ಭೋಪಾಲ್: ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾದ ‘ಬೇಷರಮ್ ರಂಗ್’ ಹಾಡಿನ ವಿವಾದ (Pathan Controversy) ಮತ್ತಷ್ಟು ಹೆಚ್ಚಾಗುತ್ತಿದೆ. ಬಿಜೆಪಿ ನಾಯಕರು, ಹಿಂದು ಸಂಘಟನೆಗಳ ಮುಖಂಡರು ಹಾಡಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೇಷರಮ್ ರಂಗ್ ಎಂಬ ಪದ ಹಾಗೂ ನಟಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ಧರಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್ ಗಿರೀಶ್ ಗೌತಮ್ ಅವರು ನಟ ಶಾರುಖ್ ಖಾನ್ ಅವರಿಗೆ ಸವಾಲು ಎಸೆದಿದ್ದಾರೆ.
“ಶಾರುಖ್ ಖಾನ್ ಅವರೇ, ನಾನು ನಿಮಗೆ ಕೇಳುತ್ತಿದ್ದೇನೆ. ನಿಮಗೂ 23-24 ವರ್ಷದ ಮಗಳಿದ್ದಾಳೆ. ನೀವು, ನಿಮ್ಮ ಮಗಳು ಹಾಗೂ ದೀಪಿಕಾ ಪಡುಕೋಣೆ ಕುಳಿತು ಸಿನಿಮಾ ನೋಡುತ್ತೀರಾ” ಎಂದು ಸವಾಲು ಎಸೆದಿದ್ದಾರೆ. ಇತ್ತೀಚೆಗಷ್ಟೇ, ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರೂ ಹಾಡಿನ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು.
ಸಿನಿಮಾ ಬಿಡುಗಡೆಗೆ ಮುನ್ನವೇ ವಿವಾದ ಉಂಟಾಗಿರುವುದು ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಸೇರಿ ಇಡೀ ಚಿತ್ರತಂಡಕ್ಕೆ ತಲೆನೋವಾಗಿದೆ. ಸಿನಿಮಾದಲ್ಲಿ ದೇಶಭಕ್ತಿ ಸಾರುವ ಅಂಶವಿದೆ ಎಂದು ಈಗಾಗಲೇ ಶಾರುಖ್ ಖಾನ್ ಅವರು ಸ್ಪಷ್ಟನೆ ನೀಡಿದರೂ ಯಾರೂ ಕೇಳುತ್ತಿಲ್ಲ.
ಇದನ್ನೂ ಓದಿ | Shahrukh Khan | ʻದೇಶಭಕ್ತಿ ಸಾರುವ ಚಿತ್ರ ಪಠಾಣ್ʼ: ಟ್ವೀಟ್‌ನಲ್ಲಿ ಅಭಿಮಾನಿಗಳ ಜತೆ ಶಾರುಖ್ ಹೇಳಿದ್ದೇನು?