ಈ ರೀತಿಯಾಗಿಯೇ ಮಕ್ಕಳನ್ನು ನಿಯಂತ್ರಿಸುತ್ತೇವೆ ಎಂದು ತ್ರಿಪ್ತಾ ತ್ಯಾಗಿ ತಿಳಿಸಿದ್ದಾರೆ. ಆದರೆ, ಈ ಮೊದಲು ತಮ್ಮ ವಿರುದ್ಧ ಎಲ್ಲ ಆರೋಪಗಳನ್ನು ನಿರಾಕರಿಸಿದ್ದ ತ್ಯಾಗಿ, ಇದೊಂದು ತೀರಾ ಸಣ್ಣ ಘಟನೆ ಎಂದು ಹೇಳಿದ್ದರು. ಇದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತಿದ್ದೇನೆ, ಆದರೆ ಇದು ಅನಗತ್ಯವಾಗಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದರು.
ಪೊಲೀಸ್ ತನಿಖೆ
ಮುಸ್ಲಿಮ್ ಮಕ್ಕಳು ತಾಯಂದಿರು ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಗಮನ ನೀಡುವುದಿಲ್ಲ. ಹಾಗಾಗಿ, ಅವರ ಶೈಕ್ಷಣಿಕ ಜೀವನವೂ ಸಂಪೂರ್ಣವಾಗಿ ಹಾಳಾಗುತ್ತದೆ ಎಂದು ಶಿಕ್ಷಕಿ ತೃಪ್ತಾ ತ್ಯಾಗಿ ಹೇಳಿರುವುದು ಸಾಬೀತಾಗಿದೆ ಎಂದು ಈ ಪ್ರಕರಣ ತನಿಖೆ ನಡೆಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ, ಶಿಕ್ಷಕಿಯ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ ಎಂದು ಮುಜಾಫರ್ ನಗರ ಜಿಲ್ಲಾಧಿಕಾರಿ ಅರವಿಂದ್ ಮಲ್ಲಪ್ಪ ಬಂಗಾರಿ ಅವರು ತಿಳಿಸಿದ್ದಾರೆ.
ಈ ಪ್ರಕರಣದ ಕುರಿತು ನಾವು ಪೂರ್ತಿಯಾಗಿ ತನಿಖೆ ಮಾಡದ್ದೇವೆ. ಬಾಲಕನ ತಂದೆ ದೂರು ನೀಡಿದ್ದಾರೆ. ಶಿಕ್ಷಕಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಲ್ಲದೇ, ಇಲಾಖಾವಾರು ಕ್ರಮ ಕೂಡ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅರವಿಂದ್ ಮಲ್ಲಪ್ಪ ಬಂಗಾರಿ ಅವರು ತಿಳಿಸಿದ್ದಾರೆ. ಗಂಟೆಗಟ್ಟಲೇ ಮಗುವನನ್ನು ನಿಲ್ಲಿಸಿ ಹೊಡೆಯಲಾಗಿದ ಎಂದು ಸಂತ್ರಸ್ತ ಬಾಲಕನ ತಂದೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: School Teacher : ಮುಸ್ಲಿಂ ಬಾಲಕನಿಗೆ ಬೇರೆ ಮಕ್ಕಳಿಂದ ಕಪಾಳಕ್ಕೆ ಹೊಡೆಸಿದ ಟೀಚರ್!
ಮಗುವನ್ನು ಶಾಲೆಗೆ ಕಳುಹಿಸದಿರಲು ನಿರ್ಧಾರ
ಸಂತ್ರಸ್ತೆಯ ತಂದೆ ಸ್ಥಳೀಯ ವರದಿಗಾರರಿಗೆ ತನ್ನ ಮಗುವನ್ನು ಶಾಲೆಗೆ ಕಳುಹಿಸುವುದಿಲ್ಲ ಅಥವಾ ಪ್ರಕರಣ ದಾಖಲಿಸುವುದಿಲ್ಲ ಎಂದು ಹೇಳಿದ್ದಾರೆ. ನಾನು ನನ್ನ ಮಗುವನ್ನು ಮತ್ತೆ ಆ ಶಾಲೆಗೆ ಕಳುಹಿಸುವುದಿಲ್ಲ ಮತ್ತು ನಾನು ಸಲ್ಲಿಸಿದ ಶುಲ್ಕವನ್ನು ಅವರು ಹಿಂದಿರುಗಿಸುತ್ತಾರೆ ಎಂದು ಹೇಳಿದ್ದಾರೆ. ಶಿಕ್ಷಕರು ಮಕ್ಕಳ ನಡುವೆ ದ್ವೇಷವನ್ನು ಸೃಷ್ಟಿಸಿದ್ದಾರೆ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ. ಮುಜಾಫರ್ ನಗರದ ಪ್ರಾಥಮಿಕ ಶಿಕ್ಷಣ ಅಧಿಕಾರಿ ಶುಭಂ ಶುಕ್ಲಾ ಅವರು ಶಾಲೆಯ ಆಡಳಿತ ಮಂಡಳಿಗೆ ಪತ್ರ ಬರೆದು ಪ್ರತಿಕ್ರಿಯೆ ಕೋರಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.