Site icon Vistara News

Meghalaya Election 2023: ನಾನು ಗೋಮಾಂಸ ತಿನ್ನುತ್ತೇನೆ; ಬಿಜೆಪಿಯಲ್ಲೇ ಇದ್ದೇನೆ: ಮೇಘಾಲಯ ಬಿಜೆಪಿ ಅಧ್ಯಕ್ಷ

I eat beef and i am in bjp Says Meghalaya BJP president

ಗುವಾಹಟಿ: ಮೇಘಾಲಯದಲ್ಲಿ 27ಕ್ಕೆ ವಿಧಾನಸಭೆ ಚುನಾವಣೆಯಲ್ಲಿ ನಡೆಯಲಿದ್ದು, ಪ್ರಚಾರ ಜೋರಾಗಿದೆ. ಹಾಗೆಯೇ ವಾಕ್ಸಾಮರಗಳು ನಡೆಯುತ್ತಿವೆ. ತಮ್ಮ ಮೈತ್ರಿಕೂಟದ ಮಾಜಿ ಪಾರ್ಟನರ್ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ವಿರುದ್ಧ ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಅಸ್ಸಾಮ್ ಸಿಎಂ ಹಿಮಂತ್ ಬಿಸ್ವ ಶರ್ಮಾ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎನ್‌ಪಿಪಿ ಆಡಳಿತದಲ್ಲಿ ಮೇಘಾಲಯವು ದೇಶದ ಅತಿ ಭ್ರಷ್ಟ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಅಮಿತ್ ಶಾ ಟೀಕಿಸಿದ್ದಾರೆ. ಹಾಗೆಯೇ, ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷ ಅರ್ನೆಸ್ಟ್ ಮಾವ್ರಿ(Ernest Mawrie) ಅವರು, ಗೋ ಮಾಂಸ ಭಕ್ಷಣೆಗೆ ಬಿಜೆಪಿ ಯಾವುದೇ ನಿರ್ಬಂಧ ವಿಧಿಸಿಲ್ಲ. ನಾನು ಗೋ ಮಾಂಸ ತಿನ್ನುತ್ತೇನೆ ಮತ್ತು ಬಿಜೆಪಿಯಲ್ಲೇ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ(Meghalaya Election 2023:).

ಐಎಎನ್ಎಸ್‌‌ಗೆ ನೀಡಿದ ಸಂದರ್ಶನದಲ್ಲಿ ಅರ್ನೆಸ್ಟ್ ಮಾವ್ರಿ ಅವರು, ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಹಾಗಿದ್ದೂ, ಯಾವುದೇ ಚರ್ಚುಗಳ ಮೇಲೆ ದಾಳಿಗಳು ನಡೆದಿಲ್ಲ. ಗೋಮಾಂಸ ತಿನ್ನುವುದಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ನಾನು ಗೋ ಮಾಂಸ ತಿನ್ನುತ್ತೇನೆ, ಬಿಜೆಪಿಯಲ್ಲೇ ಇದ್ದೇನೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಮೇಘಾಲಯದ ಜನತೆ ಸಂಪೂರ್ಣವಾಗಿ ಬಿಜೆಪಿಯ ಜತೆಗಿದ್ದಾರೆ. ಮಾರ್ಚ್ 2ಕ್ಕೆ ಈ ಬಗ್ಗೆ ತಮಗೆ ಗೊತ್ತಾಗಲಿದೆ ಎಂದು ಅವರು ಹೇಳಿದ್ದಾರೆ.

60 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ

ಬಿಜೆಪಿಯ ಈ ಬಾರಿ ಮೇಘಾಲಯದ 60 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ನಾವು ಅತ್ಯುತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದೇವೆ. ಚುನಾವಣೆ ಫಲಿತಾಂಶದ ನಂತರ ನಾವು ಭ್ರಷ್ಟಾಚಾರದಲ್ಲಿ ಮುಳುಗದ ರಾಜಕೀಯ ಪಕ್ಷಗಳನ್ನು ಹುಡುಕಬಹುದು ಎಂದು ಅವರು ಹೇಳಿದ್ದಾರೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಎಸಗಿದೆ. ಬಿಜೆಪಿಯು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣತೆಯನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Tripura Election 2023: ತ್ರಿಪುರಾದಲ್ಲಿ ಶೇ.81 ಮತದಾನ, ಒಟ್ಟಾರೆ ಶಾಂತಿಯುತ ಚುನಾವಣೆ, ಮಾರ್ಚ್ 2ಕ್ಕೆ ರಿಸಲ್ಟ್ ಪ್ರಕಟ

ಫೆಬ್ರವರಿ 27ಕ್ಕೆ ಮೇಘಾಲಯದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮೇಘಾಲಯದಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿವೆ. 2023 ಮಾರ್ಚ್ 2ಕ್ಕೆ ಚುನಾವಣಾ ರಿಸಲ್ಟ್ ಪ್ರಕಟವಾಗಲಿದೆ.

Exit mobile version