ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮಲಗಿದ 30 ಸೆಕೆಂಡ್‌ಗಳಲ್ಲಿ ನಿದ್ರೆಗೆ ಜಾರುತ್ತಾರೆ(I fall asleep within 30 second) ಎಂದು ಸೋಮವಾರ ಹೇಳಿಕೊಂಡಿದ್ದಾರೆ. ನಿದ್ರೆಗೆ ಅಡ್ಡಿ ಉಂಟು ಮಾಡುವ ಸ್ಕ್ರೀನ್ ಟೈಮ್ ವಿರುದ್ಧ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪರೀಕ್ಷಾ ಪೇ ಚರ್ಚಾ (Pariksha Pe Charcha) ಸಂವಾದದ ವೇಳೆ ಅವರು ಈ ಮಾಹಿತಿ ನೀಡಿದರು.
ದಿಲ್ಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದ್ದ ‘ಪರೀಕ್ಷಾ ಪೇ ಚರ್ಚಾ’ದ ಏಳನೇ ಆವೃತ್ತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಸ್ಕ್ರೀನ್ ಟೈಮ್ ನಿದ್ರೆಯ ಸಮಯವನ್ನು ಹಾಳು ಮಾಡುತ್ತದೆ ಎಂದು ತಿಳಿಸಿದರು.
ಸಮತೋಲಿತ ಜೀವನಶೈಲಿಯನ್ನು ಕಾಪಾಡಿಕೊಳ್ಳಲು, ಎಲ್ಲಕ್ಕಿಂತ ಹೆಚ್ಚಿನದನ್ನು ತಪ್ಪಿಸಬೇಕು. ಆರೋಗ್ಯಕರ ದೇಹವು ಆರೋಗ್ಯಕರ ಮನಸ್ಸಿಗೆ ಮುಖ್ಯವಾಗಿದೆ ಮತ್ತು ಅದಕ್ಕೆ ಕೆಲವು ದಿನಚರಿಗಳು, ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯುವುದು ಮತ್ತು ನಿಯಮಿತ ಮತ್ತು ಸಂಪೂರ್ಣ ನಿದ್ರೆಯನ್ನು ಪಡೆಯುವುದು ಅಗತ್ಯವಾಗಿರುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ಸ್ಕ್ರೀನ್ ಟೈಮ್‌ನಂಥ ಅಭ್ಯಾಸಗಳು ಅಗತ್ಯವಿರುವ ನಿದ್ರೆಯ ಸಮಯವನ್ನು ತಿನ್ನುತ್ತವೆ. ಸೂಕ್ತ ನಿದ್ರೆಯು ಆರೋಗ್ಯಕ್ಕೆ ತುಂಬಾ ಮುಖ್ಯ ಎಂದು ಆಧುನಿಕ ಆರೋಗ್ಯ ವಿಜ್ಞಾನವು ಹೇಳಿದೆ ಎಂದು ಹೇಳಿದರು.
ನಾನು ಮಲಗಿದ 30 ಸೆಕೆಂಡ್‌ಗಳಲ್ಲಿ ಆಳವಾದ ನಿದ್ರೆಗೆ ಹೋಗುವ ದಿನಚರಿಯನ್ನು ಬೆಳೆಸಿಕೊಂಡು ಬಂದಿದ್ದೇನೆ. ಎಚ್ಚರವಾಗಿರುವಾಗ ಸಂಪೂರ್ಣವಾಗಿ ಎಚ್ಚರವಾಗಿರುವುದು ಮತ್ತು ನೀವು ನಿದ್ದೆ ಮಾಡುವಾಗ ಉತ್ತಮ ನಿದ್ರೆಯನ್ನು ತೆಗೆದುಕೊಳ್ಳುವುದರಿಂದ ಸಮತೋಲನವನ್ನು ಸಾಧಿಸಬಹುದು ಎಂದು ಮೋದಿ ಹೇಳಿದರು.
ಈ ಸುದ್ದಿಯನ್ನೂ ಓದಿ: Pariksha Pe Charcha 2024: ಟೀಚಿಂಗ್ ಬರೀ ಉದ್ಯೋಗವಲ್ಲ; ಶಿಕ್ಷಕರಿಗೆ ಮೋದಿ ಟಿಪ್ಸ್